ಪಿಯು ಭಾನುವಾರದ ವಿಶೇಷ ತರಗತಿಗೆ ಕೊಕ್
Team Udayavani, Jul 1, 2018, 6:15 AM IST
ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ಭಾನುವಾರದ ವಿಶೇಷ ತರಗತಿಗಳನ್ನು ನಡೆಸದಿರಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ರಜಾ ದಿನವಾದ ಭಾನುವಾರದಂದು ವಿಶೇಷ ತರಗತಿ ನಡೆಸುವ ಬದಲಿಗೆ ವಾರದ ಇತರ ದಿನಗಳಲ್ಲೇ ಕಾಲೇಜು
ಅವಧಿಗೆ ಮೊದಲು ಅಥವಾ ನಂತರ ವಿಶೇಷ ತರಗತಿಗಳನ್ನು ನಡೆಸಲು ತೀರ್ಮಾನಿಸಿದೆ.
ಆಂಗ್ಲ ಭಾಷಾ ವಿಷಯದಲ್ಲಿ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯವನ್ನು ಉತ್ತಮಗೊಳಿಸಲು ಸರ್ಕಾರಿ ಪಿಯು ಕಾಲೇಜಿನಲ್ಲಿ 2017-18ನೇ ಸಾಲಿನಲ್ಲಿ ಪ್ರತಿ ಭಾನುವಾರ ವಿಶೇಷ ತರಗತಿ ನಡೆಸಲಾಗುತ್ತಿತ್ತು. ಕಳೆದ ಶೈಕ್ಷಣಿಕ
ವರ್ಷದಲ್ಲಿ 25 ಭಾನುವಾರಗಳಂದು ಈ ತರಗತಿಗಳು ನಡೆದಿವೆ. 2017ರ ಆಗಸ್ಟ್ 6ರಂದು ಮೊದಲ ತರಗತಿ ಆರಂಭವಾಗಿದ್ದಾಗ ತಲಾ 2 ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಸೇರಿದ್ದರು. ಕ್ರಮೇಣ ಅದು
400-500ರಿಂದ 40-50ಕ್ಕೆ ಇಳಿದಿತ್ತು. ಭಾನುವಾರದ ವಿಶೇಷ ತರಗತಿಗೆ 500 ರೂ.ಗೌರವ ಧನ ನೀಡುತ್ತಿದ್ದರೂ ಉಪನ್ಯಾಸಕರು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ವಿದ್ಯಾರ್ಥಿಗಳೂ ಬರುತ್ತಿರಲಿಲ್ಲ. ಭಾನುವಾರದ ಬದಲಿಗೆ ವಾರದಲ್ಲಿ ಎರಡು ಅಥವಾ ಮೂರು ದಿನ ಬೆಳಗ್ಗೆ ಅಥವಾ ಸಂಜೆ ಹೆಚ್ಚುವರಿ ಕಾಲಾವಕಾಶ ಪಡೆದು ವಿಶೇಷ ತರಗತಿ ನಡೆಸಲು ತೀರ್ಮಾನಿಸಿದ್ದಾರೆ.
ಭಾನುವಾರದ ವಿಶೇಷ ತರಗತಿಯಲ್ಲಿ ಕೊನೆ ಕೊನೆಗೆ ವಿದ್ಯಾರ್ಥಿಗಳ ಹಾಜರಾತಿ ಕುಸಿತವಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ವಾರದ ನಡುವಿನಲ್ಲಿ ವಿಶೇಷ ತರಗತಿ ನಡೆಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಎಲ್ಲ ಕಾಲೇಜಿಗೂ
ಮಾಹಿತಿ ನೀಡಲಿದ್ದೇವೆ.
– ಸಿ.ಶಿಖಾ,
ನಿರ್ದೇಶಕಿ, ಪಿಯು ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.