![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 4, 2021, 6:06 PM IST
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 102 ಶಕ್ತಿ ಗಣಪತಿ ನಗರದ ಕಮಲಾನಗರ, ವಾರ್ಡ್ ಸಂಖ್ಯೆ 75 ಶಂಕರ ಮಠದ ಜೆ ಸಿ ನಗರ, ಮತ್ತು ವಾರ್ಡ್ ಸಂಖ್ಯೆ 44 ಮಾರಪ್ಪನ ಪಾಳ್ಯದ ಹಂಟರ್ಸ್ ಕಾಲೋನಿ, ಸೇರಿದಂತೆ ನಂದಿನಿ ಲೇಔಟ್ ನಲ್ಲಿ ಸರಿ ಸುಮಾರು 78 mm ಮಳೆ ಯಾಗಿದ್ದು, ನಿನ್ನೆಯ ಸಂಜೆ ಬಿದ್ದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹಲವು ಮನೆಗಳು ಜಲಾವೃತವಾಗಿದ್ದು, ಮನೆಗಳಲ್ಲಿ ಇದ್ದ ಧವಸ ಧಾನ್ಯಗಳು, ಬಟ್ಟೆ, ಮಕ್ಕಳ ಸ್ಕೂಲ್ ಪುಸ್ತಕಗಳು, ಪಾತ್ರೆ -ಪಗಡೆ ಹಾಗೂ ಸರಂಜಾಮುಗಳ ನೀರು ಪಾಲಾಗಿವೆ. ಕ್ಷೇತ್ರದ ಶಂಕರ ಮಠ ಹಾಗೂ ಶಕ್ತಿ ಗಣಪತಿ ನಗರದ ವಾರ್ಡ್ ಗಳ ತಗ್ಗು ಪ್ರದೇಶಗಳಲ್ಲಿ ಕೊಳಚೆ ನೀರು ನುಗ್ಗಿ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಜಲಾವೃತ ಗೊಂಡಿದ್ದು, ಮನೆಯೊಳಗಡೆ ಹೊಕ್ಕಿರುವ ನೀರನ್ನು ತೆಗೆಯಲು ಹರಸಾಹಸ ಪಡಬೇಕಾಯಿತು. ಇದೆ ಪ್ರದೇಶದಲ್ಲಿ ಮಳೆ ನೀರು ನುಗ್ಗಿದ್ದರಿಂದ ವೃದ್ಧರೊಬ್ಬರು ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದ ರಿಂದ ಅವರನ್ನು ರಕ್ಷಿಸಿ ಬೇರೆಡೆ ಸ್ಥಳಾಂತರ ಮಾಡಲಾಯಿತು.
ಮಳೆಯ ತೀವ್ರತೆ ಅರಿತ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯರವರು ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು ನಿವಾಸಿಗಳಿಗೆ ಸಾಂತ್ವನ ಹೇಳಿದರು. ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಧವಸ ಧಾನ್ಯಗಳು ಹಾಗೂ ಇನ್ನಿತರ ವಸ್ತುಗಳ ಹಾನಿಯನ್ನು ತಕ್ಷಣವೇ ಮಹಜರು ಮಾಡಿ ವರದಿ ನೀಡುವಂತೆ ಸೂಚಿಸಿದರು.
You seem to have an Ad Blocker on.
To continue reading, please turn it off or whitelist Udayavani.