ಆತ್ಮಹತ್ಯೆಗೆ ಮುನ್ನ ರಮೇಶ್‌ ಡೆತ್‌ನೋಟ್‌

Team Udayavani, Oct 13, 2019, 3:09 AM IST

atmahatye

ಬೆಂಗಳೂರು: “ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಬ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಆತ್ಮಹತ್ಯೆಗೆ ಶರಣಾದ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಡೆತ್‌ನೋಟ್‌ ಬರೆದಿಟ್ಟಿದ್ದಾರೆ.

ಜ್ಞಾನಭಾರತಿ ಆವರಣದಲ್ಲಿ ಪತ್ತೆಯಾದ ರಮೇಶ್‌ ಕಾರಿನಲ್ಲಿ ಸಿಕ್ಕಿರುವ ಡೆತ್‌ನೋಟ್‌ನಲ್ಲಿ, “ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಬ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಜಾರಾಗಿದ್ದೇನೆ. ಐಟಿ ಅಧಿಕಾರಿಗಳೇ ನನ್ನ ಹೆಂಡತಿ, ಮಕ್ಕಳಿಗೆ ತೊಂದರೆ ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ.

ಸೌಮ್ಯ(ಪತ್ನಿ) ನನ್ನನ್ನು ಕ್ಷಮಿಸು, ಮಕ್ಕಳನ್ನು ಚೆನ್ನಾಗಿ ನೋಡಿಕೋ, ಲಕ್ಷ್ಮೀದೇವಿ, ಪದ್ಮಾ(ಸಹೋದರಿಯರು), ಸತೀಶ(ಸಹೋದರ) ನಿಮ್ಮೊಂದಿಗೆ ಹುಟ್ಟಿ ನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ. ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿದ್ಯಾಸಂಸ್ಥೆಗೆ ಕೃತಜ್ಞನಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನಿಮ್ಮನ್ನು ಸಾಕಬೇಕಿದ್ದ ನಾನು ಹೋಗುತ್ತಿದ್ದೇನೆ ಕ್ಷಮಿಸಿ. ಎಂದು ತಮ್ಮ ಕುಟುಂಬಸ್ಥರಿಗೆ ಧನ್ಯವಾದ ಹಾಗೂ ಕ್ಷಮೆ ಕೋರಿದ್ದಾರೆ.

ಇನ್ನು ಪತ್ನಿ ಸೌಮ್ಯ ಬಳಿಯೂ ರಮೇಶ್‌ ಐಟಿ ಅಧಿಕಾರಿಗಳ ವಿಚಾರಣೆ ಬಗ್ಗೆ ಹೇಳಿಕೊಂಡಿದ್ದರು. ಈ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡಿದ ಪತ್ನಿ ಸೌಮ್ಯ, ಇಷ್ಟೊಂದು ತೊಂದರೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಇದು ನನ್ನ ಮರ್ಯಾದೆ ವಿಷಯ. ಕರ್ನಾಟಕದಲ್ಲಿ ಎಲ್ಲ ಶಾಸಕರು, ಸಚಿವರು ಗೊತ್ತು. ಮರ್ಯಾದೆಗೋಸ್ಕರ ಬದುಕಿದ್ದೇನೆ ಎಂದು ಹೇಳಿಕೊಂಡಿದ್ದರು. ಬೆಳಗ್ಗೆ ಸಾಹೇಬ್ರ ಮನೆಗೆ ಹೋಗುತ್ತೇನೆ ಎಂದು ಹೋದರು. ಬಳಿಕ ಫೋನ್‌ ಮಾಡಿದಾಗ ಸ್ವಿಚ್‌ ಆಫ್ ಆಗಿತ್ತು ಎಂದು ಹೇಳಿದರು.

ಐಟಿ ಅಧಿಕಾರಿಗಳೇ ಕಾರಣ: ರಮೇಶ್‌ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೆ ಕಾರಣ. ಸಹೋದರ ರಮೇಶ್‌ರನ್ನು ಕರೆದೊಯ್ದು ಮಾನಸಿಕ ಹಿಂಸೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಹೋದರ ಸತೀಶ್‌ ಗಂಭೀರ ಆರೋಪ ಮಾಡಿದರು. ಅಲ್ಲದೇ, ಪ್ರಕರಣದ ಸಂಬಂಧ ಜ್ಞಾನಭಾರತಿ ಠಾಣೆ ಪೊಲೀಸರ ಹೇಳಿಕೆಯಲ್ಲಿಯೂ ರಮೇಶ್‌ ಸಾವಿಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಗಣ್ಯರ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಉಗ್ರಪ್ಪ ಭೇಟಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ರಮೇಶ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಎಂದು ನಾಯಕರಿಗೆ ಮೃತನ ಕುಟುಂಬಸ್ಥರು ಒತ್ತಾಯಿಸಿದರು.

ಪರಮೇಶ್ವರ್‌ ಎದುರು ಅಳಲು: ಘಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ರಮೇಶ್‌ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಪತ್ನಿ ಸೌಮ್ಯ, ಪತಿ ರಮೇಶ್‌ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಐಟಿ ಅಧಿಕಾರಿಗಳು ಯಾಕೆ ನಮಗೆ ಈ ರೀತಿ ತೊಂದರೆ ಕೊಟ್ಟರು. ನಮ್ಮ ಕುಟುಂಬ ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ರಮೇಶ್‌ಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದ್ದೆ. ಆತ ಹೀಗೆ ಯಾಕೆ ಮಾಡಿಕೊಂಡನೋ ಗೊತ್ತಿಲ್ಲ. ನಮ್ಮ ಮನೆಯಲ್ಲೇ ಐಟಿ ಅಧಿಕಾರಿಗಳು ರಮೇಶ್‌ರನ್ನು ವಿಚಾರಣೆ ನಡೆಸಿದರರು. ಆತನಿಗೆ ಏನು ಪ್ರಶ್ನೆ ಕೇಳಿದರು ಎಂದು ಗೊತ್ತಿಲ್ಲ. ಆತ ಈ ರೀತಿ ಮಾಡಿಕೊಂಡಿರುವುದು ಬೇಸರ ತಂದಿದೆ ಎಂದು ಹೇಳಿದರು.

ಕುಟುಂಬಸ್ಥರ ಆಕ್ರಂದನ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ರಮೇಶ್‌ ಕಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬಳಿಕ ಕಾಂಗ್ರೆಸ್‌ ನಾಯಕರು ಆಗಮಿಸಿ ಸಮಾಧಾನ ಪಡಿಸಲು ಯತ್ನಿಸಿದರು.

ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಮಾತನಾಡುವಾಗ ಆತ್ಮಹತ್ಯೆ ಬಗ್ಗೆ ರಮೇಶ್‌ ಹೇಳಿಕೊಂಡಿದ್ದಾರೆ. ಕೂಡಲೇ ನಮಗೆ ಮಾಹಿತಿ ಬಂದಿತ್ತು. ಮೊಬೈಲ್‌ ಲೋಕೇಶನ್‌ ಆಧರಿಸಿ ಜ್ಞಾನಭಾರತಿ ಆವರಣದಲ್ಲಿ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ರಮೇಶ್‌ ಮೃತ ದೇಹ ಪತ್ತೆಯಾಗಿದೆ. ಬಳಿಕ ಕುಟುಂಬ ಸದಸ್ಯರನ್ನು ಕರೆಸಿ ಗುರುತು ಪತ್ತೆ ಮಾಡಲಾಯಿತು. ಈ ಸಂಬಂಧ ಕುಟುಂಬ ಸದಸ್ಯರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
-ಬಿ.ರಮೇಶ್‌, ಡಿಸಿಪಿ ಪೂರ್ವ ವಿಭಾಗ

ಟಾಪ್ ನ್ಯೂಸ್

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು

Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು

Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್‌

Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್‌

Arrested: ಟ್ಯಾಟೂ ಆರ್ಟಿಸ್ಟ್‌ ಬಂಧನ: 2.50 ಕೋಟಿ ರೂ. ಡ್ರಗ್ಸ್‌ ಜಪ್ತಿ

Arrested: ಟ್ಯಾಟೂ ಆರ್ಟಿಸ್ಟ್‌ ಬಂಧನ: 2.50 ಕೋಟಿ ರೂ. ಡ್ರಗ್ಸ್‌ ಜಪ್ತಿ

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.