ರಾಜ್‌ಕುಮಾರ್‌ ಕನ್ನಡ ಸಂಸ್ಕೃತಿಯ ಪ್ರತಿರೂಪ

Team Udayavani, Apr 25, 2018, 11:39 AM IST

rajkumar.jpg

ಬೆಂಗಳೂರು: ವರನಟ ರಾಜ್‌ಕುಮಾರ್‌ ಕನ್ನಡ ಸಂಸ್ಕೃತಿಯ ಪ್ರತಿರೂಪವಾಗಿದ್ದು, ಕರ್ನಾಟಕ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ತಿಳಿಸಿದರು. 

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ರಾಜ್‌ಕುಮಾರ್‌ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ಹಾಗೂ ಕನ್ನಡ ನುಡಿಯ ಏಕೀಕರಣದಲ್ಲಿ ಡಾ.ರಾಜ್‌ಕುಮಾರ್‌ ಕೊಡುಗೆ ಅಪಾರವಾಗಿದೆ. ತಮ್ಮ ಚಿತ್ರಗಳ ಮೂಲಕ ನಾಡಿನೆಲ್ಲೆಡೆ ಸಂಸ್ಕೃತಿ ಪಸರಿಸಿದ ಅವರು ಸಾಂಸ್ಕೃತಿಕ ಐಕಾನ್‌ ಆಗಿದ್ದಾರೆ ಎಂದು ಹೇಳಿದರು.

ತಮ್ಮ ಭಾಷಾ ಪ್ರಯೋಗವನ್ನೇ ನಟನಾ ಶೈಲಿಯನ್ನಾಗಿಸಿಕೊಂಡಿದ್ದ ರಾಜ್‌ಕುಮಾರ್‌, ಕನ್ನಡ ಭಾಷೆಯನ್ನು ಅದ್ಭುತವಾಗಿ ಬಳಸಿ ಪಾತ್ರಕ್ಕೆ ಭಾವ ಹಾಗೂ ಜೀವ ತುಂಬುತ್ತಿದ್ದರು. ಇಂದಿಗೂ ಅವರಂತೆ ಸ್ಪಷ್ಟ ಕನ್ನಡ ಉಚ್ಛಾರವನ್ನು ಯಾರಲ್ಲೂ ಕಂಡಿಲ್ಲ.ಇನ್ನು ಅವರು ಮಾಡಿದ ಪಾತ್ರಗಳಲ್ಲೂ ಸಜ್ಜನಿಕೆ ಇರುತ್ತಿತ್ತು. ನಾನು ಮೊದಲು 1970ರಲ್ಲಿ ಬಳ್ಳಾರಿಯ ಪ್ರೋಬೆಷನರಿ ಕಮಿಷನರ್‌ ಆಗಿ ಕರ್ನಾಟಕಕ್ಕೆ ಬಂದಾಗ ಶ್ರೀ ಕೃಷ್ಣದೇವರಾಯ ಚಿತ್ರವನ್ನು ನೋಡಿ ಕನ್ನಡವನ್ನು ಪರಿಚಯ ಮಾಡಿಕೊಂಡೆ. ನಂತರ ಅವರ ಸಿನಿಮಾಗಳನ್ನು ನೋಡುತ್ತಾ ಕನ್ನಡ ಕಲಿತುಕೊಂಡೆ ಎಂದು ತಿಳಿಸಿದರು.

ದೆಹಲಿಯಲ್ಲಿ ಮೊದಲ ಬಾರಿ ರಾಜಕುಮಾರ್‌ ಮೊದಲ ಭೇಟಿ ಮಾಡಿದ್ದೆ. ಅದು ಅವರ ಸರಳತೆ ಕಂಡು ಆಶ್ಚರ್ಯವಾಗಿತ್ತು. ಅದೇ ಸರಳತೆಯನ್ನು ಜೀವನ ಪೂರ್ತಿ ಅಳವಡಿಸಿಕೊಂಡಿದ್ದ ಅವರು, ಪ್ರಸಿದ್ದಿಯ ಉತ್ತುಂಗದಲ್ಲಿ ಇದ್ದಾಗಲೂ ಯಾವುದೇ ಬದಲಾವಣೆ ಕಾಣದ ಮಹಾನ್‌ ನಟ. ಇಂದಿಗೂ ಅವರ ನೆನಪು ನನಗೆ ಸೂರ್ತಿ ನೀಡುತ್ತದೆ ಎಂದ ಅವರು ರಾಜ್‌ ಕುಮಾರ್‌ ವ್ಯಕ್ತಿತ್ವ ಹಾಗೂ ಅವರ ಚಿತ್ರಗಳ ಕುರಿತು ಅನೇಕ ವಿಷಯಗಳನ್ನು ಮೆಲುಕು ಹಾಕಿದರು. 

ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ಅಪ್ಪಾಜಿ 60 ವರ್ಷದವರೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರಲಿಲ್ಲ. ನಮ್ಮ ತಾಯಿ ಕಾರಣ ಕೇಳಿದರೆ ನಾನೇನು ಸಾಧನೆ ಮಾಡಿದ್ದೇನೆ ಎಂದು ಆಚರಿಸಿಕೊಳ್ಳಲಿ ಎನ್ನುತ್ತಿದ್ದರು. ಆನಂತರ ಕುಟುಂಬಸ್ಥರ ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಆಚರಿಸಿಕೊಳ್ಳಲಾರಂಭಿಸಿದರು. ಅಂತಹ ಸರಳ ವ್ಯಕ್ತಿತ್ವದಿಂದಲೇ ಇಂದಿಗೂ ಇಷ್ಟು ಅಭಿಮಾನದಿಂದ ನಾಡಿನಾದ್ಯಂತ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ಅಪ್ಪಾಜಿ ಸಂಪನ್ಮೂಲಗಳ ಕುರಿತು ಹೆಚ್ಚು ಕಾಳಜಿ ಹೊಂದಿದ್ದರು. ತಾನು ಇರುವಲ್ಲಿ ನೀರು ಹಾಗೂ ವಿದ್ಯುತ್‌ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಅಪ್ಪಾಜಿ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು, ಹಾಗಾಗಿ ಅವರ ನೆನೆಪಿನಲ್ಲಿ ರಾಜ್‌ಕುಮಾರ್‌ ಐಎಎಸ್‌ ಅಕಾಡೆಮಿಯನ್ನು ಆರಂಭಿಸಿದ್ದು, ಇಂದು 800 ವಿದ್ಯಾರ್ಥಿಗಳು ಉಚಿತವಾಗಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್‌, ಸಾಹಿತಿ ಬರಗೂರು ರಾಮಚಂದ್ರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ, ನಟ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ರಾಜ್‌ ಕುಟುಂಬ ಸದಸ್ಯರು, ನಟ ನಟಿಯರು ಉಪಸ್ಥಿತರಿದ್ದರು. 

ಗೀತ ಗಾಯನ: ಕಾರ್ಯಕ್ರಮದಲ್ಲಿ ಗಾಯಕಿ ಮಂಜುಳಾ ಗುರುರಾಜ್‌, ಸುನಿತಾ, ಗಾಯಕ ಮೋಹನ್‌ ಅವರಿಂದ ಡಾ.ರಾಜ್‌ಕುಮಾರ್‌ ಚಿತ್ರಗಳ ಗೀತಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಶಿವರಾಜ್‌ಕುಮಾರ್‌ ನಾ ನಿನ್ನ ಮರೆಯಲಾರೆ ಹಾಗೂ ಪುನೀತ್‌ ಬೊಂಬೆ ಹೇಳುತೈತೇ ಹಾಡನ್ನು ಹಾಡಿದರು.

-ನಗರದೆಲ್ಲಡೆ ನಟ ಸಾರ್ವಭೌಮನ ಸಂಭ್ರಮದ ಜನ್ಮದಿನಾಚರಣೆ
-ಡಾ.ರಾಜ್‌ರಂತೆ ಸ್ಪಷ್ಟ ಕನ್ನಡ ಉಚ್ಛಾರ ಇಂದೀಗೂ ಯಾರಲ್ಲೂ ಕಂಡಿಲ್ಲ
-ರವೀಂದ್ರ ಕಲಾಕ್ಷೇತ್ರದಲ್ಲಿ ವರನಟನ ಅದ್ಧೂರಿ 90ನೇ ಜನ್ಮದಿನಾಚರಣೆ
-ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಪುನೀತ್‌ ಭಾಗಿ

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

5

Arrested: ಫಾರೆಸ್ಟ್‌ ಗಾರ್ಡ್‌ ಹುದ್ದೆ ತೊರೆದು ಕಳ್ಳತನಕ್ಕಿಳಿದವ ಸೆರೆ

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

Crime: ಹೆತ್ತ ತಾಯಿಯನ್ನೇ ಕೊಂದ ಮಗ!

Crime: ಹೆತ್ತ ತಾಯಿಯನ್ನೇ ಕೊಂದ ಮಗ!

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.