ಆರ್ಭಟಿಸಿ ಅವಾಂತರ ಸೃಷ್ಟಿಸಿದ ಮಳೆ
Team Udayavani, May 22, 2017, 12:42 PM IST
ಬೆಂಗಳೂರು: ಪೂರ್ವ ಮುಂಗಾರು ಮಳೆಯ ಆರ್ಭಟಕ್ಕೆ ಶನಿವಾರ ರಾತ್ರಿ ನಗರ ತತ್ತರಿಸಿಹೋಗಿದೆ. ಈ ಮೂಲಕ “ದಿಢೀರ್ ನೆರೆ’ಯಂತಹ ಸಮಸ್ಯೆಗಳಿಗೆ ಬೆಂಗಳೂರು ಇನ್ನೂ ಸಜ್ಜಾಗಿಲ್ಲ ಎಂಬುದನ್ನು ಮಳೆ ಬಬಯಲು ಮಾಡಿದೆ.
ಶನಿವಾರ ಮಳೆ ಸೃಷ್ಟಿಸಿದ ಅವಾಂತರಕ್ಕೆ ಭಾನುವಾರ ಸಂಜೆಯಾದರೂ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಬಿದ್ದ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಲೇ ಇತ್ತು. ರಾಜಕಾಲುವೆಯಲ್ಲಿ ಕೊಚ್ಚಿಹೋಗಿ 24 ಗಂಟೆ ಕಳೆದರೂ ಶಾಂತಕುಮಾರ್ ಎಂಬುವರ ಸುಳಿವು ಸಿಗಲೇ ಇಲ್ಲ. ಒಟ್ಟಾರೆ ಜನಜೀವನ ಇನ್ನೂ ಸಹಜಸ್ಥಿತಿಗೆ ಬಂದಿಲ್ಲ.
ಕೆಲ ಅಪಾರ್ಟ್‌ಮೆಂಟ್‌ಗಳು, ಜಂಕ್ಷನ್‌ಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು ಸೇರಿದಂತೆ 62 ಕಡೆಗಳಲ್ಲಿ ನೀರು ಇನ್ನೂ ತುಂಬಿಕೊಂಡಿತ್ತು. ಪಾರ್ಕಿಂಗ್ ಜಾಗಗಳಲ್ಲಿ, ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡವು. ಕೆಲವೆಡೆ ರಸ್ತೆಗಳು ನೀರು ತುಂಬಿದ್ದರಿಂದ ವಾಹನಗಳು ಕೆಟ್ಟುನಿಂತಿದ್ದವು. ಹಾಗಾಗಿ, ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು.
ದೂರಿನ ಕರೆಗಳ ಮಹಾಪೂರ
ಶನಿವಾರ ರಾತ್ರಿಯಿಂದೀಚೆಗೆ 220 ವಿದ್ಯುತ್ ಕಂಬಗಳು ಬಿದ್ದಿವೆ. ಬೆಸ್ಕಾಂಗೆ 2,934 ಕರೆಗಳು ಬಂದಿದ್ದು, ಈ ಪೈಕಿ 2,220 ಕರೆಗಳಿಗೆ ಉತ್ತರಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಹೆಬ್ಟಾಳ ಉಪ ವಿಭಾಗ ವ್ಯಾಪ್ತಿಯಲ್ಲಿ. ಈ ಭಾಗದಲ್ಲಿ 40ಕ್ಕೂ ಹೆಚ್ಚು ಮರಗಳು ಬಿದ್ದ ಬಗ್ಗೆ ವರದಿಯಾಗಿದ್ದು, ಇದರಿಂದ ಆರ್.ಟಿ.ನಗರ, ಯಲಹಂಕ, ಸಂಜಯನಗರ, ಪೀಣ್ಯ ಮತ್ತಿತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ವಾಸ್ತವ ವಾಗಿ ಸಹಾಯವಾಣಿಗೆ ಬಂದ ಬಹುತೇಕ ಎಲ್ಲ ದೂರು ಗಳಿಗೆ ಬೆಸ್ಕಾಂ ಸ್ಪಂದಿಸಿ, ಸಮಸ್ಯೆ ಪರಿಹರಿಸಿದೆ. ಆರ್.ಟಿ. ನಗರ, ವಿಜಯನಗರ, ಕಲ್ಯಾಣನಗರ, ಹೆಣ್ಣೂರು ಕ್ರಾಸ್, ಜಯನಗರ 2ನೇ ತಿರುವು, ವೈಟ್‌ಫೀಲ್ಡ್, ಹೊರಮಾವು, ಕಮ್ಮನಹಳ್ಳಿ, ಲಿಂಗರಾಜಪುರ, ಮಹದೇವಪುರ, ಕಲ್ಯಾಣನಗರ, ಮಲ್ಲೇಶ್ವರ, ಶ್ರೀರಾಂಪುರದ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಅಧಿಕಾರಿಗಳಿಗೆ ಅಲರ್ಟ್ ಬಂದಿತ್ತು; ಆದರೂ ನಿರ್ಲಕ್ಷ್ಯ?
ಮಳೆ ಶುರುವಾದ 15 ನಿಮಿಷಗಳಲ್ಲಿ ಆಯುಕ್ತರಿಂದ ಹಿಡಿದು ಬಿಬಿಎಂಪಿಯ ಎಲ್ಲ ವಲಯಗಳ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಮೊಬೈಲ್ ಮೂಲಕ ಮುನ್ಸೂಚನೆ ದೊರಕಿದೆ. ಆದರೂ ಉದಾಸೀನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರವು ನಗರದಲ್ಲಿ 100ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳನ್ನು ಹೊಂದಿದೆ. ಆ ಮಾಪನ ಕೇಂದ್ರಗಳಲ್ಲಿ ಮಳೆ ಪ್ರಮಾಣ 15 ನಿಮಿಷದಲ್ಲಿ 12.5 ಮಿ.ಮೀ. ಬೀಳುತ್ತಿದ್ದಂತೆ ಅಟೋಮೆಟಿಕ್ ಆಗಿ ಎಲ್ಲರಿಗೂ “ಅಲರ್ಟ್’ ಕಳುಹಿಸುತ್ತದೆ. ಅದೇ ರೀತಿ, ಶನಿವಾರ ರಾತ್ರಿ ಮಳೆ ಬಿದ್ದಾಗಲೂ 35ಕ್ಕೂ ಹೆಚ್ಚು ಕೇಂದ್ರಗಳಿಂದ ಸಂದೇಶ ರವಾನೆಯಾಗಿದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಹಾರೋಹಳ್ಳಿ, ರಾಗಿಹಳ್ಳಿ, ಹೆಮ್ಮಿಗೆಪುರ, ಎಚ್. ಗೊಲ್ಲಹಳ್ಳಿ, ಬನ್ನೇರುಘಟ್ಟ, ಕಗ್ಗಲಿಪುರ, ಸೋಮನಹಳಳಿ, ವಿವಿ ಪುರ, ಅಂಜನಾಪುರ, ರಾಧಾಕೃಷ್ಣ ದೇವಸ್ಥಾನ ವಾರ್ಡ್, ಗೊಟ್ಟಿಗೆರೆ, ರಾಜಾಜಿನಗರ, ಮನೋರಯ ನ ಪಾಳ್ಯ, ಬ್ಯಾಟರಾಯನಪುರ, ಬನ್ನೇರುಘಟ್ಟ, ಜ್ಞಾನಭಾರತಿ ವಾರ್ಡ್, ಪೀಣ್ಯ ಕೈಗಾರಿಕಾ ಪ್ರದೇಶ, ರಾಜಮಹಲ್ ಗುಟ್ಟಹಳ್ಳಿ, ಕೂಡಿಗೆಹಳ್ಳಿ, ಎಚ್‌ಬಿಆರ್ ಲೇಔಟ್, ಗರು ಡಾಚಾರ್ಯಪಾಳ್ಯ, ಕೆ.ಆರ್. ಪುರ, ಹೊರ ಮಾವು, ಚೌಡೇಶ್ವರಿ, ಅಟ್ಟೂರು, ಬಸವನಪುರ ಕೇಂದ್ರ ಗಳಿಂದ ಸಂದೇಶ ಕಳುಹಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವಾರದ ಅಂತರದಲ್ಲೇ ದಾಖಲೆ ಮಳೆ
ನಗರದಲ್ಲಿ ಶನಿವಾರ ಮಳೆಯಾಗಿದ್ದು 94.5 ಮಿ.ಮೀ. ಹಾರೋಹಳ್ಳಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ವಾರದ ಅಂತರದಲ್ಲಿ ಎರಡನೇ ದಾಖಲೆ ಮಳೆ ಇದಾಗಿದ್ದು, ಈ ಹಿಂದೆ ಕೆಂಗೇರಿಯಲ್ಲಿ 120 ಮಿ.ಮೀ. ಮಳೆಯಾಗಿತ್ತು ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಇನ್ನೂ ಎರಡು ದಿನ ಮಳೆ?
ಇದು ಪೂರ್ವ ಮುಂಗಾರು ಮಳೆಯಾಗಿದ್ದು, ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ನಗರದಲ್ಲಿ ಮುಂದಿನ ಎರಡೂ ದಿನ ಮೋಡಕವಿದ ವಾತಾವರಣ ಇರಲಿದ್ದು, ಒಂದೆರಡು ಬಾರಿ ಸಾಧಾರಣೆ ಮಳೆಯಾಗುವ ಲಕ್ಷಣಗಳಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.