ಕನ್ನಡದ ಅಸ್ಮಿತೆ ಬಿತ್ತಿದವರು ರಾಮಮೂರ್ತಿ
Team Udayavani, Mar 12, 2018, 12:23 PM IST
ಬೆಂಗಳೂರು: ಕನ್ನಡದ ಅಸ್ಮಿತೆಯನ್ನು ಬಿತ್ತಿದವರು ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿ ಎಂದು ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಬಣ್ಣಿಸಿದರು.
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮ.ರಾಮಮೂರ್ತಿ ಜನ್ಮಶತಮಾನೋತ್ಸವ ಸಮಾರಂಭದಲ್ಲಿ “ಮರೆಯಲಾಗದ ಕನ್ನಡ ವೀರಸೇನಾನಿ ಮ.ರಾಮಮೂರ್ತಿ’ ಮತ್ತು “ಕನ್ನಡ ಹಿರಿಮೆ ಗರಿಮೆ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪತ್ತೇದಾರಿ ಕಾದಂಬರಿಗಳಿಂದಲೇ ಖ್ಯಾತರಾಗಿದ್ದ ರಾಮಮೂರ್ತಿ ಅವರಲ್ಲಿ ಕನ್ನಡದ ಬಗ್ಗೆ ತುಡಿತವಿತ್ತು. ಬೆಂಗಳೂರಿನಲ್ಲಿ ಕನ್ನಡತನಕ್ಕೆ ಧಕ್ಕೆ ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ತಮಿಳಿನ ಚಿತ್ರವೊಂದು ವೀರಪುಲಕೇಶಿಗೆ ಅವಮಾನ ಮಾಡಿದಾಗ ಆ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು. ನಾವೀಗ ಹಿಡಿಯುತ್ತಿರುವ ಹಳದಿ ಮತ್ತು ಕೆಂಪು ಬಣ್ಣದ ಬಾವುಟದ ರೂವಾರಿ ಕೂಡ ಅವರೇ ಆಗಿದ್ದಾರೆ ಎಂದರು.
ಒಂದು ಕಾಲದಲ್ಲಿ ಬೆಂಗಳೂರು ಅನ್ಯಭಾಷಿಗರ ಪಾಲಾಗಿತ್ತು. ಇದನ್ನು ಗಮನಸಿದ ರಾಮಮೂರ್ತಿ ಅವರು ಕನ್ನಡದ ಬಗ್ಗೆ ಸೇನೆ ಕಟ್ಟಿ ಜಾಗೃತಿ ಮೂಡಿಸಿದರು. ದಂಡು ಪ್ರದೇಶದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದರು ಎಂದು ಮ.ರಾಮಮೂರ್ತಿ ಅವರ ಹೋರಾಟದ ಹಾದಿಯನ್ನು ಮೆಲುಕು ಹಾಕಿದರು. ಇಂಗ್ಲೀಷ್ ಮಾತನಾಡಿದವರಿಗೆ ದಂಡಹಾಕುತ್ತಿದ್ದ ಪ್ರವೃತ್ತಿ ಕೂಡ ಬೆಂಗಳೂರಿನಲ್ಲಿತ್ತು ಎಂದು ಚಿಮು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಮಹಾನ್ ಹೋರಾಟಗಾರರಾಗಿದ್ದ ಮ.ರಾಮಮೂರ್ತಿ ಅವರು ಕನ್ನಡ ಚಿಂತಕರಷ್ಟೇ ಅಲ್ಲ ಪತ್ರಕರ್ತರು ಕೂಡ ಆಗಿದ್ದರು. ಕನ್ನಡದ ಗಂಧಗಾಳಿ ಇಲ್ಲದ ಪ್ರದೇಶಗಳಲ್ಲಿ ಕನ್ನಡವನ್ನು ಪಸರಿಸಿದರು. ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅವರು ಕಿರಿಯರನ್ನು ಹೋರಾಟದಲ್ಲಿ ಬೆಳೆಸುತ್ತಿದ್ದರು ಎಂದರು.
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, , ಮ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ, ಲೇಖಕ ಎನ್.ಆನಂದರಾಮರಾವ್, ರು.ಬಸಪ್ಪ, ಯ.ಮೃತ್ಯುಂಜಯ, ಪ್ರೊ.ಶಾಂತರಾಜು ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆ “ಕನ್ನಡ ಚಳುವಳಿ ಒಂದು ಮರುಚಿಂತನೆ’ ಕುರಿತ ವಿಚಾರಗೋಷ್ಠಿ ಕೂಡ ನಡೆಯಿತು.
ಎಂದೆಂದಿಗೂ ಬೆಳಗಾವಿ ಕರ್ನಾಟಕದ್ದೇ: ಬೆಳಗಾವಿಯಲ್ಲಿ ಮರಾಠಿಗರು ತಮ್ಮ ಹಠವನ್ನು ಮುಂದುವರಿಸಿದ್ದಾರೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೆ ಕನ್ನಡಿಗರು ಎಂತಹ ಹೋರಾಟಕ್ಕೂ ಸಿದ್ಧರಾಗಿರುತ್ತಾರೆ ಎಂದು ಡಾ.ಚಿದಾನಂದ ಮೂರ್ತಿ ಹೇಳಿದರು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯ ವೈಖರಿ ವಿರುದ್ಧ ಹರಿಹಾಯ್ದ ಅವರು, ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರೊಬ್ಬರು ಮೇಯರ್ ಆಗಿದ್ದಾರೆ. ಮರಾಠಿಗರೂ ಸೇರಿ ಎಲ್ಲರೂ ಅವರನ್ನು ಒಪ್ಪಿಕೊಂಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.