ತಾಪಮಾನದಲ್ಲಿ ದಾಖಲೆ ಬರೆದ ಗಾರ್ಡನ್ ಸಿಟಿ
Team Udayavani, Mar 27, 2017, 11:59 AM IST
ಬೆಂಗಳೂರು: ಕೂಲ್ ಸಿಟಿ, ಗಾರ್ಡನ್ ಸಿಟಿ ಎಂದು ತನ್ನ ಆಹ್ಲಾದಕರ ವಾತಾವರಣಕ್ಕೆ ಖ್ಯಾತಿ ಗಳಿಸಿದ್ದ ಬೆಂಗಳೂರು ಕಾದ ಕಾವಲಿಯಂತಾಗಿದೆ. ರಾಜಧಾನಿ ಜತೆಗೆ ಹಾಸನವೂ ತಾಪಮಾನದಲ್ಲಿ ಮುಂದಿದೆ. ಹೌದು, ಕಳೆದ ಶನಿವಾರ ಈ ಎರಡೂ ಕಡೆಗಳಲ್ಲಿ ಕ್ರಮವಾಗಿ 37.2 ಡಿಗ್ರಿ ಸೆಲ್ಸಿಯಸ್ ಹಾಗೂ 36.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಕಳೆದೆರಡು ದಶಕಗಳಲ್ಲಿ ಮಾರ್ಚ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ.
ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಮತ್ತು ಹಾಸನದಲ್ಲಿ 4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. 1996ರ ಮಾರ್ಚ್ 29 ಹಾಗೂ 30ರಂದು ಬೆಂಗಳೂರಿನಲ್ಲಿ 37.3 ಡಿಗ್ರಿ ಸೆಲ್ಸಿಯಸ್ ಹಾಗೂ ಹಾಸನದಲ್ಲಿ 37.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಇದು ಮಾರ್ಚ್ ತಿಂಗಳ ಸಾರ್ವಕಾಲಿಕ ದಾಖಲೆಯಾಗಿದೆ. ತಿಂಗಳಾಂತ್ಯಕ್ಕೆ ಇನ್ನೂ ಐದು ದಿನಗಳು ಬಾಕಿ ಇದ್ದು, ಬಿಸಿಲು ಕೂಡ ಏರುಗತಿಯಲ್ಲಿ ಸಾಗಿದ್ದರಿಂದ ಈ ದಾಖಲೆ ಸರಿಗಟ್ಟುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಹನಗಳದಟ್ಟಣೆ, ಕಾರ್ಖಾನೆಗಳು ಉಗುಳುವ ಹೊಗೆ, ಕಾಂಕ್ರೀಟೀಕರಣ ಮತ್ತಿತರ ಕಾರಣಗಳು ಹಾಗೂ ಮಳೆ ಬಿದ್ದ ಅವಧಿಯಲ್ಲಿ ಸಾಕಷ್ಟು ಅಂತರ ಇದೆಲ್ಲದರಿಂದ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದ ಉಷ್ಣಾಂಶ ಕಂಡುಬರುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಮುದ್ರದ ಕಡೆಯಿಂದ ಗಾಳಿ ಬೀಸಬೇಕಿತ್ತು. ಆದರೆ, ಗಾಳಿ ಬರುತ್ತಿಲ್ಲ. ಬಂದರೂ ನಗರದ ಒಳಗೆ ಬರಲು ಕಟ್ಟಡಗಳು, ಹೊಗೆ ಅಡ್ಡವಿದೆ.
ಜತೆಗೆ ಇದು ಹೇಳಿ ಕೇಳಿ ಬೇಸಿಗೆ. ಹೀಗಾಗಿ ಬಿಸಿಲಿನ ಧಗೆ ಹೆಚ್ಚುತ್ತಿದೆ. ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚು-ಕಡಿಮೆ ಇದ್ದರೆ ಅಷ್ಟೇನೂ ಸಮಸ್ಯೆ ಇಲ್ಲ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉಷ್ಣಾಂಶ ವಿಪರೀತಕ್ಕೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಎಂ.ಮೆಟ್ರಿ ಹೇಳುತ್ತಾರೆ.
ಉಷ್ಣಾಂಶ ಹೆಚ್ಚು ದಾಖಲಾಗುವುದಕ್ಕೆ ಬರೀ ಬಿಸಿಲು ಮಾತ್ರ ಪರಿಗಣನೆಗೆ ಬರುವುದಿಲ್ಲ. ಯಾವ ಭಾಗದಲ್ಲಿ ಮೋಡಗಳಿವೆ? ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ? ವಾತಾವರಣದಲ್ಲಿ ತೇವಾಂಶ ಇಲ್ಲದಿರುವುದು ಕೂಡ ಮುಖ್ಯವಾಗುತ್ತದೆ. ಸಮುದ್ರದ ಕಡೆಯಿಂದ ಗಾಳಿ ಬೀಸಿದರೆ, ವಾತಾವರಣದಲ್ಲಿ ತೇವಾಂಶ ಇರುತ್ತದೆ. ಆದರೆ, ಆ ಸೂಚನೆಗಳು ಕಾಣಿಸುತ್ತಿಲ್ಲ ಎಂದು ಹವಾಮಾನ ಇಲಾಖೆಯ ನಿವೃತ್ತ ನಿರ್ದೇಶಕ ಪುಟ್ಟಣ್ಣ ಅಭಿಪ್ರಾಯ ಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.