ಪಿಯುಸಿ ಅಗ್ರ ಹತ್ತರಲ್ಲಿ ಆಟೋ ಚಾಲಕನ ಪುತ್ರಿ
Team Udayavani, Apr 16, 2019, 3:00 AM IST
ಬೆಂಗಳೂರು: ಸರಕು ಸಾಗಣೆ ಆಟೋ ಚಾಲಕನ ಪುತ್ರಿ ಒಬ್ಬರು, ಬಡತನದ ನಡುವೆಯೂ ಈ ಬಾರಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಪೀಣ್ಯ ನಿವಾಸಿಯಾಗಿರುವ ಗೋವಿಂದಯ್ಯ ಅವರು ನಿತ್ಯ ಸರಕು ಸಾಗಣೆ ಆಟೋ ಚಾಲನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಇವರು ತಾನು ಹೆಚ್ಚು ಓದಿಲ್ಲ, ಮಗಳಾದರೂ ಓದಿ ಉನ್ನತ ಕೆಲಸ ಮಾಡಲಿ ಎಂದು ತಮ್ಮ ಮಗಳಾದ ಪಲ್ಲವಿಯನ್ನು ಸಾಲ ಮಾಡಿ ಖಾಸಗಿ ಕಾಲೇಜಿಗೆ ಸೇರಿಸಿದ್ದರು.
ನಿತ್ಯ ಅಪ್ಪನ ಕಷ್ಟವನ್ನು ಕಣ್ಣೆದುರು ಕಾಣುತ್ತಾ ಶ್ರಮಪಟ್ಟ ಓದಿದ ಪಲ್ಲವಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 591 ಅಂಕಗಳಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ತಮ್ಮ ಮಗಳ ಸಾಧನೆ ಕುರಿತು ಮಾತನಾಡಿ ಗೋವಿಂದಯ್ಯ, ನಾವು ಹೆಚ್ಚು ಓದದೇ ಈ ರೀತಿ ಆಟೋ ಓಡಿಸುವ ಕೆಲಸ ಮಾಡುತ್ತೀದ್ದೇವೆ. ಒಂದು ದಿನ 500 ರೂ. ಸಂಪಾದನೆಯಾದರೇ ಮತ್ತೂಂದು ದಿನ ಖಾಲಿ ಕೈಯಲ್ಲಿ ಮನೆ ಸೇರಿದ್ದೇನೆ.
ಆದರೆ, ಇಂತಹ ಪರಿಸ್ಥಿತಿ ನನ್ನ ಮಕ್ಕಳಿಗೆ ಬರಬಾರದು, ನನ್ನ ಮಗಳು ಹೆಚ್ಚು ಓದಿ ಅಧಿಕಾರಿಯಾಗಬೇಕು ಕೈತುಂಬ ಸಂಬಳ ಪಡೆಯಬೇಕು ಎಂದು ಅವಳನ್ನು ಓದಿಸುತ್ತಿದ್ದೇನೆ. ದುಡಿಮೆಯಿಂದ ಮೊಲನೆ ವರ್ಷ ಕಾಲೇಜು ಶುಲ್ಕ ಕಟ್ಟಲಾಗಲಿಲ್ಲ.
ಹೀಗಾಗಿ, ಸಾಲ ಮಾಡಿದ್ದೆ. ಆನಂತರ ಆಕೆ ಎಸ್‌ಎಸ್‌ಎಲ್‌ಸಿಯಲ್ಲಿಯೂ ಉತ್ತಮ ಅಂಕ ತೆಗೆದಿದ್ದರಿಂದ “ದೇವರಾಜ ಅರಸು’ ವಿದ್ಯಾರ್ಥಿ ವೇತನ ಬಂದು ಸಹಾಯವಾಯಿತು. ಆಕೆ ಮುಂದೆ ಇಂಜಿನಿಯರಿಂಗ್ ಓದಬೇಕು ಎನ್ನುತ್ತಿದ್ದು, ಮತ್ತೆ ಸಾಲ ಮಾಡಿಯಾದರೂ ಓದಿಸುತ್ತೇನೆ ಎಂದರು.
ವಿದ್ಯಾರ್ಥಿ ಪಲ್ಲವಿ ಮಾತನಾಡಿ, ಅಂದಿನ ಪಾಠ ಅಂದೇ ಓದಿ ಮುಗಿಸುತ್ತಿದ್ದೆ. ಜತೆಗೆ ಕಾಲೇಜು ಮುಗಿದ ಮೇಲೆ ನಿತ್ಯ 4 ತಾಸು ಹೆಚ್ಚು ಓದುತ್ತಿದ್ದೆ. ಹೀಗಾಗಿ, ಪರೀಕ್ಷೆ ಸಮಯದಲ್ಲಿ ಒತ್ತಡವಾಗಲಿಲ್ಲ. ಅಂದು ಕೊಂಡಷ್ಟೇ ಅಂಕ ಬಂದಿದ್ದು, ಸಂತೋಷವಾಯಿತು.
ಎಂಜಿನಿಯರಿಂಗ್ ಓದುತ್ತಾ ಜತೆಗೆ ಐಎಎಸ್ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತೇನೆ. ನನಗೆ ಪ್ರೋತ್ಸಾಹಿಸಿದ ಎಎಸ್‌ಸಿ ಕಾಲೇಜಿನ ಎಲ್ಲಾ ಬೋಧಕರಿಗೆ ಧನ್ಯವಾದಗಳು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.