ರೈಲ್ವೆಯಲ್ಲಿ ಕನ್ನಡಿಗರಿಗೆ ಆದ್ಯತೆಗಾಗಿ ಪ್ರತಿಭಟನೆ


Team Udayavani, Mar 13, 2018, 12:00 PM IST

railway.jpg

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ರೈಲ್ವೆ ಇಲಾಖೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ರೈಲ್ವೆ ಸಿಸಿಎಎ ತರಬೇತುದಾರರು ಸೋಮವಾರ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಪ್ರತಿಭಟಿಸಿದರು.

ಸಿಸಿಎಎ ತರಬೇತುದಾರರು ಬಿಜೆಪಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು. ಆದರೆ ಅದಕ್ಕೆ ಅವಕಾಶ ನೀಡದ ಪೊಲೀಸರು, ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು. ಇದಕ್ಕೂ ಮುನ್ನ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೂ ಅವಕಾಶ ಸಿಗಬೇಕು.

ಅದಕ್ಕಾಗಿ ಮಹಾರಾಷ್ಟ್ರ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವರು ಕ್ರಮ ಕೈಗೊಳ್ಳಬೇಕಿದ್ದು, ಅದಕ್ಕಾಗಿ ರಾಜ್ಯದ ಸಂಸದರು ಒತ್ತಡ ಹೇರಬೇಕು ಎಂದು ಆಗ್ರಹಿಸಿ ಸಿಸಿಎಎ ತರಬೇತುದಾರರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದರು.

ಬಿಎಸ್‌ವೈ ಮಾತುಕತೆ: ಪ್ರತಿಭಟನಾಕಾರರೊಂಗಿಗೆ ಮಾತುಕತೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬೇಡಿಕೆಗಳ ಬಗ್ಗೆ ಕೇಂದ್ರದ ನಾಯಕರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಆದರೆ, ಪಟ್ಟು ಬಿಡದ ಪ್ರತಿಭಟನಾಕಾರರು ಯಡಿಯೂರಪ್ಪ ಮಾತಿಗೆ ವಿರೋಧ ವ್ಯಕ್ತಪಡಿಸಿದರಲ್ಲದೆ, ನ್ಯಾಯ ಸಿಗುವವರೆಗೆ ಇಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಣೆ ಕೂಗಿದರು.

ಇದರಿಂದ ಸಿಟ್ಟಾದ ಯಡಿಯೂರಪ್ಪ, ಭರವಸೆ ನೀಡಿದರೂ ಕೇಳದಿದ್ದರೆ ಏನು ಮಾಡೋಣ. ಸರಿ ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ಪಕ್ಷದ ಕಚೇರಿಯೊಳಗೆ ತೆರಳಿದರು. ಸ್ವಲ್ಪ ಸಮಯದ ನಂತರ ಮತ್ತೆ ಪ್ರತಿಭಟನಾಕರರ ಬಳಿ ಬಂದ ಯಡಿಯೂರಪ್ಪ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಹೆಚ್ಚು ಅವಕಾಶ ನೀಡುವ ಕುರಿತು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಜತೆ ಈಗಾಗಲೇ ಎರಡು ಬಾರಿ ಮಾತುಕತೆ ನಡೆಸಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕೋರಿದ್ದೇನೆ.

ಮತ್ತೂಮ್ಮೆ ಅವರೊಂದಿಗೆ ಈ ಕುರಿತು ಚರ್ಚಿಸುತ್ತೇನೆ ಎಂದು ಭರವಸೆ ನೀಡಿ ವಾಪಸಾದರು. ಆಗಲೂ ಪ್ರತಿಭಟನಾಕಾರರು ಧರಣಿ ಹಿಂತೆಗೆದುಕೊಳ್ಳಲು ಒಪ್ಪದೆ, ಘೋಷಣೆ ಕೂಗಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಪ್ರತಿಭಟನಾಕಾರರು ಪೆನಾಯಿಲ್‌ ಬಾಟಲ್‌ ಹಿಡಿದಿದ್ದನ್ನು ಗಮನಿಸಿದ ಪೊಲೀಸರು ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಟಾಪ್ ನ್ಯೂಸ್

kejriwal 2

PM Modi ಪದವಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

CM-Sidda

Co-Operation: ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

1-a-modiii

Taken-for-granted ಸಂಬಂಧಗಳಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ಪ್ರಧಾನಿ ಮೋದಿ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

Ram-Naidu

Hoax call: ಬೆದರಿಕೆ ಹಾಕುವ ದುಷ್ಕರ್ಮಿಗಳ ವಿಮಾನಯಾನವನ್ನೇ ನಿರ್ಬಂಧಿಸಲು ನಿಯಮ: ಸಚಿವ

Vimana 2

Kochi airport; ಹುಸಿ ಬಾಂಬ್ ಕರೆ ಮಾಡಿದ ಪ್ರಯಾಣಿಕ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

0527

Bengaluru: ತಂದೆ ಸಾಲದ ಹಣ ವಾಪಸ್‌ ಕೊಡದಕ್ಕೆ ಬಾಲಕಿ ಮೇಲೆ ರೇಪ್‌

031

Bengaluru: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ದೋಚಿದ ಪೊಲೀಸ್‌

5

Bengaluru: ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕೊಂದ ಅಪ್ಪ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

kejriwal 2

PM Modi ಪದವಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

CM-Sidda

Co-Operation: ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

1-a-modiii

Taken-for-granted ಸಂಬಂಧಗಳಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ಪ್ರಧಾನಿ ಮೋದಿ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

1–a-sruti

Udupi; ಕೆಮ್ಮಣ್ಣು ಗಣಪತಿ ಸಹಕಾರಿ ವ್ಯಾವಸಾಯಿಕ ಸಂಘ : ಅ. 27 ರಂದು ಶತಾಭಿವಂದನಂ’ ಸಮಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.