2,850 ಮಕ್ಕಳನ್ನು ರಕ್ಷಿಸಿದ ಆಪರೇಷನ್ ನನ್ಹೇ ಫರೀಶ್ತೆ
Team Udayavani, Jun 26, 2023, 11:30 AM IST
ಬೆಂಗಳೂರು: ಶಿಕ್ಷಣದ ವಿಚಾರವಾಗಿ ಪಾಲಕರ ಒತ್ತಡ ತಾಳಲಾರದೇ, ಬಡತನದಿಂದ ಉದ್ಯೋಗ ಅರಸಿ ವಲಸೆ ಹೋಗಿ ಪ್ರೇಮಪಾಶಕ್ಕೆ ಸಿಲುಕಿ ಬರುವ ಜೋಡಿ ಹೀಗೆ ವಿವಿಧ ಕಾರಣಗಳಿಂದ ಮನೆ ಬಿಟ್ಟು ರೈಲಿನಲ್ಲಿ ಬಂದ 2,850 ಅಪ್ರಾಪ್ತರನ್ನು ಮತ್ತೆ ಪಾಲಕರ ಮಡಿಲು ಸೇರುವಂತೆ ಮಾಡಿದೆ ಆಪರೇಷನ್ “ನನ್ಹೇ ಫರೀಶ್ತೆ ‘,
ಹೌದು, ಮನೆ ಬಿಟ್ಟು ರೈಲಿನಲ್ಲಿ ಅರ್ಧ ದಾರಿಗೆ ಬಂದು ಮುಂದೇನು ಮಾಡಬೇಕೆಂಬುದು ತೋಚದೆ ಪೇಚಿಗೆ ಸಿಲುಕುವ ಮಕ್ಕಳನ್ನು ರಕ್ಷಿಸುವಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ (ಆರ್ ಪಿಎಫ್) ಆಪರೇಷನ್ ನನ್ಹೇ ಫರೀಶ್ತೆ ತಂಡ ಯಶಸ್ವಿಯಾಗಿದೆ. 2017ರಿಂದ ಇದುವರೆಗೆ ರಾಜ್ಯ ರಾಜಧಾನಿಯಲ್ಲಿ 2,850 ಮಕ್ಕಳು ರಕ್ಷಣೆಗೊಳಪಟ್ಟಿದ್ದಾರೆ. ಎರಡು ದಿನಕ್ಕೆ ಸರಾಸರಿ 4-6 ಮಕ್ಕಳು ರಾಜ್ಯದ ವಿವಿಧ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ ಎಂಬುದನ್ನು ಆರ್‌ಪಿಎಫ್ ಪೊಲೀಸ್ ಮೂಲಗಳು ದೃಢಪಡಿಸಿವೆ.
ಏನಿದು ಆಪರೇಷನ್ ನನ್ಹೇ ಫರೀಶ್ತೆ ?: ಅಪ್ರಾಪ್ತರ ಭವಿಷ್ಯಕ್ಕೆ ಕುಂದುಂಟಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು 2017ರಲ್ಲಿ ನನ್ಹೇ ಫರೀಶ್ತೆ ಎಂಬ ಹೊಸ ಯೋಜನೆ ಜಾರಿಗೆ ತಂದಿದೆ. ರೈಲ್ವೆ ಪ್ರೊಟೆ ಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿಯು ಈ ಯೋಜನೆ ನಿರ್ವಹಣೆ ಮಾಡುತ್ತಿದ್ದಾರೆ. ರಾಜ್ಯದ ಪ್ರತಿ ರೈಲ್ವೆ ನಿಲ್ದಾಣಗಳಲ್ಲೂ ಆರ್‌ಪಿಎಫ್ನ ಈ ತಂಡವು ಅನುಮಾನಾಸ್ಪದವಾಗಿ ಓಡಾಡುವ ಅಪ್ರಾಪ್ತರ ಮೇಲೆ ಹದ್ದಿನ ಕಣ್ಣಿಡುತ್ತದೆ. ಸಿಕ್ಕಿ ಬಿದ್ದವರನ್ನು ಮಕ್ಕಳ ಸ್ನೇಹಿ ರೂಂನಲ್ಲಿ ವಿಚಾರಣೆ ನಡೆಸುತ್ತಾರೆ.
ಬಳಿಕ ಮಾನವ ಕಳ್ಳ ಸಾಗಾ ಣಿಕೆಯಂತಹ ಪ್ರಕರಣಗಳಾಗಿದ್ದಲ್ಲಿ ರೈಲ್ವೆ ಪೊಲೀಸರ ಗಮನಕ್ಕೆ ತರುತ್ತಾರೆ. ಮಕ್ಕಳೇ ಸ್ವಯಂ ಪ್ರೇರಿತರಾಗಿ ಬಂದಿದ್ದರೆ ಬಾಸ್ಕೋದಂತಹ ಎನ್ ಜಿಒಗಳಲ್ಲಿ ಅವರಿಗೆ ಕೌಲ್ಸಿಲಿಂಗ್ ಮಾಡಲಾಗುತ್ತದೆ. ನಂತರ ಪಾಲಕರನ್ನು ಸಂಪರ್ಕಿಸಿ ಅವರಿಗೆ ತಿಳಿ ಹೇಳಿ ಕಳುಹಿಸಿಕೊಡಲಾಗುತ್ತದೆ.
ಉದ್ಯೋಗ ಅರಸಿ ಬರುವವರೇ ಹೆಚ್ಚು: ಆಪರೇಷನ್ ನನ್ಹೇ ಫರೀಶ್ತೆಯಡಿ ಸಿಕ್ಕಿ ಬಿದ್ದ ಮಕ್ಕಳ ಪೈಕಿ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳದ ಮಕ್ಕಳೇ ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಶೇ.60 ಅಪ್ರಾಪ್ತರು ಉದ್ಯೋಗ ಅರಸಿಕೊಂಡು ಪಟ್ಟಣಕ್ಕೆ ಬಂದರೆ, ಶೇ.20 ಮಕ್ಕಳು ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗು ತ್ತಿದ್ದಾರೆ. ಇನ್ನು ಪಾಲಕರು, ಸಂಬಂಧಿಕರ ಕಿರುಕುಳ, ಶಾಲೆಯಲ್ಲಿ ಇತರ ಮಕ್ಕಳ ಕಿರುಕುಳ, ಆಸಕ್ತಿ ಇಲ್ಲದ ವಿಷಯ ಕಲಿಯುವಂತೆ ಒತ್ತಡ ಹೇರುವುದನ್ನು ತಳಲಾರದೇ ಬಂದ ಶೇ.10 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 11-16 ವರ್ಷ ದವರೇ ಅಧಿಕ ಪ್ರಮಾಣದಲ್ಲಿದ್ದಾರೆ. ಇತ್ತೀಚೆಗೆ ಶೇ.10 ಅಪ್ರಾಪ್ತ ಪ್ರೇಮಿಗಳು ನನ್ಹೇ ಫರೀಶ್ತೆ ಕಾರ್ಯಾಚರಣೆ ವೇಳೆ ಬಲೆಗೆ ಬಿದ್ದಿರುವ ಸಂಗತಿ ಆರ್‌ಪಿಎಫ್ ಮೂಲಗಳು ತಿಳಿಸಿವೆ.
ಮಕ್ಕಳ ಪೂರೈಕೆಯಿಂದ ಕಮೀಷನ್: ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳದಂತಹ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಬಡ ಮಕ್ಕಳನ್ನೇ ಟಾರ್ಗೆಟ್ ಮಾಡುವ ಮಧ್ಯವರ್ತಿಗಳು ಅವರ ಪಾಲಕರನ್ನು ಹಣ, ಉದ್ಯೋಗದ ಅಮೀಷಕ್ಕೊಳಪಡಿಸುತ್ತಾರೆ. ಬಳಿಕ ಮಾನವ ಕಳ್ಳಸಾಗಾಣಿಕೆ ಮೂಲಕ ರೈಲಿನಲ್ಲಿ ಬೆಂಗಳೂರಿಗೆ ಕರೆ ತಂದು ಕರ್ನಾಟದಲ್ಲಿರುವ ಹೋಟೆಲ್, ಬಾರ್, ಖಾಸಗಿ ಕಚೇರಿಗಳು, ಗ್ಯಾರೇಜ್ ಮಾಲೀಕರಿಗೆ ಪೂರೈಸುತ್ತಾರೆ. ಒಬ್ಬ ಬಾಲಕನನ್ನು ಕೆಲಸಕ್ಕೆ ಪೂರೈಸಿದರೂ ಮಧ್ಯವರ್ತಿಗಳಿಗೆ ಕೈ ತುಂಬಾ ಕಮೀಷನ್ ಸಿಗುತ್ತದೆ ಎಂಬುದು ಇತ್ತೀಚೆಗೆ ಆರ್‌ಪಿಎಫ್ ಪೊಲೀಸರ ಬಲೆಗೆ ಬಿದ್ದ ಮಕ್ಕಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಡಿಮೆ ವೇತನಕ್ಕೆ ಕೆಲಸ ಮಾಡುವ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತವೆ ಮೂಲಗಳು.
ಮನೆ ಬಿಟ್ಟು ಬರುವ ಪ್ರತಿ ಮಕ್ಕಳ ಕತೆಗಳೂ ಭಿನ್ನವಾಗಿರುತ್ತದೆ. ಪಾಲಕರು ಮಕ್ಕಳ ಜೊತೆ ಮುಕ್ತವಾಗಿ ಮಾತುಕತೆ ನಡೆಸಿ ಸಮಸ್ಯೆ ಆಲಿಸಿ. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವಂತೆ ನೋಡಿಕೊಳ್ಳಿ. ಮಕ್ಕಳ ಮೇಲೆ ಅನಗತ್ಯವಾಗಿ ಒತ್ತಡ ಹಾಕಬೇಡಿ. -ಡಾ.ಸಿ.ಆರ್.ಚಂದ್ರಶೇಖರ್, ಮನಶಾಸ್ತ್ರಜ್ಞ.
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.