ಬುದ್ದಿಮಾಂಧ್ಯ ಮಗಳ ಮೇಲೆಯೇ ಅತ್ಯಾಚಾರ: ತಂದೆಗೆ 10 ವರ್ಷ ಶಿಕ್ಷೆ
Team Udayavani, Apr 29, 2017, 11:26 AM IST
ಬೆಂಗಳೂರು: ಬುದ್ದಿಮಾಂಧ್ಯ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರವೆಸಗಿದ ತಂದೆಗೆ ಪೊಕೊÕà ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಶ್ರೀರಾಮಪುರ ನಿವಾಸಿ ಷಣ್ಮುಗ (38) ಶಿಕ್ಷೆಗೊಳ್ಳಪಟ್ಟವ. ಮೂರು ವರ್ಷಗಳ ಹಿಂದೆ ಅಜ್ಜಿ ಮನೆಯಲ್ಲಿದ್ದ ಬುದ್ದಿಮಾಂಧ್ಯ ಮಗಳನ್ನು ತನ್ನ ಮನೆಗೆ ಕರೆದೊಯ್ದ ಷಣ್ಮುಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಇದನ್ನು ಕಂಡ ಅಜ್ಜಿ ಕುಟುಂಬಸ್ಥರ ಮೂಲಕ ಶ್ರೀರಾಮಪುರ ಠಾಣೆಗೆ ದೂರು ಕೊಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಕಟಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಕೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಅವರು ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದ್ದಾರೆ. ಜತೆಗೆ ಸಂತ್ರಸ್ತೆಗೆ ಸರ್ಕಾರ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಸಂತ್ರಸ್ತೆಯ ಪರ ಸರ್ಕಾರಿ ಅಭಿಯೋಜಕ ಹಿರೇಮನಿ ವಾದ ಮಂಡಿಸಿದ್ದರು.
ಘಟನೆ ಏನು?: ಷಣ್ಮುಗ ಮತ್ತು ಪತ್ನಿ ಕೂಲಿ ಕಾರ್ಮಿಕರು. ಬುದ್ದಿಮಾಂಧ್ಯ ಮಗಳನ್ನು ನಿತ್ಯ ಅಜ್ಜಿಯ ಮನೆಗೆ ಬಿಟ್ಟು ಹೋಗುತ್ತಿದ್ದರು. ಸಂಜೆವರೆಗೆ ಅಜ್ಜಿ ಮನೆಯಲ್ಲಿರುತ್ತಿದ್ದ ಬಾಲಕಿಯನ್ನು ಬಳಿಕ ತಾಯಿ ಮನೆಗೆ ಕರೆತರುತ್ತಿದ್ದರು. ಈ ನಡುವೆ 2014 ಜೂನ್ 21ರಂದು ಷಣ್ಮುಗ ಅಜ್ಜಿ ಮನೆಯಲ್ಲಿದ್ದ ಮಗಳನ್ನು ಯಾರಿಗೂ ಹೇಳದೆ ಮನೆಗೆ ಕರೆ ತಂದಿದ್ದ. ಇತ್ತ ಮೊಮ್ಮಗಳು ಏಕಾಏಕಿ ನಾಪ್ತತೆಯಾಗಿದ್ದರಿಂದ ಗಾಬರಿಗೊಂಡ ಅಜ್ಜಿ ಕೂಡಲೇ ಮಗಳ ಮನೆಗೆ ಬಂದಿದ್ದಾರೆ.
ಯಾರು ಬಾಗಿಲು ತೆರೆಯದ್ದರಿಂದ ಕಿಟಕಿ ಇಣಕಿದಾಗ ಅಪ ರಾಧಿ ಷಣ್ಮುಗ ತನ್ನ ಮಗಳನ್ನು ಲೈಂಗಿಕವಾಗಿ ಬಳಸಿ ಕೊಳ್ಳು ತ್ತಿರುವುದನ್ನು ಕಂಡು ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬoಧ ಸಂತ್ರಸ್ತೆಯ ತಾಯಿ ಶ್ರೀರಾಮಪುರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.