ಪ್ರೌಢಶಿಕ್ಷಣ ಇಲಾಖೆ ಮಾರ್ಗದರ್ಶಿ ಪ್ರಕಟ
Team Udayavani, Aug 1, 2017, 7:30 AM IST
ಬೆಂಗಳೂರು: ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯು ಶೈಕ್ಷಣಿಕ ವರ್ಷದಲ್ಲಿ ಮಾಡಬೇಕಾದ ಕಾರ್ಯದ ಸಂಪೂರ್ಣ ಮಾಹಿತ ಒಳಗೊಂಡಿರುವ ಪ್ರೌಢ ಶಿಕ್ಷಣ ಇಲಾಖೆಯ 2017-18ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪ್ರಕಟಗೊಂಡಿದೆ.
ಇಲಾಖೆಯ ಆಯುಕ್ತೆ ಸೌಜನ್ಯ ಹಾಗೂ ನಿರ್ದೇಶಕಿ ಫಿಲೋಮಿನಾ ಲೋಬೊ ಸೇರಿ ವಿವಿಧ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ಈ ಮಾರ್ಗದರ್ಶಿಯನ್ನು ರಚಿಸಿದೆ.
ಅಕ್ಟೋಬರ್ 11ರಿಂದ 25ರ ತನಕ ಮಧ್ಯಂತರ ರಜೆ ಮತ್ತು 2018ರ ಏ.11ರಿಂದ ಮೇ 27ರ ವರೆಗೆ ಬೇಸಿಗೆ ರಜೆ ನಿಗದಿ
ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟು 317 ಶೈಕ್ಷಣಿಕ ದಿನ ಬರಲಿದ್ದು, 72 ಸರ್ಕಾರಿ ರಜೆ ಹಾಗೂ 4 ವಿವೇಚನಾ ರಜೆ
ಸೇರಿ 76 ರಜೆಗಳಿದ್ದು, 241 ದಿನ ಮಾತ್ರ ಶಾಲಾ ಚಟುವಟಿಕೆ ನಡೆಯಲಿದೆ. ಶಾಲಾ ಶೈಕ್ಷಣಿಕ ವರ್ಷ ಆರಂಭದಿಂದ ಏಪ್ರಿಲ್ ನ ಮುಕ್ತಾಯದ ತನಕ ಯಾವೆಲ್ಲ ಚಟುವಟಿಕೆ ಮಾಡಬೇಕು ಮತ್ತು ಎಷ್ಟು ದಿನಾಚರಣೆಗಳನ್ನು ಆಚರಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ತಿಂಗಳು ಹಾಗೂ ದಿನಾಂಕದ ಸಮೇತ ವಿವರಿಸಲಾಗಿದೆ. 8ನೇ ತರಗತಿಗೆ 53 ರೂ. ಹಾಗೂ 9 ಮತ್ತು 10ನೇ ತರಗತಿಗೆ 198ರೂ. ಶುಲ್ಕವಿರುತ್ತದೆ. ಎಸ್ಸಿ, ಎಸ್ಟಿ, ಪರಿಶಿಷ್ಟ ವರ್ಗ ಮತ್ತು ವಿದ್ಯಾರ್ಥಿನಿಯರಿಗೆ ಶುಲ್ಕ ರಿಯಾಯ್ತಿ ಇದೆ ಎಂಬುದನ್ನು ಉಲ್ಲೇಖೀಸಲಾಗಿದೆ. ಎಲ್ಲಾ ಪ್ರೌಢಶಾಲೆಗಳಿಗೆ ಇದನ್ನು ತಲುಪಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.