ಟಿವಿ ಆಡಳಿತದಿಂದ ಹೊರಬಂದ ರಾಜೀವ್ ಚಂದ್ರಶೇಖರ್
Team Udayavani, Apr 3, 2018, 12:33 PM IST
ಬೆಂಗಳೂರು: ಇತ್ತೀಚೆಗೆ ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಮಾ.31ರಿಂದ ಜಾರಿಗೆ ಬರುವಂತೆ, ಎಆರ್‌ಜಿ ಔಟ್‌ಲಿಯರ್ ಏಷ್ಯಾನೆಟ್ ನ್ಯೂಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.
2006ರಿಂದಲೂ ನಾನು ಪಕ್ಷೇತರ ರಾಜ್ಯಸಭಾ ಸದಸ್ಯನಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ. ಇತ್ತೀಚೆಗೆ ಬಿಜೆಪಿಗೆ ಸೇರಿರುವ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿ.ವಿ ಸುದ್ದಿ ವಾಹಿನಿಯ ಬ್ರಾಂಡ್ ಹಾಗೂ ತಂಡದ ಹಿತದೃಷ್ಟಿಯಿಂದ ಆಡಳಿತ ಮಂಡಳಿಯಿಂದ ಹೊರ ಬಂದಿದ್ದೇನೆ ಎಂದು ರಾಜೀವ್ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.