ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಶಿಫಾರಸು
Team Udayavani, Feb 1, 2018, 12:55 PM IST
ದೇವನಹಳ್ಳಿ: ಮದ್ಯಪಾನ ರಾಜ್ಯದಲ್ಲಿ ನಿಷೇಧ ಮಾಡಲು ಸರ್ಕಾರಕ್ಕೆ ಮಾಹಿತಿಯನ್ನು ವಿವಿಧ ಕಡೆಗಳಲ್ಲಿ ಸಂಗ್ರಹಿಸಿ ಶಿಫಾರಸು ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ವಿ.ಪಾತರಾಜು ತಿಳಿಸಿದರು.
ನಗರದ ಗಿರಿಯಮ್ಮ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಆಜ್ಞೆàಯ ಜ್ಯೋತಿ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯ ಕ್ರಮ ಮತ್ತು ವಿಚಾರ ಸಂಕಿರಣ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
5 ಸಾವಿರ ಕೋಟಿ ರೂ. ವಾಹಿವಾಟು ನಷ್ಟ: ಬಿಹಾರ ರಾಜ್ಯದಲ್ಲಿ ಮೊದಲ ಬಾರಿಗೆ ಪಾನಮುಕ್ತ ರಾಜ್ಯವನ್ನಾಗಿ ಮಾಡಲಾಗಿದೆ. ನಮ್ಮ ತಂಡ ಬಿಹಾರ ರಾಜ್ಯಕ್ಕೆ ಹೋಗಿ ಯಾವರೀತಿ ಪಾನಮುಕ್ತ ರಾಜ್ಯವನ್ನಾಗಿ ಮಾಡಿ ಅದಕ್ಕೆ ಮಾಡಿರುವ ಕಾನೂನು ತಿದ್ದುಪಡಿ ಅಧ್ಯಯನ ಮಾಡಿದ್ದೇವೆ. ಇದರ ಸಂಪೂರ್ಣ ವಿವರವನ್ನು ವರದಿಯ ಮೂಲಕ ತಯಾರಿಸಿದ್ದು, ರಾಜ್ಯ ಸರ್ಕಾರಕ್ಕೆ ಆ ವರದಿ ಸಲ್ಲಿಸುತ್ತಿದ್ದೇವೆ. ಬಿಹಾರದಲ್ಲಿ 12 ಕೋಟಿ ಜನಸಂಖ್ಯೆ ಇದ್ದು, ಮದ್ಯಪಾನದಿಂದ 5 ಸಾವಿರ ಕೋಟಿ ರೂ. ವಹಿವಾಟು ಸರ್ಕಾರಕ್ಕೆ
ಬರುತ್ತಿತ್ತು. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮಹಿಳೆಯರು ಮದ್ಯಪಾನ ನಿಷೇಧಿಸಲು ಆಗ್ರಹಿಸಿದ್ದರು. ಸರ್ಕಾರ ಬರುತ್ತಿದ್ದಂತೆ ಮದ್ಯಪಾನ ನಿಷೇಧ ಮಾಡಿದರು. ಬಿಹಾರ ವಿಧಾನಸಭೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ಒಮ್ಮತದ ನಿರ್ಧಾರ ಕೈಗೊಳ್ಳುವ ಮೂಲಕ ಈ ವಿಧೇಯಕಕ್ಕೆ ಅಂಗೀಕಾರ ಮಾಡಿದರು ಎಂದು ವಿವರಿಸಿದರು.
ಮದ್ಯಪಾನದಿಂದ ಕುಟುಂಬಗಳು ಬೀದಿಪಾಲು: ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲು ಜನಜಾಗೃತಿ ಮಾಡಲಾಗುತ್ತಿದೆ.
ಶೇ.70ರಷ್ಟು ಯುವಕರು ಆರೋಗ್ಯ ಕೆಡಿಸಿ ಕೊಂಡು ಮದ್ಯ ಮತ್ತು ಮಾದಕ ವಸ್ತುಗಳ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಲವಾರು ಕುಟುಂಬಗಳು ಮದ್ಯಪಾನದಿಂದ ಬೀದಿಪಾ ಲಾಗಿವೆ. ಸಾವಿರಾರು ಜನ ಇದರಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪುಗಳು, ಶಾಲಾ-ವಿದ್ಯಾರ್ಥಿಗಳಿಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾ ಮಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಜನಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾದಕ ವಸ್ತು ದೇಹ, ಆತ್ಮ ಸುಡುತ್ತದೆ: ಮಹಾತ್ಮ ಗಾಂಧಿಜೀ ಹೇಳಿ ದಂತೆ ಮಾದಕ ವಸ್ತುಗಳಿಂದ ನಮ್ಮ ದೇಹ ಮತ್ತು ಆತ್ಮವನ್ನು ಸುಡುತ್ತದೆ. ಈ ಅಂಶವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟಕ್ಕೆ ಉಜ್ವಲ ಭವಿಷ್ಯವನ್ನೇ ಕಳೆದುಕೊಳ್ಳಬೇಕಾಗು ತ್ತದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಮದ್ಯಪಾನ ಮತ್ತು ಧೂಮಪಾನ ನಿಷೇಧಿಸಲಿ: ಕರ್ನಾಟಕ ಜಾನಪದ ಆಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಾನೂನು ಕೆಂಪಯ್ಯ, ದೇಶದಲ್ಲಿ ಸರ್ಕಾರ ಕಡ್ಡಾಯವಾಗಿ ಮದ್ಯಪಾನ ಮತ್ತು ಧೂಮಪಾನ ನಿಷೇಧ ಮಾಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದರೆ ಇವುಗಳಿಂದ ದೂರವಿದ್ದು, ಆರೋಗ್ಯಕ್ಕೆ ಒತ್ತು ನೀಡಬೇಕು.
ಸರ್ಕಾರಕ್ಕೆ ಪ್ರತಿ ವರ್ಷ ಇದರಿಂದ ಹೆಚ್ಚು ಲಾಭಾಂಶ ಬರುತ್ತಿರುವುದರಿಂದ ಸರ್ಕಾರಗಳು ನಿಷೇಧಿಸುವುದಲ್ಲಿ ಹಿಂದೇಟು ಹಾಕುತ್ತಾರೆ. ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆ ಕುಟುಂಬಕ್ಕೆ ಆಧಾರವಾದ ವ್ಯಕ್ತಿಯನ್ನು ಕಳೆದುಕೊಂಡ ಮೇಲೆ ಕುಟುಂಬ ಬೀದಿಪಾಲಾಗುತ್ತದೆ. ಸರ್ಕಾರ ಕುಡಿದು ವಾಹನ ಸವಾರರಿಗೆ ದಂಡ ವಿಧಿಸುತ್ತದೆ. ಅದರ ಬದಲು ಮದ್ಯಪಾನ ನಿಷೇಧ ಮಾಡಿದಾಗ ಯಾರೂ ಕುಡಿದು ವಾಹನ ಚಲಾಯಿಸುವುದಿಲ್ಲ ಎಂದು ಹೇಳಿದರು.
ಈ ವೇಳೆ ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಆಜ್ಞೆàಯ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಮನು, ಸದಸ್ಯ ಶಶಿಕುಮಾರ್, ಶ್ರೀನಿವಾಸ್, ಮಾರುತಿ ವಿದ್ಯಾಮಂದಿರ ಶಿಕ್ಷಕ ಶ್ರೀನಿವಾಸ್ ನಾಯಕ್, ಶಿಕ್ಷಕರಾದ ಆಶಾ, ಸುಮಲತಾ, ಪರಶುರಾಮ್ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.