ಮೇ ತಿಂಗಳಲ್ಲಿ ದಶಕದ ದಾಖಲೆ ಮಳೆ
Team Udayavani, May 28, 2017, 12:05 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ದಶಕದಲ್ಲೇ ಮೇ ತಿಂಗಳಲ್ಲಿ ಸುರಿದ ದಾಖಲೆ ಮಳೆ ಎನಿಸಿದೆ. ಬಂಗಾಳ ಕೊಲ್ಲಿಯ ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ವಾಯುಭಾರ ಕುಸಿತದಿಂದ ಮೇಲ್ಮೆ„ಸುಳಿಗಾಳಿ ಸೃಷ್ಟಿಯಾಗಿದ್ದು, ಪರಿಣಾಮವಾಗಿ ಕರ್ನಾಕಟದ ದಕ್ಷಿಣ ಒಳನಾಡಿನ ಹಲವಾರು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಅದರಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಮಳೆಯಾಗಿದ್ದು, ಯಲಹಂಕ, ಆನೇಕಲ್, ನೆಲಮಂಗಲ, ಹೊಸಕೋಟೆ, ಬೆಂಗಳೂರು ನಗರ, ವಿಮಾನ ನಿಲ್ದಾಣ, ಎಚ್‌ಎಎಲ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಳೆಯಾಗಿದೆ.
2012ರಲ್ಲಿ ಸುರಿದ 49.1 ಮಿಲಿ ಮೀಟರ್ (5 ಸೆಂಟಿ ಮೀಟರ್) ಮಳೆಯು ಹತ್ತು ವರ್ಷಗಳಲ್ಲಿನ ಅತಿಹೆಚ್ಚು ಮಳೆಯಾಗಿತ್ತು. ಆದರೆ, ಶುಕ್ರವಾರ ರಾತ್ರಿ ಯಲಹಂಕ ಭಾಗದಲ್ಲಿ 11 ಸೆಂಟಿ ಮೀಟರ್ ಮಳೆಯಾಗಿರುವುದು ದಾಖಲೆಯಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ಮೂರು ದಿನಗಳು ಮಳೆ ಮುಂದುವರಿಯಲಿದೆ. ನಗರದಲ್ಲಿ ಮುಂದಿನ ಎರಡು ದಿನಗಳು ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್ ಎಂ. ಮೇತ್ರಿ, “ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಶುಕ್ರವಾರ ರಾತ್ರಿ ಯಲಹಂಕದಲ್ಲಿ 11 ಸೆಂಟಿ ಮೀಟರ್ ಮಳೆಯಾಗಿರುವುದು ದಾಖಲೆ ಎನಿಸಿದೆ. ನಗರದಲ್ಲಿ ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ’ ಎಂದರು.
ಸಾರ್ವಕಾಲಿಕ ದಾಖಲೆ 153.9ಮಿ.ಮೀ!
ಬೆಂಗಳೂರು ನಗರದಲ್ಲಿ 1909ರ ಮೇ 6ರಂದು ಸುರಿದ 153.9 ಮಿ.ಮೀ ಮಳೆಯು ನಗರದಲ್ಲಿ ಮೇ ತಿಂಗಳಲ್ಲಿ ಸುರಿದ ಸರ್ವಕಾಲಿಕ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ದಾಖಲಾದ ಮಳೆ ವಿವರ
ವರ್ಷ ಮಳೆಯ ಪ್ರಮಾಣ (ಮಿಲಿ ಮೀಟರ್‌ಗಳಲ್ಲಿ)
2016 46.6
2015 66.4
2014 19.3
2013 36.2
2012 49.1
2011 44.7
2010 26.5
2009 50.2
2008 18.9
2007 39.2
ನಗರದಲ್ಲಿ ಶನಿವಾರ ಸುರಿದ ಮಳೆಯ ಪ್ರಮಾಣ
ಸ್ಥಳ ಪ್ರಮಾಣ(ಮಿಲಿ ಮೀಟರ್‌ಗಳಲ್ಲಿ)
ಯಲಹಂಕ 84
ಆರ್.ಆರ್.ನಗರ 53
ಕೆಂಗೇರಿ 70
ಲಾಲ್‌ಬಾಗ್ 54
ಕೆ.ಆರ್ ಪುರಂ 76
ಉತ್ತರಹಳ್ಳಿ 65
ರಾಜಾಜಿನಗರ 54
(ರಾತ್ರಿ 9ರವಗೆಗಿನ ಮಾಹಿತಿ)
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.