ಹುಕ್ಕಾ ಬಾರ್‌ಗಳ ಮೇಲೆ ದಾಳಿ: 7 ಬಂಧನ, ವಸ್ತುಗಳು ವಶ
Team Udayavani, Feb 28, 2024, 11:38 AM IST
ಬೆಂಗಳೂರು: ನಿಷೇಧದ ಬಳಿಕವೂ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ನಗರದ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿ ಗಳಿಂದ 12.5 ಲಕ್ಷ ರೂ. ಮೌಲ್ಯದ ಹುಕ್ಕಾ ಫ್ಲೈವರ್, ಇತರೆ ವಸ್ತುಗಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಠಾಣೆ ವ್ಯಾಪ್ತಿಯಲ್ಲಿರುವ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ್ದು, ಸುಹೇಲ್ ಮತ್ತು ಬರ್ಫಿ ಎಂಬವರನ್ನು ಬಂಧಿಸಲಾಗಿದೆ. ಆರೋಪಿ ಗಳು ಅಕ್ರಮವಾಗಿ ದಾಸ್ತಾನು ಮಾಡಿದ್ದ 2 ಲಕ್ಷ ರೂ. ಮೌಲ್ಯದ 5 ಹುಕ್ಕಾ ಪಾಟ್‌ಗಳು, ಹುಕ್ಕಾ ಫ್ಲೇವರ್‌ಗಳು, ಚಾರ್‌ಕೋಲ್ ಬಾಕ್ಸ್ ಮತ್ತು ಹುಕ್ಕಾ ಸಲಕರಣೆ ಗಳನ್ನು ವಶಕ್ಕೆ ಪಡೆಯಲಾಗಿದೆ.
ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಮೊಹಮ್ಮದ್ ಶಾಹೀರ್(27) ಮತ್ತು ಮೊಹಮ್ಮದ್ ಶಾಮ್ಸ್(20) ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 710 ಹುಕ್ಕಾ ಫ್ಲೆವರ್‌ಗಳು, 36 ಹುಕ್ಕಾ ಪ್ಯಾಕೆಟ್ ಸೆಟ್, 28 ಫಾಯಿಲ್ ಪೇಪಪ್ ಬಾಕ್ಸ್‌ಗಳು, 19 ಪಿಲ್ಲರ್‌ಗಳು, 25 ಹುಕ್ಕಾ ಪೈಪ್, ನಗದು ವಶಕ್ಕೆ ಪಡೆಯಲಾಗಿದೆ.
ಇನ್ನು ಕೆ.ಆರ್.ಪುರ ಠಾಣೆ ವ್ಯಾಪ್ತಿ ಯಲ್ಲಿ ಕಾನೂನು ಬಾಹಿರವಾಗಿ ತೆರೆಯಲಾಗಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 50 ಸಾವಿರ ರೂ. ಮೌಲ್ಯದ 3 ಹುಕ್ಕಾ ಫ್ಲೆವರ್‌ಗಳು, 5 ಹುಕ್ಕಾ ಪಾಟ್‌ಗಳು, ನಗದು ವಶಕ್ಕೆ ಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ
Theft Case: ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ 50 ಲಕ್ಷ ಮೌಲ್ಯದ ಚಿನ್ನ ಕಳವು
Bengaluru: ಮದ್ಯಪಾನ, ಅತಿ ವೇಗದ ಚಾಲನೆ: 689 ಕೇಸ್, 1.33 ಲಕ್ಷ ರೂ. ದಂಡ
Bengaluru: ಪತ್ನಿ ಮೇಲಿನ ಕೋಪಕ್ಕೆ 4.5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ
ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ
MUST WATCH
ಹೊಸ ಸೇರ್ಪಡೆ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.