ಸದ್ದಿಲ್ಲದೆ ಅಡಗಿ ಕೂತ ಗನ್‌ ಲೋಕ


Team Udayavani, Sep 18, 2017, 12:02 PM IST

city-package-manju.jpg

ಪ್ರಶಾಂತ ಸಂಜೆ. ನಿರ್ಜನ ರಸ್ತೆಗಳಲ್ಲಿ ನಿಶ್ಶಬ್ದ. ದೂರದ ರಸ್ತೆಯಲ್ಲಿ ವಾಹನಗಳು ಹರಿದಾಡುವ ಸರ್‌-ಬರ್‌ ಸದ್ದಿನ ಜತೆ ಹಾರ್ನ್ಗಳ ಮೆಲು ಆಲಾಪ. ಬೆಂಗಳೂರು ಎಷ್ಟೊಂದು ಶಾಂತವಾಗಿದೆ ಎಂದುಕೊಳ್ಳುವಷ್ಟರಲ್ಲೇ ಅದೆಲ್ಲಿಂದಲೋ “ಡಬ್‌’ ಎಂಬ ಸದ್ದು ಕಿವಿಗಪ್ಪಳಿಸುತ್ತದೆ. ಅದು ಬಂದೂಕಿನಿಂದ ಗುಂಡು ಹಾರಿದ ಕ್ಷಣ! ತುಸು ಹೊತ್ತು ಎದೆಬಡಿತ ಜೋರಾಗುತ್ತದೆ. ಮತ್ತೆರಡು ಬಾರಿ “ಡಬ್‌’ ಸದ್ದು ಕಿವಿಗಳಲ್ಲಿ ಗುಯ್‌ಗಾಡುತ್ತದೆ.

ಹೊರಗೆ ಮರವೇರಿ ಕುಳಿತಿದ್ದ ಹಕ್ಕಿ-ಪಿಕ್ಕಿಗಳು ವಿಚಿತ್ರವಾಗಿ ಕೂಗುತ್ತಾ ಹಾರಿ ಹೋಗುತ್ತವೆ… ಇದಾವುದೋ ಸಿನಿಮಾದ ಸೀನ್‌ ಅಲ್ಲ. ರಾಜಧಾನಿಯಲ್ಲಿ ಈಚೆಗೆ ಹೆಚ್ಚಿರುವ ಕಗ್ಗೊಲೆಗಳ ಸಣ್ಣ ಚಿತ್ರಣ. ವಲಸಿಗರ ಸ್ವರ್ಗವೆನಿಸಿಕೊಂಡಿರುವ ಬೆಂಗಳೂರಲ್ಲಿ ಈಗ ಗುಂಡಿನ ಮೊರೆತದ್ದೇ ಚರ್ಚೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ. ಅದಕ್ಕೂ ಮುನ್ನ ನಡೆದ ಒಂದೆರಡು ಶೂಟೌಟ್‌ಗಳು ನಗರವಾಸಿಗಳನ್ನು ಬೆಚ್ಚಿಬೀಳಿಸಿವೆ.

ಹಾಗಾದರೆ ನಗರದಲ್ಲಿ ಪಿಸ್ತೂಲುಗಳು ಆಟಿಕೆ ವಸ್ತುವಿನಷ್ಟೇ ಸುಲಭವಾಗಿ ಸಿಗುತ್ತವಾ? ಹತ್ಯೆಗೆ ಬಳಸುವ ಗನ್‌ಗಳು ನಗರಕ್ಕೆ ಬರುವುದು ಎಲ್ಲಿಂದ? ಅವುಗಳನ್ನು ತರುವವರು ಯಾರು? ತರಿಸಿ, ಬಳಸುವವರು ಯಾರು? ಯಾರೆಲ್ಲಾ ಗನ್‌ ಇರಿಸಿಕೊಳ್ಳಬಹುದು? ರಕ್ಷಣೆಗೆ ಬಂದೂಕು ಬೇಕೆಂದರೆ ಅನುಮತಿ ಪಡೆಯುವುದು ಹೇಗೆ? ಎಂಬೆಲ್ಲಾ ಮಾಹಿತಿ ಈ ವಾರದ “ಸುದ್ದಿ ಸುತ್ತಾಟ; ಉದಯವಾಣಿ ಒಳನೋಟ’ದಲ್ಲಿ…  

ಬೆಂಗಳೂರು: ನಾಗಾಲೋಟದಲ್ಲಿ ಬೆಳೆಯುತ್ತಿರುವ ನಗರದಲ್ಲಿ ಪಿಸ್ತೂಲ್‌, ಗನ್‌ ಮಕ್ಕಳ ಆಟಿಕೆ ವಸ್ತುಗಳಾಗಿವೆಯೇ? ಕಾಸಿದ್ದರೆ ಇವೆಲ್ಲಾ ಕಾಳಸಂತೆಯಲ್ಲಿ ಸಿಗುವ ಸುಲಭ ವಸ್ತುಗಳೇ? ಪತ್ರಕರ್ತೆ ಗೌರಿಲಂಕೇಶ್‌ ಹತ್ಯೆಗೆ ಹಂತಕರು 7.65 ಎಂಎಂ ಕಂಟ್ರಿಮೇಡ್‌ ಪಿಸ್ತೂಲ್‌ ಬಳಸಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಇಂತಹದ್ದೊಂದು ಪ್ರಶ್ನೆ ಉದ್ಭವಿಸಿದೆ.

ಹೌದು. ಗೌರಿ ಲಂಕೇಶ್‌ ಹತ್ಯೆಗೂ ಮುನ್ನ ನಗರದಲ್ಲಿ ನಡೆದ ಎರಡು ಗುಂಡಿನ ದಾಳಿ ಪ್ರಕರಣಗಳಲ್ಲಿಯೂ ಹಂತಕರು ಕಂಟ್ರಿಮೇಡ್‌ ಪಿಸ್ತೂಲ್‌ ಹಾಗೂ ಗನ್‌ಗಳನ್ನೇ ಬಳಸಿರುವುದು ರಾಜಧಾನಿಯಲ್ಲಿ ಶಸ್ತ್ರಾಸ್ತ್ರ ಮಾರಾಟ ದಂಧೆ ಅವ್ಯಾಹತವಾಗಿದೆ ಎಂಬುದನ್ನು ತೆರೆದಿಟ್ಟಿದೆ.

ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ತಡೆಕಾಯಿದೆ ಅಡಿಯಲ್ಲಿ ದಾಖಲಾಗಿರುವ 67 ಪ್ರಕರಣಗಳು ಹಾಗೂ 82 ಮಂದಿ ಆರೋಪಿಗಳ ಬಂಧನ ಸೇರಿದಂತೆ ಇನ್ನಿತರೆ ಅಂಕಿ ಅಂಶಗಳು ಮತ್ತಷ್ಟು ಪುರಾವೆ ಒದಗಿಸುತ್ತವೆ.ಇಷ್ಟಕ್ಕೂ ನಗರಕ್ಕೆ ಯಾವ ಮಾರ್ಗಗಳಲ್ಲಿ ಕಂಟ್ರಿಮೇಡ್‌ ಪಿಸ್ತೂಲ್‌, ಗನ್‌, ಗುಂಡುಗಳು ಸರಬರಾಜು ಆಗಲಿವೆ ಎಂಬುದನ್ನು ಕೆದಕಿದರೆ ಕುತೂಹಲದ ಸಂಗತಿಗಳು ತೆರೆದುಕೊಳ್ಳುತ್ತವೆ.

ಗನ್‌ ತರುವುದ್ಯಾರು?
ಉದ್ಯೋಗ ಅರಸಿ ಉತ್ತರಭಾರತದ ಕಡೆಯಿಂದ ಬೆಂಗಳೂರಿಗೆ ಬರುವ ಕೆಲವರು ಇಲ್ಲಿನ ಕ್ರಿಮಿನಲ್‌ಗ‌ಳಿಗೆ ಅಕ್ರಮವಾಗಿ ತಂದುಕೊಡುತ್ತಾರೆ ಎಂದರೆ ನಂಬಲೇಬೇಕು. ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಕೆಲವರು ಇಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೈಲು ಸೇರುತ್ತಾರೆ. ಅಲ್ಲಿ ಸ್ಥಳೀಯ ಕ್ರಿಮಿನಲ್‌ಗ‌ಳ ಜೊತೆ ಸ್ನೇಹ ಸಂಪಾದಿಸಿಕೊಂಡು ಜೈಲಿನಿಂದ ವಾಪಸಾದ ಬಳಿಕ ತಮ್ಮ ಸ್ವಂತ ಊರುಗಳಿಗೆ ತೆರಳಿ ಅಲ್ಲಿಂದ ಅತೀ ಕಡಿಮೆ ಎಂದರೆ,

5 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿಯೇ ಸಿಗುವಂತಹ ಕಂಟ್ರಿಮೇಡ್‌ ಪಿಸ್ತೂಲ್‌ಗ‌ಳನ್ನು, ಅಕ್ರಮವಾಗಿ ರೈಲು ಪ್ರಯಾಣದ ಮೂಲಕ ನಗರಕ್ಕೆ ತಂದು ತಮಗೆ ಪರಿಚಯವಿರುವ ಕ್ರಿಮಿನಲ್‌ಗ‌ಳಿಗೆ ವ್ಯವಸ್ಥಿತವಾಗಿ ತಲುಪಿಸುತ್ತಾರೆ. ಬಹುತೇಕ ಬಿಹಾರ ಹಾಗೂ ಓಡಿಶಾ, ಮಧ್ಯಪ್ರದೇಶ, ಉತ್ತರಪ್ರದೇಶದ ಭಾಗಗಳಿಂದಲೇ ಈ ಪಿಸ್ತೂಲ್‌ಗ‌ಳನ್ನು ಹೊತ್ತು ತರುವ ಜಾಲವಿದೆ.

ಇದಲ್ಲದೆ ಡೀಲರ್‌ಗಳ ಮೂಲಕವೂ ಈ ದಂಧೆ ನಡೆಯುತ್ತದೆ. ವಿಜಯಪುರ, ಕಲಬುರಗಿ ಹಾಗೂ ರಾಜಧಾನಿ ಬೆಂಗಳೂರಲ್ಲೂ ಜಾಲ ಹೊಂದಿರುವ ಗನ್‌ ಡೀಲರ್‌ಗಳು ಹೊರ ರಾಜ್ಯದವರ ಬಳಿ 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಗನ್‌ ಖರೀದಿಸಿ ಇಲ್ಲಿ 10ರಿಂದ 20 ಸಾವಿರ ರೂ.ಗೆ ಮಾರಾಟ ಮಾಡುತ್ತಾರೆ ಎಂದು ಇತ್ತೀಚೆಗೆ ಪ್ರಕರಣವೊಂದನ್ನು ಬೇಧಿಸಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸುತ್ತಾರೆ.  

ಗುಂಡು ಹಾರಿದರೆ ಮಾತ್ರ ಪತ್ತೆ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಂಟ್ರಿಮೇಡ್‌ ಪಿಸ್ತೂಲ್‌ಗ‌ಳ ತಯಾರಿ ಕಡಿಮೆ. ಕಲಬುರಗಿ, ವಿಜಯಪುರದ ಕೆಲವೆಡೆ ಕಂಟ್ರಿಮೇಡ್‌ ಪಿಸ್ತೂಲ್‌ಗ‌ಳು ತಯಾರಾಗುತ್ತವೆ. ಮಲೆನಾಡಿನ ಕೆಲ ಕಾಡು ಪ್ರದೇಶಗಳಲ್ಲಿ ಗನ್‌ಗಳ ಬಳಕೆ, ಕಂಟ್ರಿಮೇಡ್‌ ಪಿಸ್ತೂಲುಗಳ ತಯಾರಿ ನಡೆಯುತ್ತದೆ. ಸೀಮಿತ ಮಾರಾಟ ಮತ್ತು ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬಳಕೆಯಾಗುವ ಇಂಥ ಗನ್‌ಗಳನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯ.

ಸಾಮಾನ್ಯವಾಗಿ ಇಂಥ ಅಕ್ರಮ ಗನ್‌ಗಳಿಂದ ಒಮ್ಮೆ ಗುಂಡು ಹಾರಿದರೆ ಅಥವಾ ಯಾರನ್ನಾದರೂ ಬಂಧಿಸಿದ ಬಳಿಕವೇ ಅಕ್ರಮ ಶಸ್ತ್ರಾಸ್ತ್ರಗಳಿರುವ ಸಂಗತಿ ಬೆಳಕಿಗೆ ಬರುತ್ತದೆ. ಅಲ್ಲಿವರೆಗೂ ಅವುಗಳ ಸಣ್ಣ ಸುಳಿವೂ ಲಭ್ಯವಾಗುವುದಿಲ್ಲ ಎಂದು ಕಳೆದ 25 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ಅನುಭವ ಹಂಚಿಕೊಳ್ಳುತ್ತಾರೆ.  

ಸುಪಾರಿ ಕಿಲ್ಲಿಂಗ್‌ಗೆ ಅಕ್ರಮ ಶಸ್ತ್ರ! 
ಸಮಾಜದ ಗಣ್ಯರ ಹತ್ಯೆಗೆ ಹಂತಕರು ಬಳಸುವುದು ಅಕ್ರಮವಾಗಿ ಸಿಗುವ ಕಂಟ್ರಿಮೇಡ್‌ ಪಿಸ್ತೂಲ್‌, ಅಥವಾ ಗನ್‌ಗಳನ್ನೇ. ಹಂತಕರು ಇವನ್ನೇ ಏಕೆ ಬಳಸುತ್ತಾರೆ ಎಂಬ ಮಾಹಿತಿ ಕೆದಕಿದರೆ ಕುತೂಹಲದ ಸಂಗತಿ ಹೊರಬೀಳುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳು, ಉದ್ಯಮಿಗಳನ್ನು ಮುಗಿಸಲು ಸುಫಾರಿ ಪಡೆಯುವ ಹಂತಕರು, ತಮ್ಮ ಸ್ಕೆಚ್‌ನ ಮೊದಲ ಅಸ್ತ್ರವಾಗಿ ಕಂಟ್ರಿಮೇಡ್‌ ಪಿಸ್ತೂಲ್‌ಗ‌ಳನ್ನ ಬಳಸುವ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಇದಕ್ಕೆ ಕಾರಣವಿಲ್ಲ ಎಂದೇನಿಲ್ಲ.

ಕಾಳಸಂತೆಯಲ್ಲಿ ಸಿಗುವ ಪಿಸ್ತೂಲ್‌, ಗನ್‌ಗಳಿಗೆ ಬಳಸುವ ಗುಂಡುಗಳು ಕೃತ್ಯ ಎಸಗಿದ ಬಳಿಕ ಪೊಲೀಸರಿಗೆ ಲಭ್ಯವಾದರೂ ಅಷ್ಟು ಸುಲಭವಾಗಿ ಸಿಕ್ಕಿಬೀಳುವುದಿಲ್ಲ ಎಂಬ ಬಲವಾದ ನಂಬಿಕೆಯಿಂದಲೇ ಡೀಲ್‌ ಒಪ್ಪಿಕೊಳ್ಳುತ್ತಾರೆ. ಬಳಿಕ ಸುಪಾರಿ ನೀಡುವವರಿಂದಲೂ ಅಥವಾ ತಾವೇ ತಮ್ಮ ಸಂಪರ್ಕದಲ್ಲಿ ಕಂಟ್ರೀಮೇಡ್‌ ಪಿಸ್ತೂಲ್‌ಗ‌ಳನ್ನು ತರಿಸಿಕೊಂಡು ಕೆಲಸ ಮುಗಿಸಿ ಪರಾರಿಯಾಗುತ್ತಾರೆ.

ಈ ಪ್ರಕರಣಗಳ ಬೆನ್ನುಬೀಳುವ ಪೊಲೀಸರು, ಘಟನಾ ಸ್ಥಳದಲ್ಲಿ ದೊರೆತ ಬುಲೆಟ್‌ಗಳನ್ನು ಸಂಗ್ರಹಿಸಿ ಎಲ್ಲಿಂದ ತರಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪರದಾಡಬೇಕಾಗುತ್ತದೆ. ಒಂದು ವೇಳೆ ದುಷ್ಕರ್ಮಿಗಳು ಪರವಾನಗಿ ಪಡೆದ ಪಿಸ್ತೂಲ್‌, ಗನ್‌ ಬಳಸಿ ಹತ್ಯೆಗೈದರೆ ಸುಲಭವಾಗಿ ಸಿಕ್ಕಿಬೀಳುತ್ತಾರೆ.

ಯಾಕೆಂದರೆ ವ್ಯಕ್ತಿಯ ಮೇಲೆ ಹಾರಿಸಿದ ಬುಲೆಟ್‌ಗಳನ್ನು ಸಂಗ್ರಹಿಸುವ ಪೊಲೀಸರು, ಗುಂಡುಗಳ ಮೇಲಿರುವ ಕೆಲ ಗುರುತುಗಳನ್ನ ಆಧರಿಸಿ ಯಾವ ಶಸ್ತ್ರಾಸ್ತ್ರ ಮಾರಾಟ ಮಳಿಗೆಗಳಿಂದ ಖರೀದಿ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿಕಟ್ಟುತ್ತಾರೆ. ಹೀಗಾಗಿ ಹಂತಕರು ಬಹುತೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಖರೀದಿಸಿದ ಕಂಟ್ರಿಮೇಡ್‌ ಪಿಸ್ತೂಲ್‌, ಗುಂಡುಗಳನ್ನು ಬಳಸಿಯೇ ಕೃತ್ಯ ಎಸಗುತ್ತಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಘಟನೆ:1
ಅ.30, 2016 2016ರ ಅಕ್ಟೋಬರ್‌ 30ರ ನಡುರಾತ್ರಿ ಸಂಜಯನಗರ ಪೊಲೀಸ್‌ ಠಾಣೆಗೆ ಕೂಗಳತೆ ದೂರಲ್ಲಿರುವ ಪೋಸ್ಟ್‌ಲ್‌ ಕಾಲೋನಿಯಲ್ಲಿ ಗುಂಡಿನ ಸದ್ದು ಕೇಳಿತ್ತು. ಸ್ಥಳೀಯ ನಿವಾಸಿ, ಉದ್ಯಮಿ ಸುರೇಂದ್ರ ಪಚೌರಿ ಕಾರಿನಿಂದ ಇಳಿಯುತ್ತಿದ್ದಂತೆ, ಕಾದು ಕುಳಿತಿದ್ದ ಹಂತಕರು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಪಚೌರಿ ಅವರ ದೇಹ ಹೊಕ್ಕಿದ್ದ ಗುಂಡುಗಳನ್ನು ವಶಕ್ಕೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಆದರೆ ಇದುವರೆಗೂ ಹಂತಕರ ಸುಳಿವು ಲಭ್ಯವಾಗಿಲ್ಲ. ಅಕ್ರಮ ಶಸ್ತ್ರಾಸ್ತ್ರ ಬಳಸಿಯೇ ಹತ್ಯೆಮಾಡಲಾಗಿದೆ ಎಂದು ಶಂಕಿಸಲಾಗಿದೆ.  

ಘಟನೆ.2  
ಫೆ.4,  2017 ಇದೇ ವರ್ಷ ಫೆಬ್ರವರಿ 4ರಂದು ದಾಸನಪುರ ಎಪಿಎಂಸಿ ಸದಸ್ಯ, ಕಾಂಗ್ರೆಸ್‌ ಮುಖಂಡ ಕಡಬಗೆರೆ ಶ್ರೀನಿವಾಸ್‌ ಮೇಲೆ ಗುಂಡಿನ ದಾಳಿ ನಡೆಯುತ್ತದೆ. ಯಲಹಂಕ ಬಳಿಯ ಕೋಗಿಲು ಕ್ರಾಸ್‌ಬಳಿ ಮಟಮಟ ಮಧ್ಯಾಹ್ನವೇ ದುಷ್ಕರ್ಮಿಗಳು ಶ್ರೀನಿವಾಸ್‌ ಮೇಲೆ ಗುಂಡು ಹಾರಿಸುತ್ತಾರೆ. ಅದೃಷ್ಟವಶಾತ್‌ ಶ್ರೀನಿವಾಸ್‌ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಆದರೆ ಯಥಾ ಪ್ರಕಾರ ಈ ಪ್ರಕರಣದಲ್ಲೂ ಗುಂಡುಗಳು ಸಿಕ್ಕರೂ, ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳು ಬಳಸಿದ ಅಕ್ರಮ ಶಸ್ತ್ರಾಸ್ತ್ರಗಳು ಎಲ್ಲಿಂದ ಸರಬರಾಕಾಗಿವೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ತನಿಖಾಧಿಕಾರಿಗಳು, ವಿಜಯಪುರ, ಕಲಬುರಗಿಯ ಜೈಲುಗಳಲ್ಲಿರುವ ಕೆಲ ಕೈದಿಗಳನ್ನು ವಿಚಾರಣೆ ನಡೆಸಿದ್ದರು.

ಪರವಾನಗಿ ಮತ್ತು ನಿರ್ಬಂಧ ದೇಶದ ಇತರೆ ಮಹಾನಗರಗಳಿಗೆ ಹೊಲೀಸಿದರೆ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ತಹಬದಿಯಲ್ಲಿದೆ. ಹೀಗಾಗಿ ನಗರದ ಹೊರವಲಯಗಳಲ್ಲಿ ವಾಸಿಸುವ ಕೆಲವರಿಗೆ ಮಾತ್ರ ಜೀವ ಭದ್ರತೆ, ಬೆಳೆಗಳ ರಕ್ಷಣೆ, ಕಾಡು ಪ್ರಾಣಿಗಳ ಹಾವಳಿ ತಡೆ, ಕ್ರೀಡಾ ಉದ್ದೇಶಗಳಿಗೆ ಶೂಟಿಂಗ್‌ ರೈಫ‌ಲ್‌, ಪಿಸ್ತೂಲ್‌, ರಿವಾಲ್ವರ್‌ ಹೊಂದಲು ಇದುವರೆಗೆ ಸುಮಾರು 11,500 ಪರವಾನಗಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಯಿಂಟ್‌ 22 ಎಂಎಂ, ಪಾಯಿಂಟ್‌ 32 ಎಂಎಂ ಪಾಯಿಂಟ್‌ 30-60 ಹಾಗೂ ಪಾಯಿಂಟ್‌ 315 ಎಂ.ಎಂ (ಡಿಡಿಎಲ್‌ಆರ್‌) ರಿವಾಲ್ವರ್‌/ ಪಿಸ್ತೂಲ್‌ಗ‌ಳು, ಏಕನಳಿಕೆ ಹಾಗೂ ದ್ವಿ ನಳಿಕೆ ನಾಡ ಬಂದೂಕುಗಳನ್ನು ಮಾತ್ರ ಪರವಾನಗಿ ಪಡೆದು ಬಳಸಲು ಅವಕಾಶವಿದೆ. ಉಳಿದಂತೆ 9 ಎಂಎಂ, 30 ಎಂಎಂ, 9×19 ಎಂಎಂ, 7.62 ಎಂಎಂ (ಎ.ಕೆ 47), 5.6 ಎಂಎಂ (ಎಕೆ 56) ಮತ್ತು 5.65 ಎಂಎಂ (ಎಕೆ 74) ಶಸ್ತ್ರಾಸ್ತ್ರಗಳನ್ನು ಸೈನಿಕರು ಹಾಗೂ ಪೊಲೀಸರು ಮಾತ್ರ ಬಳಸಲು ವಕಾಶವಿದ್ದು, ಇವುಗಳನ್ನು ಹೊಂದಲು ಸಾರ್ವಜನಿಕರಿಗೆ ಪರವಾನಗಿ ನೀಡುವುದಿಲ್ಲ.

ಪರವಾನಗಿ ಎಲ್ಲರಿಗಲ್ಲ!  
ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ವಾಸಿಸುವವರು ಗನ್‌, ಪಿಸ್ತೂಲ್‌, ಶೂಟಿಂಗ್‌ ರೈಫ‌ಲ್‌, ಬಂದೂಕುಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸುವ ವ್ಯಕ್ತಿಯ ಪೂರ್ವಾಪರವನ್ನು ಪರಿಶೀಲಿಸುವಂತೆ ಸ್ಥಳೀಯ ಪೊಲೀಸ್‌ ಠಾಣಾ ವ್ಯಾಪ್ತಿಗೆ ಕೋರಲಾಗುತ್ತದೆ. ಅಲ್ಲಿ ಆತನ ವಿರುದ್ಧ ಕ್ರಿಮಿನಲ್‌ ಕೇಸ್‌ ಇರಬಾರದು. ಇದಲ್ಲದೆ ಜೀವ ಭದ್ರತೆ ಕಾರಣಕ್ಕೆ  ಲೈಸೆನ್ಸ್‌ ಪಡೆದುಕೊಳ್ಳುವವರು ಯಾರಿಂದ ಜೀವ ಬೆದರಿಕೆಯಿದೆ.

ಆತನ ಕಾರ್ಯಚಟುವಟಿಕೆ, ವ್ಯಾಪಾರ ವಹಿವಾಟುಗಳನ್ನು ಪರಿಶೀಲಿಸಲಾಗುತ್ತದೆ. ನಿಯಮಾವಳಿಗಳಲ್ಲಿ ಯಾವುದೇ ಒಂದು ಅಂಶ ಉಲ್ಲಂಘನೆಯಾದರೂ ಪರವಾನಗಿ ನೀಡುವುದಿಲ್ಲ. ಅದೇ ಕ್ರೀಡಾಪಟುಗಳಿಗೆ ಶೂಟಿಂಗ್‌ ರೈಫ‌ಲ್‌ ನೀಡಲಾಗುತ್ತದೆ, ಕೃಷಿಕರಿಗೆ ಕಾಡುಪ್ರಾಣಿಗಳ ರಕ್ಷಣೆ ಪಡೆದುಕೊಳ್ಳಲು ಡಿಬಿಬಿಎಲ್‌ ಏಕನಳಿಕೆ ಹಾಗೂ ದ್ವಿ ನಳಿಕೆ ಬಂದೂಕುಗಳಿಗೆ ಪರವಾನಗಿ ನೀಡಲಾಗುತ್ತದೆ. ನಗರದಲ್ಲಿ ಸುಮಾರು 12ಕ್ಕೂ ಪರವಾನಗಿ ಹೊಂದಿದ ಶಸ್ತ್ರಾಸ್ತ್ರ ಮಾರಾಟ ಮಾಡುವ ಮಳಿಗೆಗಳು ಹಾಗೂ ಕೆಲ ಡೀಲರ್‌ಗಳಿದ್ದಾರೆ.

ಹೀಗಾಗಿ ಪರವಾನಗಿ ಪಡೆದುಕೊಂಡವರು ಯಾವ ಗನ್‌ ಹೌಸ್‌ನಲ್ಲಿ ಖರೀದಿ ಮಾಡಲಾಗುತ್ತದೆ. ಗುಂಡುಗಳನ್ನು ಖರೀದಿ ಮಾಡಲಾಗುತ್ತದೆ ಎಂಬುದರ ಬಗ್ಗೆಯೂ ಖಚಿತ ಕೋಟೇಶನ್‌ ದಾಖಲೆ ನೀಡಬೇಕು. ಪ್ರತಿ ಮೂರು ವರ್ಷಗಳಿಗೊಮ್ಮೆ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು ಎಂಬ ನಿಯಮಗಳನ್ನು ಪಾಲಿಸಲಾಗುತ್ತದೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸುತ್ತಾರೆ.  ತಿಂಗಳಿಗೊಮ್ಮೆ ಮಾರಾಟ ವರದಿ ನಗರದಲ್ಲಿ ಶಸ್ತ್ರಾಸ್ತ್ರ ಮಾರಾಟದ ಪರವಾನಗಿ ಹೊಂದಿದ ಮಳಿಗೆಯೊಂದರ ವ್ಯವಸ್ಥಾಪಕರನ್ನು “ಉದಯವಾಣಿ’ ಸಂಪರ್ಕಿಸಿದಾಗ ಹೇಳಿದ್ದಿಷ್ಟು.

“ನಾವು ಮಳಿಗೆಯಲ್ಲಿ ಮಾರಾಟ ಮಾಡುವ ಗನ್‌, ಪಿಸ್ತೂಲ್‌, ರೈಫ‌ಲ್‌, ಗುಂಡುಗಳ ಮಾಹಿತಿಯನ್ನು ಚಾಚೂತಪ್ಪದೆ ದಾಖಲಿಸಿಬೇಕು. ಯಾವುದೇ ವ್ಯಕ್ತಿಗೂ 25ಕ್ಕಿಂತ ಹೆಚ್ಚಿನ ಗುಂಡುಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಅಲ್ಲದೆ ಮಳಿಗೆಯಲ್ಲಿ ಆಗುವ ವಹಿವಾಟಿನ ಕುರಿತು ಪ್ರತಿ ತಿಂಗಳಿಗೊಮ್ಮೆ ಪೊಲೀಸ್‌ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ,’ ಎನ್ನುತ್ತಾರೆ.  

7.65 ಎಂಎಂ ಕಂಟ್ರಿಮೇಡ್‌ ಪಿಸ್ತೂಲನ್ನು ಕ್ರಿಮಿನಲ್‌ಗ‌ಳು ಅತಿಹೆಚ್ಚು ಬಳಸುತ್ತಾರೆ  ಪಿಸ್ತೂಲ್‌ ಮಾರುವಾಗಸಿಕ್ಕಿಬಿದ್ದ ಜುಲೈ 12ರಂದು ಯಲಹಂಕ ಬಳಿಯ ಬ್ಯಾಂಕ್‌ ಕಾಲೋನಿ ಎದುರು ಬಿಹಾರ ಮೂಲದ ಮಹಮದ್‌ ಜಹಂಗೀರ್‌ ಎಂಬಾತ ಪಿಸ್ತೂಲ್‌ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಹಾಡಹಗಲೇ ಪಿಸ್ತೂಲ್‌ ಮಾರಾಟ ಮಾಡಲು ಯತ್ನಿಸುತ್ತಿದ್ದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದರು. ಈ ಮಾಹಿತಿ ಆಧರಿಸಿ ಜಹಂಗೀರ್‌ ವಾಸಿಸುತ್ತಿದ್ದ ಜ್ಯುಡೀಶಿಯಲ್‌ ಲೇಔಟ್‌ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಪಿಸ್ತೂಲ್‌ ಹಾಗೂ ಗುಂಡುಗಳನ್ನು ವಶಕ್ಕೆ ಪಡೆದಿದ್ದರು.  

ಗೌರಿ ಲಂಕೇಶ್‌ ಹತ್ಯೆಗೆಬಳಸಿದ ಪಿಸ್ತೂಲ್‌ ಜಾಡು ಹಿಡಿದು!
ಸೆ.5ರಂದು ಹತ್ಯೆಯಾದ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿಲಂಕೇಶ್‌ ಹಂತಕರ ಜಾಡುಹಿಡಿದು ತನಿಖೆ ಆರಂಭಿಸಿದ್ದ ವಿಶೇಷ  ತನಿಖಾ ತಂಡದ ಅಧಿಕಾರಿಗಳು ವಿಜಯಪುರ ಹಾಗೂ ಕಲಬುರಗಿ ಜೈಲುಗಳಿಗೂ ಭೇಟಿನೀಡಿದ್ದರು. ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್‌ ವಿಜಯಪುರ ಹಾಗೂ ಕಲಬುರಗಿ ಕಡೆಯಿಂದ ಸರಬರಾಜಾಗಿತ್ತೇ ಎಂಬ ಅನುಮಾನದ ಮೇರೆಗೆ ತೆರಳಿದ್ದ ತನಿಖಾ ತಂಡ, ಎರಡೂ ಜೈಲುಗಳಲ್ಲಿ ಪಿಸ್ತೂಲ್‌ ತಯಾರಿಸುವುದು, ಮಾರಾಟ ದಂಧೆ ನಡೆಸಿ ಕೈದಿಗಳಾಗಿರುವ ಹಳೇ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ.

ರಾಜ್ಯದ ಮಟ್ಟಿಗೆ ಕಂಟ್ರಿಮೇಡ್‌ ಮೇಡ್‌ ಪಿಸ್ತೂಲ್‌ ಮಾರಾಟ ಕರಾಳ ಸಂತೆ ಎರಡೂ ಜಿಲ್ಲೆಗಳಲ್ಲಿ ಪ್ರಬಲವಾಗಿ ಬೇರೂರಿದೆ. ಅಲ್ಲಿಂದಲೇ ಬೆಂಗಳೂರು, ಸೇರಿದಂತೆ ಇತರ ಜಿಲ್ಲೆಗಳಿಗೂ  ಅಕ್ರಮವಾಗಿ ಶಸ್ತ್ರಾಸತ್ರಗಳು ಪೂರೈಕೆಯಾಗುತ್ತಿವೆ ಎಂಬ ಸಂಗತಿ ಗುಟ್ಟಾಗಿ ಉಳಿದಿಲ್ಲ. ಹೀಗಾಗಿಯೇ ಯಾವುದೇ ಶೂಟೌಟ್‌ ಪ್ರಕರಣದಲ್ಲಿ ಬಳಕೆಯಾದ ಪಿಸ್ತೂಲ್‌ ಅಥವಾ ಗನ್‌ ಮೂಲ ಆ ಕಡೆಯಿಂದಲೇ ಸರಬರಾಜಾಗಿರಬಹುದು ಎಂಬ ಅನುಮಾನದ ಮೇರೆಗೆ ಪೊಲೀಸರ ದೃಷ್ಟಿ ಹೋಗುತ್ತದೆ.

ಯಾರಿಗೆಲ್ಲಾ ಲೈಸೆನ್ಸ್‌?
-ಉದ್ಯಮಿಗಳು,  
-ಪೆಟ್ರೋಲ್‌ ಬಂಕ್‌ ಮಾಲೀಕರು  
-ಒಂಟಿ ಮನೆ ನಿವಾಸಿಗಳು  
-ಕ್ರೀಡಾಪಟುಗಳು
-ನಿವೃತ್ತ ಸೈನಿಕರಿಗೆ  
-ಕ್ರೀಡಾಪಟುಗಳು (ರೈಫ‌ಲ್‌)

ಅಂಕಿ-ಸಂಖ್ಯೆ
* 15- ನಗರದಲ್ಲಿ ಇನ್ನೂ ಪತ್ತೆಯಾಗದ 7.6ಎಂಎಂ ಪಿಸ್ತೋಲ್‌ಗ‌ಳು

* 26- ನಗರದ ವಿವಿಧ ವ್ಯಕ್ತಿಗಳಿಗೆ ವಿಜಯಪುರದ ಗನ್‌ ಡೀಲರೊಬ್ಬ ಮಾರಾಟ ಮಾಡಿದ ಪಿಸ್ತೋಲ್‌ಗ‌ಳು

* 11- ಪೊಲೀಸರು ಈವರೆಗೆ ವಶಕ್ಕೆ ಪಡೆದ ಅಕ್ರಮ ಪಿಸ್ತೋಲ್‌ಗ‌ಳು

* 5,000- 7,000 ರೂ.-ಭೂಪಾಲ್‌ನಿಂದ ಪಿಸ್ತೋಲ್‌ ಒಂದಕ್ಕೆ ವಿಜಯಪುರದ ಗನ್‌ ಡೀಲರ್‌ಗಳು ಪಾವತಿಸುವ ಮೊತ್ತ

* 12,000- 15,000 ರೂ.- ಡೀಲರ್‌ಗಳು ಪಿಸ್ತೋಲ್‌ ಒಂದಕ್ಕೆ ಪಡೆದ ಮೊತ್ತ

ನಗರದಲ್ಲಿ ಅಕ್ರಮ ಪಿಸ್ತೂಲ್‌ ಹಾಗೂ ಗನ್‌ ಮಾರಾಟಕ್ಕೆ ಕಡಿವಾಣ ಹಾಕಲು ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯ ಅಧಿಕಾರಿಗಳು ನಿಗಾ ಇಟ್ಟಿರುತ್ತಾರೆ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಳೇ ಆರೋಪಿಗಳು ಹಾಗೂ ರೌಡಿಶೀಟರ್‌ಗಳನ್ನು ವಿಚಾರಣೆಗೆ ಒಳಪಡಿಸುತ್ತಿರುತ್ತಾರೆ. ನಗರದಲ್ಲಿ ಈ ಅಕ್ರಮಕ್ಕೆ ಕಡಿವಾಣ ಹಾಕಲು ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪಾಲನೆಯಾಗುತ್ತಿದೆ.  
-ಟಿ.ಸುನೀಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ  

* ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

1-sm

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

10-bike

ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

2

Bengaluru: ಮಗು ಮೇಲೆ ಲೈಂಗಿಕ ದೌರ್ಜನ್ಯ, ಹ*ತ್ಯೆ

High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ

High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ

Theft Case: ಕೆಲಸಕಿದ್ಕ ಹೋಟೆಲ್‌ನಲ್ಲಿ ಕದ್ದ ಮ್ಯಾನೇಜರ್‌

Theft Case: ಕೆಲಸಕಿದ್ಕ ಹೋಟೆಲ್‌ನಲ್ಲಿ ಕದ್ದ ಮ್ಯಾನೇಜರ್‌

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-sm

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

13-uv-fusion

Bharatanatyam: ನಾಟ್ಯಗಳ ರಾಣಿ ಭರತನಾಟ್ಯ

12-uv-fusion

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.