ಸಂತೆಯಲ್ಲಿ ಪಾಕ ಪ್ರಿಯರಿಗೆ ರಸದೌತಣ
Team Udayavani, Nov 25, 2017, 10:33 AM IST
ಬೆಂಗಳೂರು: ಆಹಾರ ಪ್ರಿಯರಿಗೆ ಒಂದೇ ಸೂರಿನಡಿಯಲ್ಲಿ ಸಾವಿರಾರು ಬಗೆಯ ತಿಂಡಿ-ತಿನಿಸು ಉಣಬಡಿಸುವ “ಸೂಪರ್ ರುಚೀಸ್’ ಅಂತಾರಾಷ್ಟ್ರೀಯ ಬೃಹತ್ ಸಸ್ಯಹಾರಿ ಆಹಾರ ಸಂತೆಗೆ ಶುಕ್ರವಾರ ಚಾಲನೆ ಸಿಕ್ಕಿದೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ರೆಡ್ ರಿಬ್ಬನ್ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ಬೃಹತ್ ಸಸ್ಯಹಾರಿ ಆಹಾರ ಸಂತೆ ನ.26ರವರೆಗೆ ನಡೆಯಲಿದೆ. ಸಂತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ತಿನಿಸುಗಳು ಸೇರಿದಂತೆ, ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ತಿಂಡಿ-ತಿನಿಸುಗಳು ಆಹಾರ ಪ್ರಿಯರಿಗೆ ಮತ್ತಷ್ಟು ರುಚಿ ನೀಡಲಿವೆ.
ಆಹಾರ ಸಂತೆಯಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದು, ಸಾವಿರಕ್ಕೂ ಹೆಚ್ಚು ಬಗೆಯ ತಿಂಡಿ-ತಿನಿಸುಗಳು ಸಾರ್ವಜನಿಕರಿಗೆ ದೊರೆಯಲಿವೆ. ಗ್ರಾಮೀಣ, ಸಾಂಪ್ರದಾಯಿಕ, ಪಾಶ್ಚಾತ್ಯ, ಸಿರಿಧ್ಯಾನದಿಂದ ತಯಾರಿಸಿದ, ಅಕ್ಕಿ, ರಾಗಿ, ಜೋಳದ ರೊಟ್ಟಿ, ಪಿಜ್ಜಾ, ಐಸ್‌ಕ್ರೀಂ ಹೀಗೆ ಹಲವು ಬಗೆಯ ತಿನಿಸುಗಳನ್ನು ಸಂತೆಯ ವೈಶಿಷ್ಟತೆಯನ್ನು ಹೆಚ್ಚಿಸಿದ್ದು, ರಾಜಧಾನಿಯ ಕೆಲವೊಂದು ಹೆಸರಾಂತ ಹೋಟೆಲ್‌ಗಳು ಸಹ ಸಂತೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.
ಸಂತೆಯಲ್ಲಿ ಕರ್ನಾಟಕ, ಗುಜರಾತ್, ಆಂಧ್ರ, ತೆಲಂಗಾಣ, ದೆಹಲಿ ಸೇರಿದಂತೆ ನಾನಾ ರಾಜ್ಯಗಳಿಂದ ಹಾಗೂ ವಿಯೆಟ್ನಾಂ ದೇಶದಿಂದಲೂ ತಂಡವೊಂದು ಮಳಿಗೆ ತೆರೆದಿದೆ. ಸಂತೆಗೆ ಭೇಟಿ ನೀಡಿದರೆ ವಿಶಿಷ್ಠ ಬಗೆಯ ಭಕ್ಷ್ಯಗಳನ್ನು ಸವಿಯಬಹುದಾಗಿದೆ.
ವಿಯೆಟ್ನಾಂ ತಂಡದ ಸುಮಾರು 20 ಬಗೆಯ ಕುರುಕಲು ತಿಂಡಿಗಳು(ಜಂಕ್‌ಫುಡ್) ವಿಶೇಷವಾಗಿದ್ದು, ಸಂತೆಯಲ್ಲಿ ತೆರೆದಿರುವ ವಿವಿಧ ಮಳಿಗೆಗಳಲ್ಲಿ 30ಕ್ಕೂ ಹೆಚ್ಚು ಬಗೆಯ ಕಾಫಿ, ಹತ್ತಾರು ಬಗೆಯ ಐಸ್‌ಕ್ರೀಂ, ಚಾಕೋಲೆಟ್, ಪಾನಿಪೂರಿ, ಹೋಳಿಗೆ, ಮಡಿಕೆ ರೈಸ್ ಬಿರಿಯಾನಿ, ಮಲೆನಾಡಿನ ಕಶಾಯ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹೀಗೆ ಹತ್ತು ಹಲವು ಬಗೆಯ ತಿನಿಸುಗಳು ನಾಲಿಗೆಗೆ ರುಚಿ ನೀಡುತ್ತವೆ.
ಜ್ಯೂಸ್ ಮೇಲೆ ನಿಮ್ಮ ಸೆಲ್ಫಿ!: ಬೆಂಗಳೂರಿನ ಕೋರಮಂಗಲದ ಸೆಲ್ಫಿ ಕೆಫೆ ಮಳಿಗೆಯು ಸಂತೆಗೆ ಬರುವ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಮಳಿಗೆಯ ಮುಂದಿರುವ ಕ್ಯಾಮೆರಾ ಮುಂದೆ ನಿಂತು ಗ್ರಾಹಕರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಕೇವಲ 30 ಸೆಕೆಂಡ್‌ನಲ್ಲಿ ತಾವು ಬಯಸುವ ಜ್ಯೂಸ್ ಮೇಲೆ ಆ ಫೋಟೋ ಪದರ ಬರಲಿವೆ. ಇದು ಹಾಂಕಾಂಗ್ ಮೂಲದ ತಂತ್ರಜ್ಞಾನವಾಗಿದ್ದು, ಹಣ್ಣುಗಳಿಂದ ತಯಾರಿಸಿದ ಕ್ರೀಮ್‌ನಿಂದ ಈ ರೀತಿಯ ಫೋಟೋ ಮುದ್ರಣವಾಗಲಿದ್ದು, ಜತೆಗೆ ಆ ಪದರ ತಿನ್ನಲು ಸಹ ಯೋಗ್ಯವಾಗಿದೆ ಎಂದು ಮಳಿಗೆದಾರರು ತಿಳಿಸಿದ್ದಾರೆ.
50 ರೂ. ಪ್ರವೇಶ ಶುಲ್ಕ ಸಾರ್ವಜನಿಕರ ಬೇಸರ: ಆಹಾರ ಸಂತೆಯಲ್ಲಿ ಭಾಗಿಯಾಗಲು ಪ್ರತಿ ವ್ಯಕ್ತಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ಸಂತೆಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸಂತೆ ಪ್ರವೇಶಕ್ಕೆ ಪ್ರತಿ ವ್ಯಕ್ತಿಗೆ 50 ರೂ. ನಿಗದಿಪಡಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.