ಠಾಣೆ ಪುನರಾರಂಭಕ್ಕೆ ಸಹಿ ಸಂಗ್ರಹ ಅಭಿಯಾನ
Team Udayavani, Apr 18, 2017, 12:15 PM IST
ಬೆಂಗಳೂರು: ಮಾಗಡಿ ಕೆಂಪೇಗೌಡರ ಕಾಲದಿಂದಲೂ ತನ್ನದೇ ಇತಿಹಾಸ ಹೊಂದಿರುವ, ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಚಿಕ್ಕಪೇಟೆಯಲ್ಲಿ ಮುಚ್ಚಿರುವ ಪೊಲೀಸ್ ಠಾಣೆಯನ್ನು ಪುನರ್ ತೆರೆಯಲು ಆಗ್ರಹಿಸಿ ಅಖೀಲ ಭಾರತೀಯ ಏಕ್ತಾ ಮಂಚ್ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.
ರಾಜ್ಯದ ತೆರಿಗೆ ಸಂಗ್ರಹದಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಬೆಂಗಳೂರಿನಿಂದಲೇ ಬರುತ್ತಿದ್ದು, ಬೆಂಗಳೂರಿನ ತೆರಿಗೆ ಸಂಗ್ರಹದಲ್ಲಿ ಚಿಕ್ಕಪೇಟೆಯದ್ದೇ ಸಿಂಹಪಾಲಿದೆ. ಈ ಭಾಗದಲ್ಲಿ 10 ಸಾವಿರಕ್ಕೂ ಅಧಿಕ ಸಗಟು ವ್ಯಾಪರ ಕೇಂದ್ರವಿದ್ದು, ನಿತ್ಯ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ಮಾಡುತ್ತಾರೆ. ನಿರ್ಭೀತವಾಗಿ ವ್ಯಾಪಾರ ಮಾಡುವುದೇ ವರ್ತಕರಿಗೆ ಸವಾಲಾಗಿದೆ.
ಇಲ್ಲಿ ನಿತ್ಯ ನಡೆಯುವ ಕಳ್ಳತನ ದರೋಡೆ, ವಂಚನೆ ಹಾಗೂ ಸೂಲಿಗೆ ತಡೆಯಲು ಪೊಲೀಸ್ ಠಾಣೆ ಅನಿವಾರ್ಯಧಿವಾಗಿರುವುದರಿಂದ ಈ ಅಭಿಯಾನ ಆರಂಭಿಸಲಾಗಿದೆ. ಚಿಕ್ಕಪೇಟೆ ಪೊಲೀಸ್ ಠಾಣೆ ಕಳೆದ ಒಂದುವರೆ ತಿಂಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಕಾಟನ್ ಪೇಟೆ ಮತ್ತು ಉಪ್ಪಾರ್ ಪೇಟೆಗೆ ಠಾಣೆಗೆ ಸ್ಥಳಾಂತರಿಸಿರುವ ಮಾಹಿತಿ ಬಂದಿದೆ.
ಚಿಕ್ಕಪೇಟೆಯ ವರ್ತಕರಿಗೆ ಭದ್ರತೆ ಒದಗಿಸುವ ದೃಷ್ಠಿಯಿಂದ ಪೊಲೀಸ್ ಠಾಣೆಯನ್ನು ಪುನರ್ ಆರಂಭಿಸಿ, ಎಲ್ಲ ರೀತಿಯ ಸೌಲಭ್ಯ ಪೂರೈಸುವಂತೆ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಸಹಿ ಸಂಗ್ರಹಿಸಿದ ನಂತರ, ಪ್ರತಿಯನ್ನು ಗೃಹ ಸಚಿವರಿಗೆ, ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಸಿಟಿ ಕಮಿಷನರ್ಗೂ ಸಲ್ಲಿಸಲಾಗುತ್ತದೆ ಎಂದು ಮಂಚ್ನ ಸಂಸ್ಥಾಪಕ ಹಾಗೂ ನ್ಯಾಯವಾದಿ ಉದಯ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Bengaluru: ಕಬ್ಬನ್ ಪಾರ್ಕ್ನಲ್ಲಿ ಪುಷ್ಪ ಪ್ರದರ್ಶನ
S.Africa: ಫಿಕ್ಸಿಂಗ್ ಕೇಸ್ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್ ಭಕ್ಷ್ಯಗಳಿವು…
Relationships: ಸಂಬಂಧಗಳಲ್ಲಿ ಮಾಯವಾದ ಸಹಿಷ್ಣುತೆ : ಸಹಿಷ್ಣು ಗುಣದಿಂದಲೇ ಬಾಂಧವ್ಯದ ಪ್ರಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.