ಪಾತಾಳಕ್ಕಿಳಿದ ಬೆಂಗಳೂರಿನ ಫಲಿತಾಂಶ
Team Udayavani, May 1, 2019, 3:15 AM IST
ಬೆಂಗಳೂರು: ಶಿಕ್ಷಣ ವ್ಯವಸ್ಥೆಯ ಅಡಿಪಾಯ ಹಾಗೂ ನೀತಿ ನಿಯಮಗಳನ್ನು ರೂಪಿಸುವ ರಾಜಧಾನಿ ಬೆಂಗಳೂರು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪಾತಾಳಕ್ಕೆ ಇಳಿದಿದೆ.
ಬೆಂಗಳೂರಿಗೆ ತಾಕಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ 2018ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 14ನೇ ಸ್ಥಾನದಲ್ಲಿದ್ದಿತ್ತು. ಈ ಬಾರಿ ಅಲ್ಲಿನ ವಿದ್ಯಾರ್ಥಿಗಳ ವಿಶೇಷ ಸಾಧನೆ ಎಂಬಂತೆ ಮೂರನೇ ಸ್ಥಾನಕ್ಕೆ ಜಿಲ್ಲೆಯನ್ನು ಕೊಂಡೊಯ್ದಿದ್ದಾರೆ.
2018ರಲ್ಲಿ 27ನೇ ಸ್ಥಾನದಲ್ಲಿದ್ದ ಬೆಂಗಳೂರು ದಕ್ಷಿಣ ಜಿಲ್ಲೆ ಈ ಬಾರಿ 32ನೇ ನೇ ಸ್ಥಾನಕ್ಕೆ ಕುಸಿದಿದೆ. 22ರಲ್ಲಿ ಬೆಂಗಳೂರು ಉತ್ತರ ಜಿಲ್ಲೆ 26ನೇ ಸ್ಥಾನಕ್ಕೆ ಇಳಿಸಿದೆ. ಬೆಂಗಳೂರಿನ ಸುತ್ತಮುತ್ತಲಿರುವ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮೊದಲಾದ ಜಿಲ್ಲೆಗಳ ಮಕ್ಕಳು ಗಣನೀಯ ಸಾಧನೆ ಮಾಡಿ ತಮ್ಮ ಜಿಲ್ಲೆಯನ್ನು ಮೇಲೆತ್ತಿದ್ದಾರೆ.
ಉತ್ತಮ ವ್ಯವಸ್ಥೆಯೊಂದಿಗೆ ಇರುವ ಬೆಂಗಳೂರಿನ ಎರಡು ಶೈಕ್ಷಣಿಕ ಜಿಲ್ಲೆಯ ಶಾಲೆಗಳು ಮಾತ್ರ ಫಲಿತಾಂಶದಲ್ಲಿ ಸುಧಾರಣೆಯ ಕಾಣುವ ಬದಲು ಹಿಮ್ಮುಖ ಚಲನೆ ಆರಂಭಿಸಿವೆ. ಶಿಕ್ಷಣ ಇಲಾಖೆಯ ಕಚೇರಿ, ಸರ್ಕಾರಿ ಯಂತ್ರ, ಡಯಟ್, ಶಿಕ್ಷಣಾಧಿಕಾರಿಗಳ ಕಚೇರಿ, ಬಿಇಒ ಕಚೇರಿ, ಕ್ಷೇತ್ರ ಸಂಪನ್ಮೂಲಾಧಿಕಾರಿಗಳು ಹೀಗೆ ಎಲ್ಲರೀತಿಯ ವ್ಯವಸ್ಥೆ ಇರುವ ರಾಜಧಾನಿ ಬೆಂಗಳೂರು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಲ್ಲರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಗೆ 2018ರಲ್ಲಿ ಶೇ.72.03ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.68.83ಕ್ಕೆ ಇಳಿದಿದೆ. ಅಂದರೆ, ರಾಜಧಾನಿಯ ಹೃದಯಭಾಗದ ಜಿಲ್ಲೆಯ ಫಲಿತಾಂಶ ಒಂದು ವರ್ಷದಲ್ಲಿ ಶೇ.3.2ರಷ್ಟು ಕುಸಿದೆ. ಹಾಗೆಯೇ ಬೆಂಗಳೂರು ಉತ್ತರ ಜಿಲ್ಲೆ 2018ರಲ್ಲಿ ಶೇ.77.37ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ ಶೇ.76.21ರಷ್ಟಾಗಿದ್ದು, ಶೇ.1.16ರಷ್ಟು ಇಳಿಕೆಯಾಗಿದೆ.
ವಿದ್ಯಾರ್ಥಿಗಳ ಫಲಿತಾಂಶ ಸರಾಸರಿ ಮಾತ್ರವಲ್ಲ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಆಧಾರದಲ್ಲಿ ಗುಣಮಟ್ಟದ ಸ್ಥಾನ ಮಾನದಲ್ಲೂ ಬೆಂಗಳೂರು ದಕ್ಷಿಣ ಜಿಲ್ಲೆ 32ನೇ ಸ್ಥಾನಕ್ಕೆ ಇಳಿದಿದೆ. ಗುಣಮಟ್ಟದ ವಿಭಾಗದಲ್ಲಿ ಕಳೆದ ವರ್ಷ 27ನೇ ಸ್ಥಾನದಲ್ಲಿದ್ದ ಈ ಜಿಲ್ಲೆ ಈ ವರ್ಷ 32ಕ್ಕೆ ಇಳಿದಿದೆ. ಇನ್ನು ಬೆಂಗಳೂರು ಉತ್ತರ ಜಿಲ್ಲೆ ಗುಣಮಟ್ಟದಲ್ಲಿ ಒಂದು ಸ್ಥಾನ ಮೇಲೆರಿದೆ. 2018ರಲ್ಲಿ 22ರಲ್ಲಿದ್ದು, ಈಗ ಅದು 21ಕ್ಕೆ ಏರಿದೆ.
ರಾಜಧಾನಿಯ ಬಹುತೇಕ ಖಾಸಗಿ ಶಾಲೆಗಳು ಸಿಬಿಎಸ್‌ಇ ಅಥವಾ ಐಸಿಎಸ್‌ಇ ಪಠ್ಯಕ್ರಮ ಹೊಂದಿದ್ದರು, ಕೆಲವೊಂದು ಶಾಲೆಗಳು ರಾಜ್ಯ ಪಠ್ಯಕ್ರಮ ಹೊಂದಿವೆ. ಅಲ್ಲದೆ ಬಹುತೇಕ ಅನುದಾನಿತ ಶಾಲೆಗಳು ಮತ್ತು ಎಲ್ಲ ಸರ್ಕಾರಿ ಶಾಲೆಗಳು ರಾಜ್ಯ ಪಠ್ಯಕ್ರಮವನ್ನು ಹೊಂದಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ತಂತ್ರಜ್ಞಾನವೂ ಅತಿ ಸುಲಭ ಮತ್ತು ವೇಗವಾಗಿ ಇಲ್ಲಿನ ವಿದ್ಯಾರ್ಥಿಗಳ ಕೈಗೆ ಸಿಗುತ್ತದೆ. ಅಲ್ಲದೆ, ಸರ್ಕಾರಿ ಶಾಲಾ ಶಿಕ್ಷಕರಿಗೆ ನಗರ ಪ್ರದೇಶದಲ್ಲಿ ವಿಶೇಷ ಭತ್ಯೆ ಕೂಡ ನೀಡಲಾಗುತ್ತದೆ. ವರ್ಗಾವಣೆ ಸಂದರ್ಭದಲ್ಲೂ ನಗರ ಪ್ರದೇಶವನ್ನೇ ಆಯ್ದುಕೊಳ್ಳುತ್ತಾರೆ.
ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಸುಧಾರಣೆ ಕಾಣಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.