ಅತ್ಯಾಚಾರ ಆರೋಪ: ಸಹ ಸಂಗೀತ ನಿರ್ದೇಶಕ ಸೆರೆ
Team Udayavani, Nov 28, 2018, 12:08 PM IST
ಬೆಂಗಳೂರು: ಸಂಗೀತ ಕಲಿಸಿಕೊಡುವ ನೆಪದಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ “ಗೂಳಿಹಟ್ಟಿ’ ಸಿನಿಮಾದ ಸಹ ಸಂಗೀತ ನಿರ್ದೇಶಕನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಳ ಉಪನಗರ ನಿವಾಸಿ ಕರಣ್ ಮಹದೇವ್ ಅಲಿಯಾಸ್ ಮಂಜುನಾಥ್ ಬಂಧಿತ. ಆರೋಪಿ ಸಂಗೀತ ಕಲಿಸುವ ವೇಳೆ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ, ಈ ವಿಚಾರ ಪೋಷಕರಿಗೆ ತಿಳಿಸುವುದಾಗಿ ಹೇಳಿ ಪದೇ ಪದೇ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದರು.
ದೂರಿನಲ್ಲಿ ಏನಿದೆ?: ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಮಂಜುನಾಥ್‌ನನ್ನು ಪರಿಚಯಿಸಿಕೊಂಡ ಸಂತ್ರಸ್ತೆ ಕೆಲ ದಿನಗಳ ಬಳಿಕ ಉಲ್ಲಾಳ ಉಪನಗರದಲ್ಲಿರುವ ಆತನ ಮನೆಗೆ ಹೋಗಿದ್ದರು. ಈ ವೇಳೆ ತಾನು ಸಿನಿಮಾಗಳಿಗೆ ಗೀತೆ ರಚಿಸುತ್ತಿದ್ದು, ಮನೆಯಲ್ಲೇ ಸ್ಟುಡಿಯೋ ನಿರ್ಮಿಸಿಕೊಂಡಿದ್ದೇನೆ ಎಂದು ಹೇಳಿ ಸ್ಟುಡಿಯೋವನ್ನು ತೋರಿಸಿದ್ದಾನೆ.
ಬಳಿಕ ನಿಮಗೆ ಸಂಗೀತದಲ್ಲಿ ಆಸಕ್ತಿ ಇದ್ದರೆ ಹೇಳಿಕೊಡುವುದಾಗಿಯೂ ಹೇಳಿದ್ದ. ಇದನ್ನು ನಂಬಿದ ಆಕೆ ಪ್ರತಿನಿತ್ಯ ಬೆಳಗ್ಗೆ 11.30ರಿಂದ ಮಧ್ಯಾಹ್ನ 3ರವರೆಗೂ ಸಂಗೀತ ಕಲಿಯಲು ಈತನ ಮನೆಗೆ ಬರುತ್ತಿದ್ದರು. ಕೆಲ ತಿಂಗಳ ಬಳಿಕ ಆಕೆಯೊಂದಿಗೆ ಸಲುಗೆಯಿಂದ ವರ್ತಿಸಿದ್ದಾನೆ. ಇದಕ್ಕೆ ಆಕ್ಷೇಪಿಸಿದಾಗ ಸ್ನೇಹದಲ್ಲಿ ಇದು ಸಾಮಾನ್ಯ.
ನನಗೆ ಸಹಕಾರ ನೀಡದಿದ್ದರೆ ನಿನ್ನ ವಿರುದ್ಧ ಅಪಪ್ರಚಾರ ಮಾಡುವುದಾಗಿ ಬೆದರಿಸಿದ್ದಾನೆ. ಬಳಿಕ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ, ಪೋಷಕರಿಗೆ ತಿಳಿಸುವುದಾಗಿ ಹೆದರಿಸಿ, ಮನೆಗೆ ಕರೆಸಿಕೊಂಡು ಪದೇ ಪದೇ ಕೃತ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿರುವುದಾಗಿ ಪೊಲೀಸರು ಹೇಳಿದರು.
ಈ ಮಧ್ಯೆ ಸಂತ್ರಸ್ತೆಗೆ ಬೇರೆ ಯುವಕನ ಜತೆ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವಾಗಿತ್ತು. ಈ ಮಾಹಿತಿ ತಿಳಿದ ಆರೋಪಿ, ನೀನು ಬೇರೆಯವರ ಜತೆ ಮದುವೆಯಾದರೂ ನನ್ನ ಜತೆ ಲೈಂಗಿಕ ಕ್ರಿಯೆಗೆ ಸಹಕಾರ ನೀಡಬೇಕು. ಇಲ್ಲದಿದ್ದರೆ ನಮ್ಮಿಬ್ಬರ ಸಂಬಂಧದ ವಿಚಾರವನ್ನು ಭಾವಿ ಪತಿ ಹಾಗೂ ಆತನ ಪೋಷಕರಿಗೆ ಹೇಳುವುದಾಗಿ ಹೆದರಿಸಿದ್ದಾನೆ.
ಕೆಲ ದಿನಗಳ ಬಳಿಕ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಈ ವಿಚಾರ ತಿಳಿದ ಆರೋಪಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾನೆ. ಬಳಿಕ ಸಂತ್ರಸ್ತೆ ಈತನಿಂದ ದೂರವಾಗಿದ್ದರು. ಇದಕ್ಕೆ ಆಕ್ರೋಶಗೊಂಡ ಆರೋಪಿ ಸಂತ್ರಸ್ತೆ ಜತೆ ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ, ಆಕೆಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ, ಆಡಿಯೋ ಹಾಗೂ ಗರ್ಭಪಾತ ಮಾಡಿಸಿರುವ ಮಾಹಿತಿ ನೀಡಿದ್ದ.
ಹೀಗಾಗಿ ಮದುವೆ ಮುರಿದು ಬಿದ್ದಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ಹೇಳಿದರು.ಈ ಸಂಬಂಧ ಆರೋಪಿಯ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಮಹದೇವ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.