![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Feb 10, 2018, 6:00 AM IST
ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಪರಿವರ್ತನಾಯಾತ್ರೆ ಸಮಾರೋಪದಲ್ಲಿ ಪಾಲ್ಗೊಂಡು ತೆರಳಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ “ಜನಾಶೀರ್ವಾದ’ ಯಾತ್ರೆಯಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾಸಂಭ್ರಮ ಯಾತ್ರೆ ಮುಗಿಸಿದ್ದು ಎರಡನೇ ಹಂತದಲ್ಲಿ ಜನಾಶೀರ್ವಾದ ಯಾತ್ರೆಗೆ ಖುದ್ದು ರಾಹುಲ್‌ಗಾಂಧಿ ಬರುತ್ತಿದ್ದು, ರಾಜ್ಯ ಕಾಂಗ್ರೆಸ್ಸಿಗರಲ್ಲಿ ಚುನಾವಣೆ ಉತ್ಸಾಹ ತುಂಬಲಿದ್ದಾರೆ. ನಾಲ್ಕು ದಿನಗಳ ಪ್ರವಾಸದಲ್ಲಿ ಹೈದರಾಬಾದ್ -ಕರ್ನಾಟಕ ಭಾಗದ ಹೊಸಪೇಟೆಯಿಂದ ಬಸವಕಲ್ಯಾಣದವರೆಗೆ ರಾಹುಲ್ ರೋಡ್ ಶೋ ಹಾಗೂ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊಸಪೇಟೆಯಲ್ಲಿ ವಿಶೇಷ ಸ್ಥಾನಮಾನದಿಂದ ಸವಲತ್ತು ಪಡೆದಿರುವ ಫಲಾನುಭವಿಗಳಿಂದ ಯಾತ್ರೆಗೆ ಚಾಲನೆ ದೊರೆಯಲಿರುವುದು ವಿಶೇಷ. ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಜತೆಗೆ ಮಠ ಹಾಗೂ ದೇವಾಲಯಗಳಿಗೆ ಭೇಟಿ ನೀಡುವ ಕಾರ್ಯಕ್ರಮವೂ ಇದೆ.
ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್‌ಗಾಂಧಿಯವರಿಗೆ ಅದ್ಧೂರಿ ಸ್ವಾಗತ ಕೋರಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆ.
ರಾಹುಲ್ ಪ್ರವಾಸ ಯಶಸ್ವಿಗೊಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್‌ಗುಂಡೂರಾವ್ ಸಮಾಲೋಚನೆ ನಡೆಸಿ ಆಯಾ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಂತೂ ರಾಹುಲ್ ಪ್ರವಾಸದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ.
ಶುಕ್ರವಾರ ವಿಧಾನಮಂಡಲ ಅಧಿವೇಶನ ಮುಗಿದ ತಕ್ಷಣ ಹೈದರಾಬಾದ್-ಕರ್ನಾಟಕ ಭಾಗದ ಸಚಿವರು, ಶಾಸಕರು,
ವಿಧಾನಪರಿಷತ್ ಸದಸ್ಯರು ರಾಹುಲ್‌ಗಾಂಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತೆರಳಿದರು.
ಹೈದರಾಬಾದ್-ಕರ್ನಾಟಕ ಭಾಗದ ವಿಶೇಷ ಅಭಿವೃದ್ಧಿಗಾಗಿ 371 ಜೆ ಕಲಂ ಜಾರಿ ಯುಪಿಎ ಸರ್ಕಾರದ ಅವಧಿಯಲ್ಲೇ ಆಗಿದ್ದರಿಂದ ಆ ಭಾಗದಿಂದಲೇ ರಾಹುಲ್ ಪ್ರವಾಸ ಪ್ರಾರಂಭಿಸುತ್ತಿದ್ದಾರೆ.
ರಾಹುಲ್ ಕಾರ್ಯಕ್ರಮ
ಶನಿವಾರ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆಗೆ ಆಗಮಿಸಲಿರುವ ರಾಹುಲ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಲಿಗೆಮ್ಮ ದೇವಾಲಯ, ಗವಿಸಿದ್ಧೇಶ್ವರ ಮಠ ಭೇಟಿ, ಕೊಪ್ಪಳದ ಪಾಲಿಕೆ ಮೈದಾನದಲ್ಲಿ ಸಭೆ. ಸಂಜೆ 6.45 ಕ್ಕೆ ಯಲಬುರ್ಗಾ ಕುಕನೂರಿನ ವಿದ್ಯಾನಂದ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ. ರಾತ್ರಿ ಅಲ್ಲೇ ವಾಸ್ತವ್ಯ.
ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಾಯಕರ ಭೇಟಿ, ಕಾರಟಗಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ. ಸಿಂಧನೂರಿನಲ್ಲಿ ಸಂಜೆ 6 ಕ್ಕೆ ರೈತ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಂವಾದ. ರಾಯಚೂರಿನಲ್ಲಿ ವಾಸ್ತವ್ಯ ಸೋಮವಾರ ಬೆಳಗ್ಗೆ 11.30 ರವರೆಗೆ ನಾಯಕರು, ಗಣ್ಯರ ಭೇಟಿ. ದೇವದುರ್ಗದಲ್ಲಿ 12.15 ಕ್ಕೆ ಬುಡಕಟ್ಟು ರ್ಯಾಲಿ. ಜೇವರ್ಗಿಯ ಕ್ರೀಡಾ ಮೈದಾನದಲ್ಲಿ ಮಧ್ಯಾಹ್ನ 3.20 ಕ್ಕೆ ಸಾರ್ವಜನಿಕ ಸಭೆ. ಸಂಜೆ .5.20 ಕ್ಕೆ ಕಲಬುರಗಿಯ ನ್ಯೂಟನ್ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ಸಭೆ. ಸಂಜೆ 6.30 ಕ್ಕೆ ಖ್ವಾಜಾ ಬಂದೇ ನವಾಜ್ ದರ್ಗಾಗೆ ಭೇಟಿ. ರಾತ್ರಿ ವಾಸ್ತವ್ಯ.
ಮಂಗಳವಾರ ಮಾಜಿ ಸಚಿವ ದಿವಂಗತ ಕಮರುಲ್ ಇಸ್ಲಾಂ ಕುಟುಂಬದವರ ಭೇಟಿ. ಎಚ್‌ಕೆಇಎಸ್ ಸಭಾಂಗಣದಲ್ಲಿ ವೃತ್ತಿಪರರು ಹಾಗೂ ಉದ್ದಿಮೆದಾರರೊಂದಿಗೆ ಸಂವಾದ. ಬಳಿಕ ಮಧ್ಯಾಹ್ನ 12 ಗಂಟೆಗೆ ಬೀದರ್‌ನ ಬಸವಕಲ್ಯಾಣದ ಆನುಭವ ಮಂಟಪಕ್ಕೆ ಭೇಟಿ. ಬಳಿಕ ದೆಹಲಿಗೆ ನಿರ್ಗಮನ.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.