ವಾರಾಂತ್ಯದ ಮೋಜು ಕಸಿದುಕೊಂಡ ಮಳೆ
Team Udayavani, Apr 23, 2018, 12:49 PM IST
ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನ ಗಾಳಿಸಹಿತ ಮಳೆ ಸುರಿಯಿತು. ಈ ಮೂಲಕ ವಾರಾಂತ್ಯದ ರಜಾ ಮಜಾಕ್ಕೆ ತಣ್ಣೀರೆರಚಿತು. ಸಂಜೆ 4ರ ಸುಮಾರಿಗೆ ಶುರುವಾದ ಭಾರೀ ಗಾಳಿಸಹಿತ ಮಳೆ, ಅರ್ಧತಾಸು ಸುರಿಯಿತು. ನಗರದ ಎಂಟು ಕಡೆಗಳಲ್ಲಿ ಮರಗಳು ನೆಲಕಚ್ಚಿದವು. ಭಾನುವಾರ ಆಗಿದ್ದರಿಂದ ವಾಹನದಟ್ಟಣೆ ಕಡಿಮೆ ಇತ್ತು. ಆದರೂ ಮರಗಳು ಬಿದ್ದ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಮಳೆ ಹಿನ್ನೆಲೆಯಲ್ಲಿ ಜನ ರಸ್ತೆಗಿಳಿಯಲಿಲ್ಲ. ಇದರಿಂದ ಶಾಪಿಂಗ್ ಮಾಲ್‌ಗಳು ಸೇರಿದಂತೆ ಮನರಂಜನೆ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ನಗರದ ಪೂರ್ವಭಾಗದಲ್ಲಿ ಮಳೆ ಅಬ್ಬರ ಹೆಚ್ಚಿದ್ದು, ಅಲ್ಲಿ ಗರಿಷ್ಠ 21.5 ಮಿ.ಮೀ. ಮಳೆ ದಾಖಲಾಗಿದೆ. ಕೆ.ಆರ್. ಪುರದಲ್ಲಿ 8.5 ಮಿ.ಮೀ., ಮಂಡೂರು 11.5, ಬಸವನಗುಡಿ 6.5, ಉತ್ತರಹಳ್ಳಿ 5, ಲಾಲ್‌ಬಾಗ್ 1.5 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಇನ್ನು ಹನುಮಂನತನಗರ, ಬನಶಂಕರಿ, ಶಾಂತಿನಗರ ಡಬಲ್‌ರೋಡ್, ಬಾಣಸವಾಡಿ ರೈಲು ನಿಲ್ದಾಣ, ಮಿಲ್ಲರ್ ರಸ್ತೆಯ ಐಜಿಪಿ ಕಚೇರಿ ಬಳಿ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡೋ ಆಸ್ಪತ್ರೆಗಳ ಬಳಿ ಮರಗಳು ಧರೆಗುರುಳಿವೆ. ಕೆಲವೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿದರಿಂದ ಕೆಲವೆಡೆ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು.
ಹೆಬ್ಟಾಳ, ಸ್ಯಾಂಕಿ ಕೆರೆ ರಸ್ತೆ, ಕಾವೇರಿ ಚಿತ್ರಮಂದಿರ, ಕೆ.ಆರ್. ವೃತ್ತ ಸೇರಿದಂತೆ ಕೇಂದ್ರ ಭಾಗದಲ್ಲಿರುವ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು. ರಾಜ್ಯದ ಉತ್ತರ ಒಳನಾಡಿನಿಂದ ತಮಿಳುನಾಡು ಮಧ್ಯೆ ಕಡಿಮೆ ಒತ್ತಡದ ತಗ್ಗು ಉಂಟಾಗಿದ್ದರಿಂದ ಮಳೆಯಾಗುತ್ತಿದ್ದು, ಇನ್ನೂ ಎರಡು-ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.