ಪುಂಡರಿಗೆ ಗುಂಡೇಟು ನಿಲ್ಲದು!


Team Udayavani, Jan 1, 2019, 6:42 AM IST

pundarige.jpg

ಬೆಂಗಳೂರು: ಆರೋಪಿಗಳ ಬಂಧನಕ್ಕೆ ಗುಂಡು ಹಾರಿಸುವುದೊಂದೇ ದಾರಿಯಲ್ಲ. ಆದರೆ, ಪೊಲೀಸರ ರಕ್ಷಣೆಯೂ ಅನಿವಾರ್ಯವಾಗಿರುವುದರಿಂದ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ ಬಂಧಿಸಬೇಕಾಗುತ್ತದೆ. ಹಾಗಾಗಿ, ನಗರದಲ್ಲಿ ಪೊಲೀಸರಿಂದ ಗುಂಡಿನ ದಾಳಿ ಮುಂದುವರಿಯಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಹೊಸ ವರ್ಷದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಅಪರಾಧ ನಿಯಂತ್ರಣ ವಿಚಾರದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಹಾಗೂ ಹಲ್ಲೆ ನಡೆಸಲು ಮುಂದಾದರೆ ಅಂತಹ ವ್ಯಕ್ತಿಗೆ ಗುಂಡಿನ ಮೂಲಕವೇ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.

2018ರಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಸರಗಳ್ಳರು, ಕೊಲೆಗಡುಕರು, ರೌಡಿಶೀಟರ್‌ಗಳು, ದರೋಡೆಕರೋರರು ಸೇರಿ 33 ಮಂದಿಗೆ ಪೊಲೀಸರು “ಗುಂಡೇಟಿನ ರುಚಿ’ ತೋರಿಸಿದ್ದರು. ಒಂದು ವೇಳೆ ಮುಂಬರುವ ದಿನಗಳಲ್ಲಿ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾದರೆ ಅನಿವಾರ್ಯವಾಗಿ ಮತ್ತೆ ಪೊಲೀಸರು ತಮ್ಮ ಪಿಸ್ತೂಲ್‌ಗ‌ಳಿಗೆ ಕೆಲಸ ಕೊಡಬೇಕಾಗುತ್ತದೆ ಎಂದು ತಿಳಿಸಿದರು.

ನಗರದಲ್ಲಿ ಶೂಟೌಟ್‌ ಹೆಚ್ಚಿಸಬೇಕೆಂಬ ಉದ್ದೇಶವಿಲ್ಲ. ಇದರಿಂದ ಅಪರಾಧ ತಡೆಯಬಹುದೆಂಬ ಭ್ರಮೆಯೂ ಇಲ್ಲ. ಆದರೆ, ಪೊಲೀಸರ ಮೇಲಿನ ಹಲ್ಲೆ ಸಹಿಸಲು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರ ವಲಯದಲ್ಲಿ ಪೊಲೀಸರ ಸಾಮರ್ಥ್ಯ ಬಗ್ಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಯಾವುದೇ ವ್ಯಕ್ತಿ ಮೇಲೆ “ಕನಿಷ್ಠ ಬಲಪ್ರಯೋಗ’ ಮಾಡಬಹುದೆಂಬ ನಿಯಮ ಇದೆ ಎಂದು ಸಮರ್ಥಿಸಿಕೊಂಡರು.

ಅಪರಾಧ ತಗ್ಗಿಸಲು ಕ್ರಮ: ಅಂಕಿ ಅಂಶಗಳ ಪ್ರಕಾರ 2017ಕ್ಕೆ ಹೊಲಿಸಿದರೆ, 2018ರಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ.  ಈ ಪ್ರಮಾಣ ಮತ್ತಷ್ಟು ಕಡಿಮೆಯಾಗಲು ಕೆಲವೊಂದು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾವುದು. ಪ್ರಮುಖವಾಗಿ ಅಪರಾಧ ನಿಯಂತ್ರಣ ಮತ್ತು ಅಪರಾಧಿಗಳ ಪತ್ತೆ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಪ್ರಕರಣ ದಾಖಲಾದ ಕೂಡಲೇ ಅದರ ಬೆನ್ನು ಬಿದ್ದು ಆರೋಪಿಗಳನ್ನು ನಿಗದಿತ ಸಮಯದಲ್ಲಿ ಬಂಧಿಸಿ, ಶಿಕ್ಷೆ ಆಗುವಂತೆ ಮಾಡಲು ಅಧಿಕಾರಿಗಳಿಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.

ಮತ್ತೂಂದೆಡೆ ತಮ್ಮ ವ್ಯಾಪ್ತಿಯ ಹಳೇ ಅಪರಾಧಿಗಳು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳ ಚಲವಲನಗಳ ಮೇಲೆ ನಿಗಾವಹಿಸುವಂತೆ ಪ್ರತಿ ವಲಯ ಡಿಸಿಪಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಇತ್ತೀಚೆಗಷ್ಟೇ ಸರ್ಕಾರ ಒದಗಿಸಿರುವ 911 ಗಸ್ತು ವಾಹನಗಳ ಮೂಲಕ ಎಲ್ಲೆಡೆ ಗಸ್ತು ಹೆಚ್ಚಿಸಲಾಗುವುದು ಎಂದು ಹೇಳಿದರು.

100-500ಕ್ಕೂ ಹೆಚ್ಚು ಜನ ಸೇರುವ ಸ್ಥಳಗಳು, ಸಂಸ್ಥೆ ಅಥವಾ ಮಾಲ್‌ಗ‌ಳ ಮಾಲೀಕರು ಆಯಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಎಂದಿಗೂ ಸಹಿಸುವುದಿಲ್ಲ. ಅನ್ಯಾಯಕ್ಕೊಳಗಾದ ಮಹಿಳೆ ಯಾವುದೇ ಮಾರ್ಗದ ಮೂಲಕ (ಆನ್‌ಲೈನ್‌, ಸಾಮಾಜಿಕ ಜಾಲತಾಣಗಳು) ಮೂಲಕ ದೂರು ನೀಡಿದರೂ, ನಿರ್ದಿಷ್ಟ ಸಮಯದಲ್ಲೇ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಪ್ರಮುಖವಾಗಿ ಪೊಕೊ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಪತ್ತೆಗೆ ಆದ್ಯತೆ ಕೊಡುವುದಲ್ಲದೆ, ಅರೋಪಿಗಳ ಪತ್ತೆಗೂ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಅಭಿಯಾನ ಮುಂದುವರಿಕೆ: ಕಳೆದ ಆರೇಳು ತಿಂಗಳಿಂದ ನಗರದಲ್ಲಿ ಮಾದಕ ವಸ್ತು ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗಿದೆ. ಮೂವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ. ಜತೆಗೆ ಪ್ರಸಕ್ತವು ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗಿದೆ. ಜತೆಗೆ ನಗರದ ಎಲ್ಲ ಶಾಲಾ-ಕಾಲೇಜುಗಳು, ಸಾರ್ವಜನಿಕರ ಸ್ಥ ಳಗಳಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಅಲ್ಲದೆ, ನಗರದ ಮಾದಕ ವಸ್ತು ಮಾರಾಟಗಾರರಿಗೆ ಗಾಂಜಾ ಹಾಗೂ ಇತರೆ ಮಾದಕ ವಸ್ತು ಸರಬರಾಜು ಮಾಡುತ್ತಿರುವ ನೆರೆ ರಾಜ್ಯಗಳ ವ್ಯಕ್ತಿಗಳ ಪತ್ತೆ ಕಾರ್ಯಕ್ಕೆ ಹೊಸ ಪ್ರಯೋಗ ಮಾಡಲಾಗಿದ್ದು, ನೆರೆ ರಾಜ್ಯಗಳ ಜಿಲ್ಲಾವರಿಷ್ಠಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿನ ಪೂರೈಕೆದಾರರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದರು.

ಭಯದಿಂದ ನಿಯಮ ಪಾಲಿಸುವದು ಬೇಡ: ದಂಡ ವಸೂಲಿ ಮಾಡುವುದು ನಮ್ಮ ಉದ್ದೇಶ ಅಲ್ಲ. ಪೊಲೀಸರಿಗೆ ಹೆದರಿ ಸಾರ್ವಜನಿಕರು ನಿಯಮ ಪಾಲನೆ ಮಾಡುವುದು ಬೇಡ. ಅವರ ಜೀವನ ಹಾಗೂ ಜೀವದ ಮೌಲ್ಯವನ್ನು ಅರಿತು ಸಂಚಾರಿ ನಿಯಮ ಪಾಲನೆ ಮಾಡಿಬೇಕು. ಹೆಲ್ಮೆಟ್‌ ಧರಿಸುವುದು, ಸಿಗ್ನಲ್‌ ಜಂಪ್‌ ಮಾಡುವುದು, ಫ‌ುಟ್‌ಪಾತ್‌ ಮೇಲೆ ವಾಹನ ಚಾಲನೆ ಮಾಡುವುದು ಒಳ್ಳೆ ನಾಗರೀಕನ ವ್ಯಕ್ತಿತ್ವ ಅಲ್ಲ. ಸಂಚಾರ ಪೊಲೀಸರು ಎಲ್ಲ ವೃತ್ತಗಳಲ್ಲಿಯೂ ಹೆಚ್ಚುವರಿ ಸಿಗ್ನಲ್‌ ದೀಪಗಳು, ಟೈಮರ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
 
ಮುಂಬೈ ಹಾಗೂ ದೆಹಲಿಗೆ ಹೊಲಿಸಿದರೆ ಬೆಂಗಳೂರಿನಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದಲ್ಲಿ ಸಿಬ್ಬಂದಿ ನೇಮಕ  ಕುರಿತು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಟಿ.ಸುನಿಲ್‌ಕುಮಾರ್‌, ನಗರ ಪೊಲೀಸ್‌ ಆಯುಕ್ತ

* ಮೋಹನ್‌ ಭದ್ರಾವತಿ 

ಟಾಪ್ ನ್ಯೂಸ್

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.