ವಾರ್ ರೂಂ ಮುಂದೆ ಶಾಸಕಿ ಧರಣಿ
Team Udayavani, May 6, 2021, 1:30 PM IST
ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ಹಾಸಿಗೆ ವ್ಯವಸ್ಥೆ ಮಾಡಿ ಎಂದು ಜಯನಗರ ಶಾಸಕಿ ಸೌಮ್ಯರೆಡ್ಡಿ ಬುಧವಾರ ಬಿಬಿಎಂಪಿ ವಾರ್ ರೂಂ ಮುಂದೆ ಧರಣಿ ನಡೆಸಿದರು.
ಹಾಸಿಗೆ ಬ್ಲಾಕಿಂಗ್ ದಂಧೆ ತಡೆಗಟ್ಟಿ ಎಲ್ಲವನ್ನು ಸರಿಪಡಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ. ಜನರು ಹಾಸಿಗೆಗಾಗಿ ನನಗೆ ಮನವಿ ಮಾಡುತ್ತಿದ್ದಾರೆ ಎಂದು ಹಾಸಿಗೆ ಬೇಡಿಕೆಯ ಪಟ್ಟಿಯನ್ನು ತಂದು ಅಧಿಕಾರಿಗಳಿಗೆ ನೀಡಿದರು.
ಹಾಸಿಗೆ ಹಂಚಿಕೆಯಾಗದ ಕಾರಣ ಫುಟ್‌ಪಾತ್‌ನಲ್ಲೇ ಧರಣಿ ಕುಳಿತರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಸಮಸ್ಯೆ ಸರಿ ಮಾಡಿದೆ ಎಂದು ಹೇಳಿದ್ದೀರಿ, ಹಾಗಿದ್ದರೆ ಹಾಸಿಗೆ ಕೊಡಿಸಿ, ರೆಮ್‌ಡೆಸಿವಿಯರ್ ಕೊಡಿಸಿ ಎಂದು ಪ್ರಶ್ನಿಸಿದರು. ನನಗೆ ನಿಜವಾಗಲೂ ಅರ್ಥವಾಗುತ್ತಿಲ್ಲ ಎಲ್ಲಿ ಹೋಗಬೇಕು ನ್ಯಾಯ ಕೇಳಲು ಎಂದು . ನಾನು ಒಬ್ಬ ಶಾಸಕಿ. ಜನರು ಬಂದು ಕೇಳಿದರೆ ಏನು ಮಾಡಬೇಕು ಎಂದು ಕೇಳಿದರು.
ಜನರಿಗೆ ಸಹಾಯ ಮಾಡಿ. ಜಾತಿ, ಧರ್ಮ ಯಾಕೆ ಎಳೆದು ತರುತ್ತೀರಿ. ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ. ಹುಟ್ಟಿದಾಗ ಇದೇ ಜಾತಿ ಧರ್ಮಹುಟ್ಟಬೇಕು ಎಂದು ಅರ್ಜಿ ಹಾಕಿಕೊಳ್ಳುತ್ತೇವಾ ಎಂದು ಪ್ರಶ್ನಿಸಿದರು. 18 ರಿಂದ 44 ವರ್ಷದವರು ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದರು. ಎಷ್ಟು ಜನಕ್ಕೆ ಕೊಟ್ಟಿದ್ದೀರಿ. ಕೊರೊನಾ ತಪಾಸಣೆ ಮಾಡಿಸಿದರೆ ಎರಡು ದಿನವಾದರೂ ಫಲಿತಾಂಶ ಬರುವುದಿಲ್ಲ. ವಾರವಾದರೂ ಬಿಯು ಸಂಖ್ಯೆ ಸಿಗುವುದಿಲ್ಲ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.