ಪೊಲೀಸರಿಗೆ “ಪೈಥಾನ್‌’ ಹೊಣೆ!


Team Udayavani, Oct 9, 2017, 11:56 AM IST

python-2-viji-pack.jpg

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಶ್ರಮಿಸುತ್ತಿರುವ ಸಂಚಾರ ಪೊಲೀಸರು ಇನ್ನುಮುಂದೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನೂ ಮಾಡಿಸಲಿದ್ದಾರೆ! ಬಿಬಿಎಂಪಿ ಬಳಿ ಇರುವ ಗುಂಡಿ ಮುಚ್ಚುವ ಮೂರು “ಪೈಥಾನ್‌’ ಯಂತ್ರಗಳ ಪೈಕಿ ಒಂದನ್ನು ಸಂಚಾರ ಪೊಲೀಸರಿಗೆ ಹಸ್ತಾಂತರಿಸಲು ನಗರಾಭಿವೃದ್ಧಿ ಇಲಾಖೆ ಉದ್ದೇಶಿಸಿದೆ.

ಅದರಂತೆ ಇನ್ನುಮುಂದೆ ಹೆಚ್ಚು ವಾಹನದಟ್ಟಣೆ ಇರುವ ಯಾವುದೇ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಕಂಡರೆ, ತಕ್ಷಣ ಸಂಚಾರ ಪೊಲೀಸರು ಆ ಗುಂಡಿ ಮುಚ್ಚುವ ಕಾರ್ಯದಲ್ಲಿ ಸಕ್ರಿಯರಾಗಲಿದ್ದಾರೆ.  ಒಂದೆಡೆ ನಗರದಾದ್ಯಂತ ವಿಪರೀತ ರಸ್ತೆ ಗುಂಡಿಗಳು ಬಾಯೆ¤ರೆದಿವೆ. ಮತ್ತೂಂದೆಡೆ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಗುಂಡಿ ಮುಚ್ಚುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ಆಕ್ರೋಶ ಕೇಳಿಬರುತ್ತಿದೆ.

ಇನ್ನೊಂದೆಡೆ ಈ ಗುಂಡಿಗಳಿಂದ ಅಪಘಾತಗಳೂ ಸಂಭವಿಸುತ್ತಿದ್ದು, ಇದು ಪೊಲೀಸರಿಗೂ ತಲೆನೋವಾಗಿದೆ. ಈ ಮಧ್ಯೆ ಸಂಚಾರ ಪೊಲೀಸರು ಅಲ್ಲಲ್ಲಿ ಕೈಯಿಂದ ಗುಂಡಿ ಮುಚ್ಚುತ್ತಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಅಧಿಕೃತವಾಗಿ ಪೈಥಾನ್‌ ಯಂತ್ರವನ್ನೇ ಸಂಚಾರ ಪೊಲೀಸರ ಸುಪರ್ದಿಗೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಇದಕ್ಕೆ ನಗರಾಭಿವೃದ್ಧಿ ಸಚಿವರು ಕೂಡ ಅಸ್ತು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರಿಂದಲೇ ಪ್ರಸ್ತಾವನೆ: ಈ ಸಂಬಂಧ ಈಚೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವತಃ ಸಂಚಾರ ಪೊಲೀಸರು ಗುಂಡಿ ಮುಚ್ಚುವ ಒಂದು “ಪೈಥಾನ್‌ ಮಷಿನ್‌’ ಅನ್ನು ತಮಗೆ ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸಿದರು. ಸಚಿವರು ಕೂಡ ಹಸ್ತಾಂತರಿಸುವಂತೆ ಪಾಲಿಕೆಗೆ ಸೂಚಿಸಿದ್ದಾರೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ. 

ನಮ್ಮ ಸುಪರ್ದಿಯಲ್ಲೇ ಒಂದು ಪೈಥಾನ್‌ ಯಂತ್ರ ಕೊಟ್ಟರೆ, ಕಣ್ಣಿಗೆ ಬೀಳುವ ಗುಂಡಿಗಳನ್ನು ತಕ್ಷಣ ಮುಚ್ಚಲು ಅನುಕೂಲ ಆಗುತ್ತದೆ. ಇದರ ಉದ್ದೇಶ ನಗರದಲ್ಲಿ ತಲೆಯೆತ್ತಿರುವ ರಸ್ತೆ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚುವುದಾಗಿದೆ. ಈ ಹಿನ್ನೆಲೆಯಲ್ಲಿ ಯಂತ್ರವನ್ನು ನೀಡುವಂತೆ ಕೋರಿದ್ದೇವೆ. ಹಾಗಂತಾ, ನಮ್ಮಲ್ಲಿ ಯಾವುದೇ ತಜ್ಞರು ಇಲ್ಲ; ಎಂಜಿನಿಯರ್‌ಗಳೂ ಇಲ್ಲ. ಆದರೆ, ಯಂತ್ರದ ಜತೆಗೆ ಒಬ್ಬ ಸಹಾಯಕ ಎಂಜಿನಿಯರ್‌ ಅನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಆರ್‌. ಹಿತೇಂದ್ರ ಸ್ಪಷ್ಟಪಡಿಸಿದರು.

ಆದರೆ, ಸಾವಿರಾರು ಕಿ.ಮೀ. ರಸ್ತೆಗಳಲ್ಲಿ ಕೆಲವು ಇನ್ನೂ ಗುತ್ತಿಗೆದಾರರ ನಿರ್ವಹಣಾ ಅವಧಿಯಲ್ಲಿವೆ. ಅಂತಹ ರಸ್ತೆಯನ್ನು ದುರಸ್ತಿಗೊಳಿಸುವುದು ಆಯಾ ಗುತ್ತಿಗೆದಾರರ ಕರ್ತವ್ಯ. ಹಾಗಾಗಿ, ಯಾವುದು ನಿರ್ವಹಣಾ ಅವಧಿಯಲ್ಲಿದೆ? ಯಾವುದು ನಿರ್ವಹಣಾ ಅವಧಿಯಲ್ಲಿಲ್ಲ ರಸ್ತೆ? ಎಂಬುದು ಪೊಲೀಸರಿಗೆ ಗೊತ್ತಾಗುವುದಿಲ್ಲ. ಇನ್ನು ನಗರದ ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ತೆರಳುವುದಕ್ಕೇ ಸಮಯ ಹಿಡಿಯುತ್ತದೆ.

ಉದಾಹರಣೆಗೆ ಆರ್‌.ಆರ್‌. ನಗರದಲ್ಲಿ ಒಂದು ಗುಂಡಿ ಮುಚ್ಚುತ್ತಿದ್ದರೆ, ಮಹದೇವಪುರದಿಂದ ಮತ್ತೂಂದು ಗುಂಡಿ ಮುಚ್ಚಲು ಕರೆ ಬರುತ್ತದೆ. ಆಗ ಅಲ್ಲಿಗೆ ಧಾವಿಸಬೇಕಾಗುತ್ತದೆ. ಹಾಗಾಗಿ, ಈ ರೀತಿಯ ಹಸ್ತಾಂತರಿಸುವುದು ಅಷ್ಟು ಸಮಂಜಸವಲ್ಲ ಎಂದು ಬಿಬಿಎಂಪಿ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. 

ನಗರ ಸಂಚಾರ ಪೊಲೀಸರಿಗೆ ಗುಂಡಿ ಮುಚ್ಚಲು ಒಂದು ಪೈಥಾನ್‌ ಯಂತ್ರ ಹಸ್ತಾಂತರಕ್ಕೆ ಸೂಚಿಸಲಾಗಿದೆ. ಆದರೆ, ಇನ್ನು ಒಂದು ವಾರದಲ್ಲಿ ರಸ್ತೆಗಳನ್ನು ಸಂಪೂರ್ಣ ಗುಂಡಿಮುಕ್ತಗೊಳಿಸಲಾಗುವುದು. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 8-10 ದಿನಗಳ ನಂತರವೂ ಗುಂಡಿಗಳಿದ್ದರೆ, ಹಸ್ತಾಂತರದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು. 

ದಿನಕ್ಕೆ 20 ಕಿ.ಮೀ ಗುಂಡಿ ಮುಚ್ಚುವ ಪೈಥಾನ್‌: ನಗರದಲ್ಲಿ ಪ್ರಸ್ತುತ ಮೂರು ಪೈಥಾನ್‌ ಯಂತ್ರಗಳಿವೆ. ಒಂದು ಯಂತ್ರ ದಿನಕ್ಕೆ ಮೂರು ಪಾಳಿಯಲ್ಲಿ ಸುಮಾರು 20 ಕಿ.ಮೀ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುತ್ತದೆ. ಪೈಥಾನ್‌ ಮೂಲಕ ಗುಂಡಿ ಮುಚ್ಚುವ ಕಾರ್ಯವನ್ನು ಅಮೆರಿಕದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಪ್ರತಿ ಕಿ.ಮೀ.ಗೆ ಒಂದು ತಿಂಗಳಿಗೆ 1.41 ಲಕ್ಷ ರೂ. ಪಾವತಿಸಲಾಗುತ್ತಿದ್ದು, ವಾರ್ಷಿಕ 18 ಲಕ್ಷ ರೂ. ನೀಡಲಾಗುತ್ತಿದೆ. ಆದರೆ, ಯಂತ್ರವನ್ನು ಸಂಚಾರ ಪೊಲೀಸರಿಗೆ ಹಸ್ತಾಂತರಿಸಿದರೆ, ಅದು “ರಿಸರ್ವ್‌’ (ಮೀಸಲು ರೂಪದಲ್ಲಿ) ಆಗಿದ್ದರೂ ಅಥವಾ ಗುಂಡಿ ಮುಚ್ಚುವ ಕೆಲಸವಿಲ್ಲದೆ ಖಾಲಿ ಇದ್ದರೂ ಬಾಡಿಗೆ ಪಾವತಿಸಬೇಕಾಗುತ್ತದೆ.

* ವಿಜಯಕುಮಾರ್‌ ಚಂದರಗಿ 

ಟಾಪ್ ನ್ಯೂಸ್

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.