ರಾಮಾಯಣ ಕಥೆ ಹೇಳುವ ಗೊಂಬೆಗಳ ನೋಡ ಬನ್ನಿ
Team Udayavani, Oct 16, 2023, 11:13 AM IST
ಬೆಂಗಳೂರು: “ಶ್ರೀರಾಮ ಕಥಾ ಸುಧಾ’ ಶೀರ್ಷಿಕೆಯಲ್ಲಿ ಗೊಂಬೆ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಮುಖ್ಯವಾಗಿ ಬಾಲ ಕಾಂಡ- ಪುತ್ರಕಾಮೆಷ್ಟಿ ಯಾಗ, ರಾಮನ ಜನನ, ಋಷಿ ವಿಶ್ವಾಮಿತ್ರ ಅವರ ಅಯೋಧ್ಯೆಯ ಭೇಟಿ, ತಾಟಕಾ ರಾಕ್ಷಸನನ್ನು ಕೊಂದ ರಾಮ-ಲಕ್ಷ್ಮಣ, ರಾಮ-ಸೀತೆಯ ದೈವಿಕ ಮದುವೆ, ಅಯೋಧ್ಯೆ ಕಾಂಡ, ಅರಣ್ಯ ಕಾಂಡ-ಸೌಪರ್ಣಿಕನ ಮೂಗು ಕತ್ತರಿಸಿದ ಲಕ್ಷ್ಮಣ, ಬಂಗಾರ ಮಾಯಾ ಜಿಂಕೆ, ಸೀತೆಯ ಅಪಹರಣ, ಕಿಷ್ಕಿಂದ ಕಾಂಡ- ರಾಮ- ಲಕ್ಷ್ಮ ಣನನ್ನು ಸುಗ್ರೀವನ ಭೇಟಿಗೆ ಕರೆತಂದ ಹನುಮಂತ, ವಾಲಿಯನ್ನು ಕೊಂದ ರಾಮ, ಸುಂದರ ಕಾಂಡ- ಲಂಕೆಯಲ್ಲಿ ಸೀತೆ ಇದ್ದ ಅಶೋಕವನವನ್ನು ಕಂಡುಹಿಡಿದ ಹನುಮ, ಯುದ್ಧ ಕಾಂಡ- ವಾನರ ಸೇನೆ ಸಮುದ್ರದಲ್ಲಿ ಸೇತುವೆ ಕಟ್ಟುವುದು, ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತು ತರುವುದು, ರಾಮ, ರಾವಣನನ್ನು ಕೊಲ್ಲುವುದು, ರಾಮನ ಪಟ್ಟಾಭಿಷೇಕ ಹಾಗೂ ಉತ್ತರ ಕಾಂಡ- ಲವ-ಕುಶ ಜನನ ಹೀಗೆ ಏಳು ಭಾಗಗಳಲ್ಲಿ ರಾಮಾಯಣದ ಇಡೀ ಕತೆಯನ್ನು ಗೊಂಬೆಗಳ ಮೂಲಕ ವಿವರಿಸಲಾಗಿದೆ.
ಪಾರಂಪರಿಕ ಹಬ್ಬಗಳಿಂದ ಮನನಾಭ್ಯಾಸ: ನಿತ್ಯ ಜೀವನದ ಒತ್ತಡದಲ್ಲಿ ಒಳ್ಳೆಯತನ ಮತ್ತು ಕೆಟ್ಟತನದ ಯುದ್ಧ ನಮ್ಮ ಮನಸ್ಸಿನಲ್ಲಿ ಸದಾ ನಡೆಯುತ್ತಿರುತ್ತದೆ. ಇವೆರಡರ ನಡುವೆ ಮನನಾಭ್ಯಾಸ, ಏಕಚಿತ್ತತೆ ಮೂಡಿಸಿಕೊಳ್ಳಲು ಪಾರಂಪರಿಕ ಹಬ್ಬಗಳೇ ಮಾರ್ಗ ಎಂದು ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.
ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಸಭಾಂಗಣದಲ್ಲಿ ಹಮ್ಮಿಕೊಂಡಿರುವ ನವರಾತ್ರಿ-2023; ರಾಮಾ ಯಣ ಮಹಾಕಾವ್ಯ ಆಧಾ ರಿತ ಗೊಂಬೆಗಳ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ, ರಾಮಾ ಯಣ ಮಹಾಕಾವ್ಯ ಆಧಾ ರಿತ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಷ್ ಕುಮಾರ್ ಸಿಂಗ್, ಇಲ್ಲಿ ರಾಮಾಯಣ ಮಹಾಕಾವ್ಯದಲ್ಲಿನ ವಿವಿಧ ಪ್ರಸಂಗಗಳ ಕುರಿತು ಗೊಂಬೆಗಳೇ ಕತೆ ಹೇಳುವಂತೆ ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನವು ಅ.24ರವರೆಗೆ ನಿತ್ಯ ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್, “ರಾಮಾಯಣದಲ್ಲಿ ಋಷಿಗಳು’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.