ಲಿವ್ ಇನ್ ರಿಲೇಶನ್ ಜೋಡಿಯ ಜಗಳ: ಆರು ವರ್ಷದ ಪುತ್ರನ ಜತೆಗೆ ತಂದೆ ಪರಾರಿ
Team Udayavani, Jun 17, 2023, 11:38 AM IST
ಬೆಂಗಳೂರು: ಸಹ ಜೀವನ (ಲಿವ್ ಇನ್ ರಿಲೇಶನ್‌ಶಿಪ್) ನಡೆಸುತ್ತಿದ್ದ ಜೋಡಿ ಮಧ್ಯೆ ಜಗಳ ಉಂಟಾಗಿ ಇವರಿಗೆ ಜನಿಸಿದ 6 ವರ್ಷದ ಬಾಲಕನನ್ನು ಪ್ರಿಯಕರ ಅಪಹರಿಸಿದ್ದಾನೆ. ಇತ್ತ ಪ್ರೇಯಸಿ ನಮಗೆ ಜನಿಸಿದ ಬಾಲಕನನ್ನು ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ್ದಾಳೆ.
ಕೋಲ್ಕತಾದ ಮಹಿಳೆ ಹಾಗೂ ಬಳ್ಳಾರಿಯ ಯುವಕ ಇಬ್ಬರೂ ಹಲವು ವರ್ಷಗಳಿಂದ ಲಿನ್ ಇನ್ ರಿಲೇಶನ್ ಶಿಪ್‌ನಲ್ಲಿ ವಾಸಿಸುತ್ತಿದ್ದಾರೆ. 6 ವರ್ಷಗಳ ಹಿಂದೆ ಇಬ್ಬರಿಗೂ ಗಂಡು ಮಗು ಜನಿಸಿತ್ತು. ಕೆಲ ದಿನಗಳ ಹಿಂದೆ ಸಂಗಾತಿ ಜತೆಗೆ ಆರೋಪಿ ಪ್ರಿಯಕರ ಜಗಳ ಮಾಡಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ಪುತ್ರನನ್ನು ಪ್ರೇಯಸಿ ಶಾಲೆಗೆ ಬಿಡಲು ತೆರಳಿದ್ದಾಗ ಒಂದು ಆಟೋದಲ್ಲಿ ತಾನು ಹಾಗೂ ಇನ್ನೊಂದು ಆಟೋದಲ್ಲಿ ಇಬ್ಬರು ಮಹಿಳೆಯರ ಜತೆಗೆ ಹಿಂಬಾಲಿಸಿಕೊಂಡು ಬಂದಿದ್ದ. ಮಾರ್ಗಮಧ್ಯೆ ಕೊಡಿಗೇಹಳ್ಳಿಯ ಬಳಿ ಪ್ರೇಯಸಿ ಕೈಯಿಂದ ಮಗನನ್ನು ಕಸಿದುಕೊಂಡು ತಾನು ಬಂದಿದ್ದ ಆಟೋದಲ್ಲಿ ಪರಾರಿಯಾಗಿದ್ದ.
ಮತ್ತೂಂದು ಆಟೋದಲ್ಲಿ ಬಂದಿದ್ದ ಮಹಿಳೆಯರು ಹಾಗೂ ಮಗುವಿನ ತಾಯಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿ ಜಗಳ ಮಾಡುತ್ತಿರುವುದನ್ನು ಗಮನಿಸಿ ಬಾಲಕನ ತಾಯಿ ಸೇರಿದಂತೆ ಮೂವರೂ ಮಹಿಳೆಯರು ಹಾಗೂ ಆಟೋ ಚಾಲಕನನ್ನ ವಶಕ್ಕೆ ಪಡೆದು ಕೊಡಿಗೆಹಳ್ಳಿ ಠಾಣೆಗೆ ಕರೆ ತಂದಿದ್ದರು. ಬಳಿಕ ಕೂಲಂಕಷವಾಗಿ ವಿಚಾರಣೆ ನಡೆಸಿ ದಾಗ ನಡೆದ ಸಂಗತಿ ಬೆಳಕಿಗೆ ಬಂದಿದೆ.
ಇದೀಗ ನಾಪತ್ತೆಯಾಗಿರುವ ಬಾಲಕ ಹಾಗೂ ಆತನ ತಂದೆ ಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Bengaluru: ಅಡಮಾನ ಆಸ್ತಿ ಮಾರಾಟ ಮಾಡಲು ಶೀಘ್ರದಲ್ಲೇ ಇ-ಖಾತೆ
Metro: ನಾನ್ ಪೀಕ್ ಅವರ್: ಮೆಟ್ರೋ ಶೇ.5 ಅಗ್ಗ ?
Bengaluru: 40 ಲಕ್ಷ ರೂ. ನಕಲಿ ಸಿಗರೆಟ್ ಜಪ್ತಿ: ಕೇರಳದ ಇಬ್ಬರು ಆರೋಪಿಗಳ ಸೆರೆ
Bengaluru: ಐಶ್ವರ್ಯ ಗೌಡಳಿಂದ ಇನ್ನೊಂದು ಬೆಂಜ್ ಕಾರು ಜಪ್ತಿ
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.