ಮತಪತ್ರ ಗೊಂದಲ, ಕೈ, ಕಮಲಕ್ಕೆ ಜಯ
Team Udayavani, Mar 24, 2018, 6:00 AM IST
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಕೆಲವೊಂದು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಮತಗಳು ಅಸಿಂಧುಗೊಂಡ ಘಟನೆಗೂ ಸಾಕ್ಷಿಯಾಯಿತು. ಇದೇ ಮೊದಲು ಎಂಬಂತೆ ಜೆಡಿಎಸ್ ಚುನಾವಣೆ ಬಹಿಷ್ಕರಿಸಿದ ಪ್ರಸಂಗವೂ ನಡೆಯಿತು.
ಇದೆಲ್ಲದರ ನಡುವೆಯೇ ಕಾಂಗ್ರೆಸ್‌ನ ಎಲ್.ಹನುಮಂತಯ್ಯ, ನಾಸೀರ್ ಅಹಮದ್ ಹಾಗೂ ಜೆ.ಸಿ.ಚಂದ್ರಶೇಖರ್, ಬಿಜೆಪಿಯ ರಾಜೀವ್ ಚಂದ್ರಶೇಖರ್ ರಾಜ್ಯಸಭೆಗೆ ಆಯ್ಕೆಯಾದರು. ಜೆಡಿಎಸ್ ಅಭ್ಯರ್ಥಿ ಫರೂಕ್ ಸೋಲು ಅನುಭವಿಸಿದರು.
ಬಿಜೆಪಿಯ ರಾಜೀವ್ ಚಂದ್ರಶೇಖರ್ ಅತಿ ಹೆಚ್ಚು 50 ಮತ ಪಡೆದರು. ಬಿಜೆಪಿಗೆ ಇದ್ದ ಬೆಂಬಲ 48. ಇನ್ನೂ ಎರಡು ಮತ ಹೆಚ್ಚುವರಿಯಾಗಿ ಬಂದಿದ್ದು, ಇದು ಸಿ.ಪಿ. ಯೋಗೇಶ್ವರ್, ಎ.ಎಸ್.ಪಾಟೀಲ್ ನಡಹಳ್ಳಿ ಹಾಗೂ ಎಂಇಎಸ್ ಶಾಸಕ ಅರವಿಂದ ಪಾಟೀಲ್ ಮತ ಬಂದಿದೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳಿಗೆ 132 ಮತ ಬಂದಿದೆ.
ಕಾಂಗ್ರೆಸ್‌ಗೆ ಇದ್ದ ಬಲ 123. ಆ ಪೈಕಿ ಎರಡು ಅಸಿಂಧುಗೊಂಡಿವೆ. ಜೆಡಿಎಸ್‌ನ ಏಳು ಬಂಡಾಯ ಶಾಸಕರು ಹಾಗೂ ಪಕ್ಷೇತರರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. 217 ಶಾಸಕರು ಮತದಾನ ಮಾಡಲು ಅರ್ಹತೆ ಹೊಂದಿದ್ದರೂ ಚುನಾವಣೆ ಬಹಿಷ್ಕರಿಸಿದ್ದರಿಂದ ಜೆಡಿಎಸ್‌ನ 28 ಸದಸ್ಯರು ಮತ ಚಲಾವಣೆ ಮಾಡಲಿಲ್ಲ. ಕಾಂಗ್ರೆಸ್‌ನ ರುದ್ರೇಶಗೌಡರು ಅನಾರೋಗ್ಯ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, 188 ಮತ ಚಲಾವಣೆಯಾಗಿ ಅದರಲ್ಲಿ ಎರಡು ಅಸಿಂಧು ಆಗಿವೆ. ಇನ್ನೆರಡು, ಮತ ಪತ್ರದಲ್ಲಿ ಸರಿಯಾಗಿ ಗುರುತು ಮಾಡದ ಕಾರಣ ತಡೆಹಿಡಿಯಲಾಗಿತ್ತು. ಈ ಎರಡೂ ಮತಗಳು ಪಕ್ಷೇತರರದ್ದು ಎಂದು ಹೇಳಲಾಗಿದೆ.
ಅಂತಿಮವಾಗಿ ಎಲ್.ಹನುಮಂತಯ್ಯ-44 ನಾಸೀರ್ ಅಹಮದ್-42 ಜೆ.ಸಿ.ಚಂದ್ರಶೇಖರ್-46 ರಾಜೀವ್ ಚಂದ್ರಶೇಖರ್ -50 ಮತ ಪಡೆದು ಜಯಶೀಲರಾದರು. ಬಿ.ಎಂ.ಫರೂಕ್‌ಗೆ 2 ಮತ ಲಭಿಸಿದವು.
ಇಂದು ರಾಜೀನಾಮೆ
ರಾಜ್ಯಸಭೆ ಚುನಾವಣೆ ಅಂತ್ಯಗೊಂಡಿದ್ದರಿಂದ ಏಳೂ ಜನ ಬಂಡಾಯ ಶಾಸಕರು ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾನುವಾರ ಮೈಸೂರಿನಲ್ಲಿ ನಡೆಯುವ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಸಂಬಂಧ ಮತದಾನದ ಬಳಿಕ ಸಭೆ ಸೇರಿ ಚರ್ಚಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಜತೆಗೂ ಸಮಾಲೋಚನೆ ನಡೆಸಿದರು.
ನಿಯಮ ಬಾಹಿರವಾಗಿ ಚುನಾವಣೆ ನಡೆಸಿದ್ದು ಚುನಾವಣಾಧಿಕಾರಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದ್ದಾರೆ. ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊàಲೆ ಮಾಡಿದೆ. ಹೀಗಾಗಿ ನಾವು ಮತದಾನ ಬಹಿಷ್ಕರಿಸಿ ದೂರ ಉಳಿದಿದ್ದೆವು.
– ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಜೆಡಿಎಸ್‌ನವರು ಹತಾಶರಾಗಿ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಎರಡನೇಯ ಮತ ಪತ್ರ ಕೊಡಲು ನಿಯಮಗಳಲ್ಲಿ ಅವಕಾಶ ಇದೆ. ಜೆಡಿಎಸ್ ಬಹಿಷ್ಕಾರ ಮಾಡಿದ್ದರಿಂದ ತೊಂದರೆಯಿಲ್ಲ. ನಮ್ಮ ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಂತಸ ತಂದಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.
ನಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಶಾಸಕರ ಬೆಂಬಲ ದೊರೆತಿದೆ. ರಾಜೀವ್ ಚಂದ್ರಶೇಖರ್ ಗೆಲುವಿಗೆ ಶ್ರಮಿಸಿದ ಶಾಸಕರಿಗೆ ಅಭಿನಂದನೆಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರದಿಂದ ಮೆರೆಯುತ್ತಿದ್ದಾರೆ. ಅವರು ಅಹಂಕಾರ ಬಿಡಲು ಯೋಚಿಸಲಿ.
– ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.
ಸಂಖ್ಯಾಬಲ ಇಲ್ಲದಿದ್ದರೂ ರಾಜಕೀಯಕ್ಕೆ ಹೊಸಬರೂ ಅಮಾಯಕರೂ ಆಗಿರುವ ಫರೂಕ್ ಅವರನ್ನು ಕಣಕ್ಕಿಳಿಸಿ ಅವಮಾನ ಮಾಡಲಾಗಿದೆ. ಹಿಂದೆ ಜೆಡಿಎಸ್‌ಗೆ ಸಂಖ್ಯಾಬಲ ಇದ್ದಾಗ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಬದಲಿಗೆ ರಾಮಸ್ವಾಮಿ, ವಿಜಯಮಲ್ಯ, ಕುಪೇಂದ್ರರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ಇದು ಜೆಡಿಎಸ್‌ಗೆ ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.
– ಜಮೀರ್ ಅಹಮದ್, ಬಂಡಾಯ ಶಾಸಕ
ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್ ಮತದಾನಕ್ಕೂ ಮೊದಲೇ ತಪ್ಪು ಸರಿಪಡಿಸಿರುವುದರಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಸೋಲಿನ ಹತಾಸೆಯಿಂದ ಜೆಡಿಎಸ್‌ನವರು ಆರೋಪ ಮಾಡಿದ್ದಾರೆ.
– ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.