ರೇಸ್ ಕುದುರೆಗೆ ಕೊಟ್ಟದ್ದು ಉದ್ದೀಪನ ಮದ್ದಲ್ಲ, ಔಷಧ
Team Udayavani, May 8, 2017, 12:14 PM IST
ಬೆಂಗಳೂರು: ಟರ್ಫ್ ಕ್ಲಬ್‌ನ ಯಾವುದೇ ಕುದುರೆಗಳಿಗೆ ಉದ್ದೀಪನ ಮದ್ದು ನೀಡಿಲ್ಲ. ಹಾಗೆಯೇ ಪ್ರಮುಖವಾಗಿ ಕ್ವೀನ್ ಲತೀಫಾಗೂ (ರೇಸ್ ಕುದುರೆ) ಉದ್ದೀಪನ ಮದ್ದು ಕೊಟ್ಟಿಲ್ಲ ಎಂದು ಟರ್ಫ್ ಕ್ಲಬ್‌ನ ಅಧ್ಯಕ್ಷ ವೈ .ಜಗನ್ನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕ್ವೀನ್ ಲತೀಫಾ ಅನಾರೋಗ್ಯದಿಂದ ಬಳಲುತ್ತಿದ್ದು, ಜ.27ರಿಂದ ಫೆ.7ರವರೆಗೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಪ್ರೋಕೈನ್ ಎಂಬ ಔಷಧಿ ನೀಡಿದ್ದೇವೆ. ಇದು ಉದ್ದೀಪನ ಮದ್ದಲ್ಲ. ಇದಾದ 25 ದಿನಗಳ ಬಳಿಕ(ಮಾ.5) “ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಶನ್ ಟ್ರೋಫಿ’ಯಲ್ಲಿ ಅದು ಭಾಗವಹಿಸಿ, ಪ್ರಥಮ ಸ್ಥಾನಗಳಿಸಿತ್ತು.
ಬಳಿಕ ಕುದುರೆಯ ಮೂತ್ರವನ್ನು ಪರೀಕ್ಷಿಸಲು ದೆಹಲಿಯ ಲ್ಯಾಬೋರೇಟರಿಗೆ ಕಳುಹಿಸಲಾಧಿಗಿತ್ತು. ಆಗ ಮೂತ್ರದಲ್ಲಿ ಪ್ರೋಕೈನ್ ಅಂಶ ಪತ್ತೆಯಾಗಿದೆ. ಯಾವುದೇ ರೇಸ್ ಕುದುರೆಯಲ್ಲಿ 10 ನ್ಯಾನೋ ಗ್ರಾಂ ನಷ್ಟು ಪ್ರೊಕೈನ್ ಇರಬೇಕೆಂದು ಅಂತಾರಾಷ್ಟ್ರೀಯ ಮಟ್ಟದ ಹಾರ್ಸ್ ರೇಸಿಂಗ್ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ,’ ಎಂದು ಹೇಳಿದರು.
“ದೆಹಲಿಯ ಲ್ಯಾಬೋರೇಟರಿಯ ಪರೀಕ್ಷೆಯಲ್ಲಿ ಕ್ವೀನ್ ಲತೀಫಾದಲ್ಲಿ ಪ್ರೋಕೈನ್ ಅಂಶ ಪತ್ತೆಯಾಗುತ್ತಿದ್ದಂತೆ, ಎರಡನೇ ಬಾರಿಗೆ ಪರೀಕ್ಷೆಗೆ ಮಾರಿಶಿಯಸ್‌ಗೆ ಕಳುಹಿಸಲಾಗಿತ್ತು. ಇಲ್ಲಿ ನೆಗೆಟಿವ್ ಬಂದಿದ್ದು. ಕುದುರೆಯಲ್ಲಿ ಉದ್ದೀಪನಾ ಮದ್ದು ಸೇರಿಲ್ಲ ಎಂದು ಮೇ 5ರಂದು ವರದಿ ಬಂದಿದೆ. ಈ ಮೂಲಕ ಟರ್ಫ್ ಕ್ಲಬ್‌ನ ಯಾವುದೇ ಕುದುರೆಗೂ ಉದ್ದೀಪನಾ ಮದ್ದು ನೀಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ.
ಕ್ವೀನ್ ಲತೀಫಾ ಕುದುರೆಯನ್ನು ಚಿಕಿತ್ಸೆ ನೀಡಿದ್ದು, ಕ್ಲಬ್‌ನ ವೈದ್ಯರು. ಆದರೆ, ಇನ್ನೆರಡು ಕುದುರೆಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಖಾಸಗಿಯವರು. ಈ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಧಿಲಾಗುತ್ತದೆ. ನಮ್ಮ ಕ್ಲಬ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದ ಪಶು ವೈದ್ಯಾಲಯವಿದ್ದು, ಪ್ರತಿಯೊಂದು ರೇಸ್ ಸಹ ಪಾರದರ್ಶಕವಾಗಿ ನಡೆಯುತ್ತದೆ. ಇನ್ನು ಮುಂದೆಯು ಹಾಗೆ ನಡೆಯುತ್ತದೆ,’ ಎಂದರು.
ಏನಿದು ಪ್ರಕರಣ?: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಬಾರಿ ಅವ್ಯವಹಾರ ನಡೆಯುತ್ತಿದ್ದು, ಕೆಲ ಕುದುರೆಗಳಿಗೆ ಉದ್ದೀಪನಾ ಮದ್ದು ನೀಡಲಾಗಿದೆ ಎಂದು ಆರೋಪಿಸಿ ಕುದುರೆ ಮಾಲೀಕ ಎಚ್.ಎಸ್.ಚಂದ್ರೇಗೌಡ ಏ.21ರಂದು ಕ್ಲಬ್‌ನ ಸಿಇಒ ಸೇರಿದಂತೆ ಐವರ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿ ದ್ದರು. ಐವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.