144 ನಾಯಿಗಳಿಗೆ ರೇಬಿಸ್‌ ಸೋಂಕು

ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷೆಗೆ ಒಳಪಡಿಸಿದ ಶೇ.83 ನಾಯಿಗಳಲ್ಲಿ ರೇಬಿಸ್‌ ಸೋಂಕು ದೃಢ

Team Udayavani, Feb 17, 2021, 12:21 PM IST

144 ನಾಯಿಗಳಿಗೆ ರೇಬಿಸ್‌ ಸೋಂಕು

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ರೇಬಿಸ್‌ (ಹುಚ್ಚು ನಾಯಿ ರೋಗ )ಸೋಂಕು ಪರೀ ಕ್ಷೆಗೆ ಒಳ ಪಡಿಸಿದ ನಾಯಿಗಳಲ್ಲಿ ಶೇ.83 ಪ್ರತಿಶತ ಶ್ವಾನಗಳಿಗೆ ರೇಬಿಸ್‌ ದೃಢ ಪಟ್ಟಿದ್ದು, ರೇಬಿಸ್‌ ಸೋಂಕಿನ ಶಂಕೆ ಇರುವ ನಾಯಿಗಳನ್ನು ಪರೀಕ್ಷೆ ಮಾಡಲು ಪಾಲಿಕೆ ಮುಂದಾಗಿದೆ.

ಪಾಲಿಕೆಯ 8 ವಲಯಗಳಿಂದ ಒಟ್ಟು 172 ನಾಯಿ ಗಳಿಗೆ ರೇಬಿಸ್‌ ಸೋಂಕಿನ ಲಕ್ಷ ಣಗಳು ಇರುವ ಶಂಕೆ ಹಿನ್ನೆಲೆಯಲ್ಲಿ ನಾಯಿಗಳ ಮೆದುಳಿನ ಇಪೋ ಕ್ಯಾಂಪಸ್‌ (ಮೆದು ಳಿನ ದ್ರವಯುಕ್ತ) ಮಾದರಿಯನ್ನು ಹೆಬ್ಬಾಳದ ಪಶು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿರುವ “ಪ್ರಾಣಿಗಳಲ್ಲಿ ಸೋಂಕು ಪತ್ತೆ’ ಹಚ್ಚುವ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಸಂಶ ಧನೆ ಒಳಪ ಡಿಸಿದ 172 ನಾಯಿಗಳಲ್ಲಿ

144 ನಾಯಿಗಳಿಗೆ ರೇಬಿಸ್‌ ಇರು ವುದು ದೃಢ ಪಟ್ಟಿದೆ. ಈ ಮೂಲ ಕ ನಗರದಲ್ಲಿ ಪರೀಕ್ಷೆಗೆ ಒಳ ಪಡಿಸಲಾಗಿದ್ದ ಶೇ.83 ನಾಯಿ ಗಳಲ್ಲಿ ದೃಢ ಪಟ್ಟಿರುವುದು ಆತಂಕವನ್ನುಂಟುಮಾಡಿದೆ.

ಚುಚ್ಚು ಮದ್ದು ಕೆಲಸ ಪ್ರಾರಂಭ: ರೇಬಿಸ್‌ ಸೋಂಕುಒಂದು ನಾಯಿಯಿಂದ ಮತ್ತೂಂದು ನಾಯಿಗೆ ಹರಡುವ ಸಾಧ್ಯತೆ ಹೆಚ್ಚು. ಅಲ್ಲದೆ, ಮನುಷ್ಯರಿಗೂ ಇದರಿಂದ ಸಮಸ್ಯೆ. ಹೀಗಾಗಿ, ಪಾಲಿ ಕೆಯ ಪಶು ಪಾಲನಾ ವಿಭಾಗದ ಅಧಿಕಾರಿಗಳು ನಗರದಲ್ಲಿ ರೇಬಿಸ್‌ ದೃಢ ಪಟ್ಟ ನಾಯಿಗಳು ನೆಲೆಸಿದ್ದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಇರುವ ಎಲ್ಲ ನಾಯಿ ಗ ಳಿಗೂ ರೇಬಿಸ್‌ ರೋಗ ನಿರೋಧಕ (ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌ -ಎವಿಆ ರ್‌) ಚುಚ್ಚು ಮದ್ದು ನೀಡುವ ಕೆಲಸ ಪ್ರಾರಂಭಿಸಿದ್ದಾರೆ.

ಪರೀಕ್ಷಾ ವಿಧಾನ ಹೇಗೆ: ನಗರದಲ್ಲಿ ರೇಬಿಸ್‌ ಸೋಂಕಿನ ಲಕ್ಷ ಣಗಳು ಕಾಣಿಸಿಕೊಳ್ಳವ ಶ್ವಾನಗಳಿಗೆ “ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸಾ ಕೇಂದ್ರ’ (ಎಬಿಸಿ ) ಯಲ್ಲಿ ಪ್ರತ್ಯೇ ಕ ವಾಗಿ ಐಸೋಲೇ ಷನ್‌ನಲ್ಲಿ ಇರಿಸಲಾಗುತ್ತದೆ. ಈ ನಾಯಿಗಳು ಮೃತ ಪಟ್ಟ ವೇಳೆ ನಾಯಿಗಳ ಮೆದುಳಿನ ಹಿಪ್ಪೋಕ್ಯಾಂಪಸ್‌ (ಮೆದುಳಿನ ದ್ರವಯುಕ್ತ) ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀ ಕ್ಷೆಗೆ ಒಳಪಡಿಸಲಾಗುತ್ತದೆ. ಇಲ್ಲಿ ಸೋಂಕು ದೃಢಪಟ್ಟರೆ ಮುಂದಿನ ಚಿಕಿತ್ಸಾ ಕ್ರಮ ಕೈಗೊಳ್ಳಲಾಗುತ್ತದೆ.

ಶೇ.80 ಪ್ರಕರಣದಲ್ಲಿ ಜನರಿಂದ ದೂರು: ರೇಬಿಸ್‌ ಸೋಂಕಿನ ಲಕ್ಷಣ ಕಂಡು ಬರುವ ನಾಯಿ ಗಳ ಬಗ್ಗೆ ಸಾರ್ವಜನಿಕರೇ ಪಾಲಿಕೆಯ ಪಶು ಪಾಲನಾ ವಿಭಾಗಕ್ಕೆ ಮಾಹಿತಿ ನೀಡುತ್ತಿದ್ದಾರೆ. ಶೇ.80 ಪ್ರಕರಣಗಳಲ್ಲಿ ಜನರೇ ಮಾಹಿತಿ ನೀಡುತ್ತಿದ್ದು, ಈ ಭಾಗದಲ್ಲಿ ಉಳಿದ ನಾಯಿಗಳಿಗೆ ರೇಬಿಸ್‌ ಚುಚ್ಚು ಮದ್ದು ನೀಡಲಾಗುತ್ತಿದೆ. ಉಳಿದ ಶೇ.20 ಪ್ರಕ ರಣಗಳಲ್ಲಿ ನಾಯಿ ಕಚ್ಚಿದ ಸಂದರ್ಭದಲ್ಲಿ ಜನ ಮಾಹಿತಿ ರವಾನಿಸುತ್ತಿದ್ದಾರೆ.

ಪರೀಕ್ಷೆಗೆ 46 ಸಾವಿರ ರೂ. ವೆಚ್ಚ: ನಗರದಲ್ಲಿರುವ ಶ್ವಾನಗಳ ರೇಬಿಸ್‌ ಸೋಂಕು ಪರೀಕ್ಷೆ ಮಾಡಲು ಹೆಬ್ಬಾಳದ ಪ್ರಯೋಗಾಲಯವು ತಲಾ ಒಂದು ನಾಯಿಗೆ 300ರೂ. ನಿಗದಿ ಮಾಡಿದ್ದು, ಒಟ್ಟು 172 ನಾಯಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 156 ನಾಯಿಗಳ ಪರೀಕ್ಷೆಗೆ ಪಾಲಿಕೆ 46,800ರೂ. ವೆಚ್ಚ ಮಾಡಲಾಗಿದೆ.

ಪೂರ್ವ ವಲಯದಲ್ಲಿ ಪ್ರಕರಣ ಹೆಚ್ಚು: ರೇಬಿಸ್‌ ಸೋಂಕು ಪರೀಕ್ಷೆ ಮಾಡುವ ಮೂಲಕ ನಗರದಲ್ಲಿ ರೇಬಿಸ್‌ ಸೋಂಕಿಗೆ ಕಡಿ ವಾಣ ಹಾಕುವ ಉದ್ದೇಶದಿಂದ ಪಾಲಿಕೆ 2020ರ ಆಗಸ್ಟ್‌ ನಲ್ಲಿ ಹೆಬ್ಟಾಳದ ಪಶು ವೈದ್ಯ ಕೀಯ ಮಹಾ ವಿದ್ಯಾಲಯದೊಂದಿಗೆ ಒಪ್ಪಂದ ಮಾಡಿ ಕೊಂಡಿತ್ತು. ಕಳೆದ ಆರು ತಿಂಗಳಿಂದ ನಾಯಿಗಳ ಮೆದುಳಿನ ಮಾದರಿಯನ್ನು ಪ್ರಯೋಗಾಲಯಕ್ಕೆ

ಕಳುಹಿಸಲಾಗುತ್ತಿದೆ. ಅಲ್ಲದೆ, ಪಾಲಿಕೆ ಪ್ರತಿ ವರ್ಷ ನಗರದಲ್ಲಿರುವ ನಾಯಿಗಳಿಗೆ ರೇಬಿಸ್‌ ಚುಚ್ಚು ಮದ್ದು ನೀಡುತ್ತಿದೆ. ಆದರೆ, ಚುಚ್ಚು ಮದ್ದು ನೀಡಿದ ನಾಯಿಗಳ ಗುರುತು ಮಾಡಿದ ಮೇಲೆ ಈ ಹಿಂದೆ ಬಣ್ಣ ಬಳಿಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ವರ್ಲ್ಡ್ ವೈಡ್‌

ವೆಟರ್ನರಿ ಸರ್ವೀಸಸ್‌ (ಪ ಶು ವೈದ್ಯಕೀಯ ಸೇವಾ ಸಂಸ್ಥೆ)ಯ ಆ್ಯಪ್‌ ಬಳಸುತ್ತಿದೆ. ಇದರಿಂದ ನಿಖರವಾಗಿ ಎಷ್ಟು ನಾಯಿಗಳಿಗೆ ಚುಚ್ಚು ಮದ್ದು ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಈ ಆ್ಯಪ್‌ ಬಳಸಿ ಪಾಲಿಕೆಯ 15 ವಾರ್ಡ್‌ ಗಳಲ್ಲಿ 10,388ನಾಯಿಗಳಿಗೆ ರೇಬಿಸ್‌ ಚುಚ್ಚು ಮದ್ದು ನೀಡಲಾಗಿದೆ ಎಂದು ಪಾಲಿಕೆಯ ಪಶು ಪಾಲನಾ ವಿಭಾಗದ ಅಧಿಕಾರಿಗಳು “ಉದಯವಾಣಿ ‘ಗೆ ತಿಳಿಸಿದರು.

ಪೂರ್ವವಲಯದಲ್ಲಿ ಹೆಚ್ಚು: ಪಾಲಿಕೆಯ ಎಂಟು ವಲಯಗಳಲ್ಲೂ ರೇಬಿಸ್‌ ಸೋಂಕು ಇರುವ ನಾಯಿಗಳ ಪತ್ತೆ ಮತ್ತು ಪರೀಕ್ಷಾ ಕಾರ್ಯ ನಡೆಯುತ್ತಿದೆ. ಆದರೆ, ಪೂರ್ವ ವಲಯದಲ್ಲಿ ಹೆಚ್ಚು ರೇಬಿಸ್‌ ಸೋಂಕು ಪ್ರಕರಣಗಳು ದೃಢ ಪಟ್ಟಿವೆ. ಪೂರ್ವ ವಲಯದಲ್ಲಿ ರೇಬಿಸ್‌ ಶಂಕೆ ಇರುವ 53 ನಾಯಿಗಳ ಮೆದುಳು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದ ರಲ್ಲಿ 45 ನಾಯಿ ಗಳಿಗೆ ಸೋಂಕು ಇರುವುದು ದೃಢ ಪಟ್ಟಿದೆ.

ರೇಬಿಸ್‌ ಸೋಂಕು ಇರುವ ನಾಯಿಗಳ ಪತ್ತೆ ಕಾರ್ಯಾಚರಣೆಗೆ ವೇಗ ನೀಡಲಾಗಿದ್ದು, ನಾಯಿಗಳಿಗೆ ರೇಬಿಸ್‌ ಚುಚ್ಚು ಮದ್ದು ನೀಡುವುದು ಪ್ರಗತಿಯಲ್ಲಿದೆ. ಜಾಗೃತಿಯೂ ಮೂಡಿಸಲಾಗುತ್ತಿದೆ.-ಡಾ.ಸಿ. ಲಕ್ಷ್ಮೀ ನಾರಾಯಣ ಸ್ವಾಮಿ, ಬಿಬಿಎಂಪಿ ಪಶು ಪಾಲನಾ ವಿಭಾಗ (ಜಂಟಿ ನಿರ್ದೇಶಕ)

 

ಹಿತೇಶ್‌ ವೈ

ಟಾಪ್ ನ್ಯೂಸ್

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.