ಸಿಎಂ ವಿರುದ್ಧ ಹಕ್ಕುಚ್ಯುತಿಗೆ ಪ್ರಸ್ತಾಪ


Team Udayavani, Feb 21, 2018, 6:05 AM IST

180220kpn82.jpg

ವಿಧಾನಸಭೆ: ವಿಧಾನಸಭೆ ಸಭಾನಾಯಕರಾದ ಮುಖ್ಯಮಂತ್ರಿ ವಿರುದ್ಧವೇ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪಿಸಲು ಮುಂದಾದ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೋರಿದರು. ವಿಷಯ ಪ್ರಸ್ತಾಪಕ್ಕೆ ಮಾತ್ರ ಸಭಾಧ್ಯಕ್ಷರು ಅನುಮತಿ ನೀಡಿರುವುದನ್ನೇ ಅವಕಾಶವನ್ನಾಗಿ ಬಳಸಿಕೊಂಡರು. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತವರ ಪುತ್ರ ಡಾ.ಯತೀಂದ್ರ ಹಾಗೂ ಸಿಎಂ ಆಪ್ತ ಮರೀಗೌಡ ವಿರುದಟಛಿ ಹರಿಹಾಯ್ದರು.

ಸ್ಥಳೀಯ ಶಾಸಕರನ್ನು ಕಡೆಗಣಿಸಿ ತಮ್ಮ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಗ ಡಾ.ಯತೀಂದ್ರ ಹಾಜರಿರುವ ಫೋಟೊವನ್ನು ಸಾಕ್ಷ್ಯಾಧಾರವಾಗಿ ನೀಡಿದ ದೇವೇಗೌಡರು, ಸರ್ಕಾರದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರನ್ನು ನಿರ್ಲಕ್ಷಿಸಿ ಮುಖ್ಯಮಂತ್ರಿಗಳ ಪುತ್ರ ಭಾಗವಹಿಸಲು ಯಾವ ಸಂವಿಧಾನದಲ್ಲಿ ಅಧಿಕಾರವಿದೆ..? ಬೇಲಿಯೇ ಎದ್ದು
ಹೊಲ ಮೇಯ್ದರೆ ಹೇಗೆ…? ಎಂದು ಪ್ರಶ್ನೆಗಳ ಸುರಿಮಳೆಗರೆದರು. ತಮ್ಮ ಶಾಸಕ ಸ್ಥಾನದ ಹಕ್ಕಿಗೆ ಚ್ಯುತಿ
ಬಂದಿದೆ, ಸಭಾಧ್ಯಕ್ಷರು ರಕ್ಷಣೆಗೆ ಬರಬೇಕೆಂದು ಮನವಿ ಮಾಡಿದರು. 

ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿಗಳು ಕುಳಿತಲ್ಲಿಂದಲೇ ರಕ್ಷಣೆ ಕೊಡಿ ಎಂದು ಸಭಾಧ್ಯಕ್ಷರಿಗೆ ಹೇಳಿದಾಗ ಪ್ರತಿಪಕ್ಷ ಸದಸ್ಯರು ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದರು. ಮುಖ್ಯಮಂತ್ರಿಗಳ ಈ ಮಾತಿನಿಂದ ಕೆರಳಿದ ಪ್ರತಿಪಕ್ಷ ಬಿಜೆಪಿ ಸದಸ್ಯರು, “ರಕ್ಷಣೆ ಕೊಡಿ’ ಎನ್ನುವ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿರೋಧ ಹೆಚ್ಚಾದಾಗ ಮುಖ್ಯಮಂತ್ರಿಗಳು ರಕ್ಷಣೆ ಕೊಡಿ ಎಂದು ಹೇಳಿದ್ದರಲ್ಲಿ ತಪ್ಪೇನಿದೆ ..? ಎಂದು ಬಿಜೆಪಿ ಶಾಸಕರನ್ನು ಮರು ಪ್ರಶ್ನಿಸಿ ತಾವಾಡಿದ ಮಾತನ್ನು ಸಮರ್ಥಿಸಿಕೊಂಡರು.

ಕ್ರಮ ಕೈಗೊಳ್ಳಿ: ಜಿ.ಟಿ.ದೇವೇಗೌಡ ಆರೋಪಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸರ್ಕಾರಿ ಕಾರ್ಯಕ್ರಮಕ್ಕೆ ತಮ್ಮ ಮಗ ಹೋಗಿರುವುದು ನನಗೆ ಗೊತ್ತಿಲ್ಲ. ಸರ್ಕಾರದಿಂದ ನಡೆಯುವ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರೇ ವಹಿಸಬೇಕು ಎನ್ನುವುದು ಕಾನೂನು. ತಮ್ಮ ಮಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿಗಳಿಗೆ ಹೋಗಿರಬಹುದು ಅಷ್ಟೆ. ಒಂದು ವೇಳೆ ಕಾನೂನು ಉಲ್ಲಂಘನೆಯಾಗಿದ್ದರೆ ಕ್ರಮ ತೆಗೆದುಕೊಳ್ಳಬಹುದೆಂದು ತಿಳಿಸಿದರು.

ಮುಖ್ಯಮಂತ್ರಿಗಳ ಹೇಳಿಕೆ ನಂತರ ಸ್ಪೀಕರ್‌ ಕೋಳಿವಾಡ ಘಟನೆ ಕುರಿತು ವರದಿ ತರಿಸಿಕೊಂಡು ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಸುಮ್ಮನಾಗದ ಜಿ.ಟಿ.ದೇವೇಗೌಡರು ವರದಿ ಯಾವಾಗ ತರಿಸಿಕೊಳ್ಳುತ್ತೀರಿ..? ಅಷ್ಟೊತ್ತಿಗೆ ಅಧಿವೇಶನವೇ ಮುಗಿದುಹೋಗುತ್ತದೆ, ಈಗಲೇ ತಪ್ಪಿತಸ್ಥರ ಮೆಲೆ ಕ್ರಮತೆಗೆದುಕೊಳ್ಳಬೇಕೆಂದುಆಗ್ರಹಿಸಿದರು. ಒಂದೇ ದಿನದಲ್ಲಿ ವರದಿ ತರಿಸಿಕೊಂಡು ಪರಿಶೀಲನೆ ನಡೆಸುವುದಾಗಿ ಸಭಾಧ್ಯಕ್ಷರು ಹೇಳಿ  ಕೆರಳಿದ್ದ ಜಿ.ಟಿ ದೇವೇಗೌಡರನ್ನು ಸುಮ್ಮನಾಗಿಸಿದರು.

ನಾರಾಯಣಸ್ವಾಮಿಯಿಂದಲೂ ಆರೋಪ
ಈ ನಡುವೆ ಹೆಬ್ಟಾಳ ಕ್ಷೇತ್ರದ ಶಾಸಕ ನಾರಾಯಣಸ್ವಾಮಿಯವರು ಕ್ಷೇತ್ರ ದಲ್ಲಿಯೂ ನನ್ನನ್ನು ಕಡೆಗಣಿಸಿ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ವಿಧಾನ ಪರಿಷತ್‌ ಸದಸ್ಯ ಭೈರತಿ ಸುರೇಶ್‌ ಕುಮ್ಮಕ್ಕಿನಿಂದ
ಅಲ್ಪಸಂಖ್ಯಾತರ ಕಾಲೋನಿಯಲ್ಲಿ 4 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಆರೋಪಿಸಿದರು.

ಈ ಆದೇಶಕ್ಕೆ ಕೂಡಲೇ ತಡೆ ನೀಡಬೇಕು. ಶಾಸಕರನ್ನು ನಿರ್ಲಕ್ಷಿಸಿ ಆದೇಶ ಹೊರಡಿಸಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಪಟ್ಟುಹಿಡಿದು ಧರಣಿ ನಡೆಸಿದರು. ಶಾಸಕ ನಾರಾಯಣಸ್ವಾಮಿ ಮತ್ತು ಸಚಿವ ಜಾರ್ಜ್‌ ನಡುವೆ ಮಾತಿನ ಚಕಮಕಿ ನಡೆಯಿತು. 

ವಿಧಾನ ಪರಿಷತ್‌ ಸದಸ್ಯರಿಗೂ ಕೆಲವು ಅಧಿಕಾರಗಳಿವೆ. ಅವರೂ ತಮ್ಮ ಹಕ್ಕುಚ್ಯುತಿಯಾಗಿದೆ ಅಂದರೆ ಏನುಮಾಡುತ್ತೀರೆಂದು ಬಿಜೆಪಿ ಶಾಸಕರ ಕಾಲೆಳೆದರು. ಆಗ ಹಿರಿಯ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಬಜೆಟ್‌ ಅಂಗೀಕರಿಸುವವರು ನಾವು. ಹಣಕಾಸಿನ ಬಿಲ್‌ ಪಾಸು ಮಾಡುವವರು ನಾವು.

ವಿಧಾನ ಪರಿಷತ್‌ ಸದಸ್ಯರು ಏತಕ್ಕಾಗಿ ವಿರೋಧ ಮಾಡುತ್ತಾರೆಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಸಚಿವ ಜಾರ್ಜ್‌ ಅವರು ಮೇಲ್ಮನೆ ಸದಸ್ಯರಿಗೆ ಮಹತ್ವ ನೀಡಬೇಕಾಗಿಲ್ಲ ಎನ್ನುವುದಕ್ಕೆ ಮೊದಲು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ
ಈಶ್ವರಪ್ಪ ಅವರನ್ನು ಕೇಳಿ ಮಾತನಾಡಿ ಎಂದು ತಿರುಗೇಟು ನೀಡಿದರು.

ನಾರಾಯಣಸ್ವಾಮಿ ಪ್ರಕರಣದಲ್ಲೂಒಂದೇ ದಿನದಲ್ಲಿ ವರದಿ ಪಡೆದು ಹಕ್ಕುಚ್ಯುತಿ ಪ್ರಸ್ತಾಪದ ಬಗ್ಗೆ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸಭಾಧ್ಯಕ್ಷರು ತಿಳಿಸಿ ಚರ್ಚೆಗೆ ತೆರೆಯೆಳೆದರು.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

KEA: ಎಂಎಸ್ಸಿ ನರ್ಸಿಂಗ್‌: ಅರ್ಜಿ ಸಲ್ಲಿಕೆಗೆ ಡಿ. 2 ಕೊನೆ ದಿನ

KEA: ಎಂಎಸ್ಸಿ ನರ್ಸಿಂಗ್‌: ಅರ್ಜಿ ಸಲ್ಲಿಕೆಗೆ ಡಿ. 2 ಕೊನೆ ದಿನ

Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ

Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.