ದಿಲ್ಲಿ ಗದ್ದುಗೆ ಏರಲು ರಾಜ್ಯ ಚುನಾವಣಾ ಫಲಿತಾಂಶ ಸ್ಫೂರ್ತಿ
Team Udayavani, May 3, 2018, 6:50 AM IST
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಳೆದ ಒಂದು ತಿಂಗಳಿನಿಂದ ಎಐಸಿಸಿ ಪ್ರತಿನಿಧಿ ಯಾಗಿ ರಾಜ್ಯದಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಅವರು “ಉದಯವಾಣಿ’ ಜತೆ ಚುನಾವಣೆ ಕುರಿತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎನ್ನುತ್ತಿದೆ. ನಿಮ್ಮ ಪ್ರಕಾರ ಕಾಂಗ್ರೆಸ್‌ಗೆ ಲಾಭತರಬಲ್ಲ ಅಂಶಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಭಾಗ್ಯ ಯೋಜನೆಗಳು, ಯಾವುದೇ ಗೊಂದಲ ಇಲ್ಲದೆ ಸರ್ಕಾರ ನಡೆಸಿರುವುದು. ಭ್ರಷ್ಟಾ ಚಾರ ಇಲ್ಲದೇ 5 ವರ್ಷ ಉತ್ತಮ ಆಡಳಿತ ನೀಡಿ ರುವುದನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಇನ್ನೊಂದೆಡೆ, ಮೋದಿ ಹಾಗೂ ಅಮಿತ್ ಶಾ ಯಡಿಯೂರಪ್ಪ, ಜನಾರ್ದನರೆಡ್ಡಿ ಭ್ರಷ್ಟರ ಕೂಟಕ್ಕೆ ಟಿಕೆಟ್ ನೀಡಿರುವುದು, ಮೋದಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲಿಂಗಾಯತರಿಗೆ ಪ್ರತ್ಯೇಕ ಸ್ಥಾನಮಾನ ನೀಡದಿರುವುದು, ಕನ್ನಡ ಧ್ವಜಕ್ಕೆ ಮಾನ್ಯತೆ ನೀಡದಿರುವುದು. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿರುವುದು ಚುನಾವಣೆಯ ಪ್ರಮುಖ ವಿಷಯವಾಗಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಹಿನ್ನಡೆ ಕಂಡಿದೆಯಲ್ಲಾ?
ಕಳೆದ ಎರಡು ವರ್ಷದಲ್ಲಿ ಹತ್ತು ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹತ್ತೂ ಕಡೆ ಸೋತಿದೆ. ಕಾಂಗ್ರೆಸ್ 4 ರಲ್ಲಿ ಗೆಲುವು ಪಡೆದಿದ್ದು, ಉಳಿದ ಪಕ್ಷಗಳು 6 ಸ್ಥಾನಗಳಲ್ಲಿ ಗೆಲುವು ಪಡೆದಿವೆ.
ಆದರೂ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತಲ್ಲಾ?
ಗೋವಾದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಬಿಜೆಪಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದೆ. ಮಣಿಪುರ ಮತ್ತು ಹರಿ ಯಾಣ ಗಳಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡಿ ಅಧಿಕಾರಕ್ಕೇರಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ನಿಮ್ಮ ಪಕ್ಷದಲ್ಲಿಯೂ ಭ್ರಷ್ಟರಿಗೆ ಟಿಕೆಟ್ ನೀಡಿದ್ದಾರಲ್ಲಾ ?
ನಮ್ಮ ಪಕ್ಷದಲ್ಲೂ ಆರೋಪಿತರು ಇದ್ದಾರೆ, ಅವರ ವಿರುದ್ಧ ಎಸ್‌ಐಟಿ ತನಿಖೆ ನಡೆಸುತ್ತದೆ. ಅವರು ತಪ್ಪಿತಸ್ಥರೆಂದರೆ ಶಿಕ್ಷೆಯಾಗುತ್ತದೆ. ಕಾಂಗ್ರೆಸ್ ಯಾವತ್ತೂ ತಪ್ಪಿತಸ್ಥರಿಗೆ ರಕ್ಷಣೆ ನೀಡಿಲ್ಲ.
ಕಳೆದ 35 ವರ್ಷದಲ್ಲಿ ಕರ್ನಾಟಕದಲ್ಲಿ ಯಾವುದೇ ಪಕ್ಷ ಮರಳಿ ಅಧಿಕಾರ ಪಡೆದಿಲ್ಲ?
ಸಿದ್ದರಾಮಯ್ಯ ಸರ್ಕಾರ ಈ ಸಂಪ್ರದಾಯವನ್ನು ಬದಲಾಯಿಸುತ್ತದೆ.
ಬಿಜೆಪಿಯವರು ನಿಮ್ಮದು ಪರ್ಸಂಟೇಜ್ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ?
ಅನಂತಕುಮಾರ್ ಮತ್ತು ಯಡಿಯೂರಪ್ಪ ಹೈ ಕಮಾಂಡ್‌ಗೆ ಹಣ ಕೊಟ್ಟಿರುವ ಬಗ್ಗೆ ಮಾತನಾಡಿ ರುವುದು ದೇಶಕ್ಕೆ ಗೊತ್ತಿದೆ. ಅಮಿತ್ ಶಾ ಮತ್ತು ಮೋದಿ ಅವರಿಂದ ಎಷ್ಟು ಪರ್ಸೆಂಟೇಜ್ ತೆಗೆದು ಕೊಂಡಿದ್ದಾರೆ ಎಂದು ದೇಶದ ಜನತೆಗೆ ತಿಳಿಸಲಿ.
ಸಿದ್ದರಾಮಯ್ಯ ಯಾಕೆ ದೇವೇಗೌಡರ ವಿರುದ್ಧ ಮಾತನಾಡುತ್ತಿದ್ದಾರೆ?
ನಾವು ಯಾರೊಂದಿಗೂ ವೈಯಕ್ತಿಕ ದ್ವೇಷ ಇಟ್ಟುಕೊಂಡಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು ಮಾತ್ರ ಇದೆ. ಈಗಾಗಲೇ ರಾಹುಲ್ ಗಾಂಧಿ ಸಹ ಇದನ್ನು ಸ್ಪಷ್ಟ ಪಡಿಸಿದ್ದಾರೆ.
ನಾವೆಲ್ಲರೂ ಒಟ್ಟಾಗಿದ್ದೇವೆ
ಮಲ್ಲಿಕಾರ್ಜುನ ಖರ್ಗೆ ತಳಮಟ್ಟದಿಂದ ಬೆಳೆದ ನಾಯಕ. ನಾನು ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದೇನೆ. ಸಿದ್ದರಾಮಯ್ಯ ಸದ್ಯ ಲೀಡರ್ ಅಂತ ಅವರೇ ಹೇಳಿದ್ದಾರೆ. ಖರ್ಗೆಯವರಿಗೆ ಪಕ್ಷದಲ್ಲಿ ಸಾಕಷ್ಟು ಗೌರವ ಇದೆ. ಅವರು ಸಂಸತ್ತಿನಲ್ಲಿ ಸಂಸದೀಯ ನಾಯಕರಾಗಿದ್ದಾರೆ. ಈಗ ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದೇವೆ.
– ಶಂಕರ್ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.