ಬ್ರಾಂಡ್ ರಾಯಭಾರಿಯಾಗಿ ರಮೇಶ್ ಮುಂದುವರಿಕೆ
Team Udayavani, Nov 23, 2018, 11:29 AM IST
ಬೆಂಗಳೂರು: ವಿಶ್ವದ ಶುದ್ಧ ಮತ್ತು ಏಕೈಕ ಪ್ರಮಾಣೀಕೃತ ಅಗರಬತ್ತಿ ತಯಾರಕ ಸೈಕಲ್ ಪ್ಯೂರ್ ಅಗರಬತ್ತೀಸ್, ಚಿತ್ರನಟ ರಮೇಶ್ ಅರವಿಂದ್ ಅವರನ್ನು ಮತ್ತೆ ಎರಡು ವರ್ಷಗಳ ಅವಧಿಗೆ ತಮ್ಮ ಬ್ರಾಂಡ್ ರಾಯಭಾರಿಯನ್ನಾಗಿ ಮುಂದುವರಿಸಿದೆ.
ಗುರುವಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಅವರು ಮಾತನಾಡಿ, ಸೈಕಲ್ ಪ್ಯೂರ್ ಅಗರಬತೀ¤ಸ್‌ನ ದಕ್ಷಿಣ ಭಾರತದ ಪ್ರಚಾರ ರಾಯಭಾರಿಯಾಗಿ ರಮೇಶ್ ಅರವಿಂದ್ ಅವರು ಕರ್ನಾಟಕದಾದ್ಯಂತ ಸೈಕಲ್ ಪ್ಯೂರ್ ಉತ್ಪನ್ನಗಳನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಅವರ ಸಹಭಾಗಿತ್ವವು ಗ್ರಾಹಕರ ಮೇಲೆ ಅಪಾರ ಪರಿಣಾಮ ಬೀರುವ ಜೊತೆಗೆ ಬ್ರಾಂಡ್‌ನೊಂದಿಗೆ ಒಂದು ಪರಿಶುದ್ಧ ಸಂಪರ್ಕವನ್ನು ಸ್ಥಾಪಿಸುವಲ್ಲಿ ನೆರವಾಗಿದೆ.
ರಾಜ್ಯದಲ್ಲಿ ‘ವಾಸು ಅಗರಬತೀಸ್’ ಉತ್ಪನ್ನವನ್ನು ಪ್ರತಿನಿಧಿಸುತ್ತಿರುವ ರಮೇಶ್ ಅವರೊಂದಿಗಿನ ಈ ಸಹಯೋಗದ ಮುಂದುವರಿಕೆ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಈ ಸಂಬಂಧದಿಂದ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ಬಲಪಡಿಸಲು ಹಾಗೂ ವಾಸು ಬ್ರಾಂಡ್ ಅನ್ನು ಪ್ರತಿಯೊಂದು ಮನೆಯ ಒಂದು ಭಾಗವಾಗಿ ನೋಡಲು ಬಯಸುತ್ತೇವೆ ಎಂದು ನುಡಿದರು.
ನಟ ರಮೇಶ್ ಅರವಿಂದ್ ಅವರು ಮಾತನಾಡಿ, ಚಿಕ್ಕಂದಿನಿಂದಲೂ ಅಗರಬತ್ತಿಗಳನ್ನು ಬೆಳಗದೇ ನನ್ನ ಪ್ರಾರ್ಥನೆ ಸಂಪೂರ್ಣವಾಗುತ್ತಿರಲಿಲ್ಲ. ಇದು ನನ್ನ ಸಂಪ್ರದಾಯ ಮತ್ತು ಆಚರಣೆಗಳ ಒಂದು ಭಾಗವಾಗಿದೆ. ಇದನ್ನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ರವಾನಿಸಲು ಬಯಸುತ್ತೇನೆ.
ಸಾಮಾಜಿಕ ಕಳಕಳಿ, ಪಾರದರ್ಶಕತೆ ಮತ್ತು ಪರಿಶುದ್ಧತೆಯ ಸಂಕೇತವೇ ವಾಸು ಅಗರಬತ್ತಿಗಳು. ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯ ಮೌಲ್ಯಗಳನ್ನು ನಾನು ಗೌರವಿಸುತ್ತೇನೆ ಹಾಗೂ ನಂಬುತ್ತೇನೆ. ಆದ್ದರಿಂದ ಈ ಸಂಬಂಧವನ್ನು ಮುಂದುವರಿಸಲು ಹಾಗೂ ಇಂತಹ ಅಭಿಯಾನದ ಭಾಗವಾಗಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.