ಅಂತ್ಯಸಂಸ್ಕಾರಕ್ಕೂ ಬಾರದ ರಮ್ಯಾ: ಅಸಮಾಧಾನ
Team Udayavani, Nov 27, 2018, 11:39 AM IST
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ನೆರಳಿನಲ್ಲಿಯೇ ಬೆಳೆದು ಮಂಡ್ಯದ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಅಂಬರೀಶ್ ಅಂತಿಮ ದರ್ಶನ ಪಡೆಯದಿರುವುದು, ಅಂತ್ಯಕ್ರಿಯೆಗೆ ಆಗಮಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಂಬರೀಶ್ ನಿಧನ ಸುದ್ದಿ ತಿಳಿದು ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ರಮ್ಯಾ, ಅಂತಿಮ ನಮನ ಸಲ್ಲಿಸಲು ಆಗಮಿಸದಿರುವುದು ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಮಂದಿಗೆ “ಗಾಡ್ ಫಾದರ್’ ಆಗಿದ್ದ ಅಂಬರೀಶ್ ಅವರನ್ನು ರಮ್ಯಾ “ಅಂಕಲ್’ ಎಂದೇ ಕರೆಯುತ್ತಿದ್ದರು. ಅಲ್ಲದೇ ಮಂಡ್ಯದಲ್ಲಿ 2013ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಗೆ ರಮ್ಯಾ ಅಭ್ಯ ರ್ಥಿ ಯಾಗಲು ಅಂಬ ರೀಶ್ ಅವರೇ ಕಾರಣ.
ಅಲ್ಲದೆ, ರಮ್ಯಾ ಗೆಲುವಿಗೂ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ, ಅಂಬಿ ಅವರ ಅಂತಿಮ ದರ್ಶನಕ್ಕೆ ಆಗಮಿಸುತ್ತರೆ ಎಂದು ಮಂಡ್ಯದ ಜನ ನಿರೀಕ್ಷಿಸಿದ್ದರು. ರಮ್ಯಾ ಅನುಪಸ್ಥಿತಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸಂಪರ್ಕಕ್ಕೂ ಲಭ್ಯವಾಗಿಲ್ಲ.
ಸಂಸದೆಯಾಗಿ ಆಯ್ಕೆಯಾದ ಮೇಲೆ ರಮ್ಯಾ ಆರಂಭದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಣದಲ್ಲಿ ಗುರುತಿಸಿಕೊಂಡು, ನಂತರ ರಾಷ್ಟ್ರೀಯ ನಾಯಕರ ಸಂಪರ್ಕ ಹೆಚ್ಚಾದಂತೆ ಸ್ಥಳೀಯ ನಾಯಕರನ್ನು ಕಡೆಗಣಿಸಿದರು ಎಂಬ ಆರೋಪ ಅವರ ಮೇಲಿದೆ.
ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಸೋಲಿಗೆ ಅಂಬರೀಶ್ ಕಾರಣ ಎಂದು ಭಾವಿಸಿದ್ದ ರಮ್ಯಾ ಆಗಿನಿಂದಲೇ ಅವರಿಂದ ಅಂತರ ಕಾಯ್ದುಕೊಂಡಿದ್ದರೆನ್ನಲಾಗಿದೆ. ಆದರೆ ಈ ರಾಜಕೀಯ ಭಿನ್ನಾಭಿಪ್ರಾಯದಿಂದಲೇ ಅಂತಿಮ ದರ್ಶನಕ್ಕೆ ಆಗಮಿಸಲಿಲ್ಲವೇ ಎನ್ನುವುದು ಖಚಿತವಾಗಿಲ್ಲ.
ಅಂತಿಮ ದರ್ಶನ ಪಡೆಯಲು ಆಗಮಿಸದ ರಮ್ಯಾ ಅವರಿಗೆ ವೈಯಕ್ತಿಕವಾಗಿ ಯಾವ ಕಾರಣ ಇದೆಯೋ ನಮಗೆ ಗೊತ್ತಿಲ್ಲ. ಅವರು ಪಾಳೊYಳ್ಳದಿರಲು ಏನು ಕಾರಣ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಾಲ್ಗೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಷಯ.
-ಗಂಗಾಧರ್, ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಸಾವಿನಲ್ಲಿ ಗೌರವಿಸದವರು ಮನರೂಪದ ರಾಕ್ಷಸ ಗುಣದವರು. ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು. ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ. ದೋಸೆ ಮಗಚಿ ತಳ ಸೀಯುತ್ತದೆ ತಪ್ಪದೆ ಒಂದು ದಿನ. ಯಥಾ ಮನಃ ತಥಾ ಜೀವನ.
-ಜಗ್ಗೇಶ್, ಚಿತ್ರ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Wine Merchants: ನಾಳೆಯ ಮದ್ಯ ಮಾರಾಟ ಬಂದ್ ನಿರ್ಧಾರ ವಾಪಸ್ ಪಡೆದ ಅಸೋಸಿಯೇಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.