Bengaluru: ವೇಶ್ಯಾವಾಟಿಕೆ ದಂಧೆ: 9 ಆರೋಪಿಗಳ ಬಂಧನ


Team Udayavani, Jan 30, 2025, 11:01 AM IST

Bengaluru: ವೇಶ್ಯಾವಾಟಿಕೆ ದಂಧೆ: 9 ಆರೋಪಿಗಳ ಬಂಧನ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐಷಾರಾಮಿ ಹೋಟೆಲ್‌ಗ‌ಳ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ದಾಳಿ ನಡೆಸಿ ವಿದೇಶಿ ಹಾಗೂ ಹೊರ ರಾಜ್ಯದ ಮಹಿಳೆಯರನ್ನು ರಕ್ಷಿಸಿದ್ದಾರೆ. ಇದೇ ವೇಳೆ ವಿದೇಶಿ ಪ್ರಜೆಗಳು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.

ವಿದೇಶ ಹಾಗೂ ಹೊರ ರಾಜ್ಯಗಳಿಂದ ಮಾನವ ಕಳ್ಳ ಸಾಗಣೆ ಮೂಲಕ ಯುವತಿಯರನ್ನು ಕರೆತಂದು ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ವಿದೇಶ ಹಾಗೂ ಹೊರ ರಾಜ್ಯದ ಹುಡುಗಿಯರನ್ನು ಕರೆಸಿಕೊಂಡು ಸಂಪಿಗೆಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಸಂಪಿಗೆಹಳ್ಳಿ ಮತ್ತು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮಡಿಕೇರಿ ಮೂಲದ ಸುಬ್ರಹ್ಮಣ್ಯ ಮತ್ತು ಮಣಿ ಎಂಬುವರನ್ನು ಬಂಧಿಸಲಾಗಿದೆ.

ಇಬ್ಬರು ಮಹಿಳೆಯನ್ನು ರಕ್ಷಿಸಿದ್ದಾರೆ. ಉದ್ಯೋಗ ಕೊಡಿಸುವ ನೆಪದಲ್ಲಿ ವಿದೇಶದ ಇಬ್ಬರು ಮಹಿಳೆಯರನ್ನು ಮಾನವ ಕಳ್ಳ ಸಾಗಣೆ ಮೂಲಕ ಕರೆತಂದು ರಾಮಮೂರ್ತಿನಗರ ಹಾಗೂ ಎಚ್‌ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯಲ್ಲಿ ಕೂಡಿಹಾಕಿ ವೇಶ್ಯಾವಾಟಿಕೆ ದಂಧೆಗೆ ದೂಡಲಾಗಿತ್ತು. ಇಬ್ಬರು ಮಹಿಳೆಯರು ಹಾಗೂ ಮಗುವನ್ನು ರಕ್ಷಣೆ ಮಾಡಲಾಗಿದೆ. ರಕ್ಷಿಸಿದ ಮಹಿಳೆಯರನ್ನು ತುಮಕೂರಿನಲ್ಲಿರುವ ವಲಸಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಶ್ರೀನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಸಿಕ್ಕಿತ್ತು. ಮನೆಯ ಮೇಲೆ ದಾಳಿ ನಡೆಸಿ, ವಿದೇಶಿ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ವಲಸಿಗರ ಸೆರೆ: ಬಂಡೆಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಐಡಿಐ ಲೇಔಟ್‌ನಲ್ಲಿ ನೆಲಸಿದ್ದ ಮಹಿಳೆ ಸೇರಿ ನಾಲ್ವರು ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಗಳ ಮೂಲಕ ಇವರು ಪಾನ್‌ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಕೊಂಡಿದ್ದರು. ಆರೋ ಪಿಗಳ ವಿರುದ್ಧ ಸರ್ಜಾಪುರ ಮತ್ತು ಬಂಡೇ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಟಾಪ್ ನ್ಯೂಸ್

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ: ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ; ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

MASIDI

Ramzan; ಆಂಧ್ರದಲ್ಲೂ ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಕಡಿಮೆ ಕೆಲಸ

metro

Fare hike: ಮೆಟ್ರೋ ಕಡೆಗೆ ಮುಖ ಮಾಡದ 1 ಲಕ್ಷ ಪ್ರಯಾಣಿಕರು!!

Ekanath Shindhe

Maharashtra; ಮಹಾಯುತಿಯಲ್ಲಿ ಬಿರುಕು?: ಡಿಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ

Donald trumph

India PM ಮೇಲೆ ನನಗೆ ಅಪಾರ ಗೌರವವಿದೆ, ಆದರೆ..: ಮಸ್ಕ್ ನಿರ್ಧಾರ ಸಮರ್ಥಿಸಿಕೊಂಡ ಟ್ರಂಪ್

Champions-Trophy-Teams

ICC Champions Trophy: ಈಗ 9ನೇ ಆವೃತ್ತಿಯ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಜ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು,  ಕುರಿ ಕಳವು ಮಾಡಿದ್ದವರ ಬಂಧನ

Arrested: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು,  ಕುರಿ ಕಳವು ಮಾಡಿದ್ದವರ ಬಂಧನ

metro

Fare hike: ಮೆಟ್ರೋ ಕಡೆಗೆ ಮುಖ ಮಾಡದ 1 ಲಕ್ಷ ಪ್ರಯಾಣಿಕರು!!

pregnet

Inquiry ನೆಪದಲ್ಲಿ ಗರ್ಭಿಣಿಗೆ ಪೊಲೀಸರ ಕಿರುಕುಳ: ಮಾನವ ಹಕ್ಕು ಗಳ ಆಯೋಗ ದಾಳಿ

1-66

Social media ಮೂಲಕ ಚೆನ್ನೈ ಯುವಕನಿಗೆ ಹನಿಟ್ರ್ಯಾಪ್‌: 6 ಮಂದಿ ಸೆರೆ

Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್‌: ಬೀಳುತ್ತೆ 5000 ರೂ. ದಂಡ!

Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್‌: ಬೀಳುತ್ತೆ 5000 ರೂ. ದಂಡ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Arrested: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು,  ಕುರಿ ಕಳವು ಮಾಡಿದ್ದವರ ಬಂಧನ

Arrested: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು,  ಕುರಿ ಕಳವು ಮಾಡಿದ್ದವರ ಬಂಧನ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ: ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ; ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

2-hunsur

Hunsur: ನಾಗರಹೊಳೆ ಉದ್ಯಾನದಂಚಿನಲ್ಲಿ ಹುಲಿ ಉಗುರು ಮಾರಾಟಕ್ಕೆ ಯತ್ನ

1-thirthahalli

Thirthahalli ತಾಲೂಕು ಕಚೇರಿ ಎದುರೇ ಹೃದಯಾಘಾತ; ಚಿಕ್ಕೊಳಿ ವಿಜಯ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.