ತಗ್ಗಿದ ಎಚ್‌ಐವಿ: ಕರ್ನಾಟಕವೇ ಮಾದರಿ
Team Udayavani, Jul 21, 2018, 7:00 AM IST
ವಿಶ್ವಸಂಸ್ಥೆ: ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಎಚ್‌ಐವಿ ಪೀಡಿತರು, ಎಚ್‌ಐವಿ ಸೋಂಕಿ ಗೊಳಗಾದವರ ಸಂಖ್ಯೆಯಲ್ಲಿ
ಗಣನೀಯ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಏಡ್ಸ್ ನಿಯಂತ್ರಣ ಆಯೋಗ (ಯುಎನ್‌ಎಐಡಿಎಸ್) ವರದಿ ಮಾಡಿದೆ.
ವಿಶೇಷವೆಂದರೆ, ಸೋಂಕು ನಿಯಂತ್ರಣ ವಿಚಾರದಲ್ಲಿ ಭಾರತಕ್ಕೆ ಕರ್ನಾಟಕವೇ ಮಾದರಿ ಎಂದೂ ವರದಿ ಹೇಳಿದೆ.”ಮೈಲ್ಸ್ ಟು ಗೋ ಕ್ಲೋಸಿಂಗ್ ಗ್ಯಾಪ್ಸ್, ಬ್ರೇಕಿಂಗ್ ಬ್ಯಾರಿಯರ್ಸ್, ರೈಟಿಂಗ್ ಇನ್ ಜಸ್ಟಿಸಸ್’ ಎಂಬ ವರದಿಯಲ್ಲಿ, ಭಾರತ ಸೇರಿದಂತೆ ಕಾಂಬೋಡಿಯ, ಮ್ಯಾನ್ಮಾರ್, ಥಾಯ್ಲೆಂಡ್ ವಿಯೆಟ್ನಾಂಗಳಲ್ಲಿ 2010ರಿಂದ 2017ರವರೆಗೆ ಅಲ್ಲಿನ ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜಾರಿಗೊಳಿಸಲಾದ ಯೋಜನೆಗಳು ಫಲವಾಗಿ ಈ ಸೋಂಕು ಗಣನೀಯವಾಗಿ ನಿಯಂತ್ರಣಗೊಂಡಿದೆ ಎನ್ನಲಾಗಿದೆ. ಆದರೆ, ಈ ಸೋಂಕಿನ ಸಂಪೂರ್ಣ ನಿರ್ಮೂಲನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದಿರುವ ವರದಿ, ಪಾಕಿಸ್ತಾನ ಹಾಗೂ μಲಿಪ್ಪೀನ್ಸ್‌ಗಳಲ್ಲಿ ಇದರ ತೀವ್ರತೆ ಹೆಚ್ಚಾಗಿದೆ ಎಂದಿದೆ.
ಮಾದರಿಯಾದ ಕರ್ನಾಟಕ: ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಎಚ್‌ಐವಿ ಸೋಂಕು ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಮಸ್ಯೆ ಯ ನಿವಾರಣೆಗಾಗಿ, ನೈರ್ಮಲಿÂàಕರಣದ ಕಾರ್ಯಾಗಾರಗಳು, ಎಚ್‌ಐವಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಯತ್ನಗಳಂಥ ಕ್ರಮಗಳಿಂದ ಹಾಗೂ “ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್’ನ ಪ್ರಾಯೋಜ ಕತ್ವದಲ್ಲಿ ಜಾರಿಗೊಂಡ ಆವಾಹನೆ ಯೋಜನೆ ಯಡಿ ಕರ್ನಾಟಕದಲ್ಲಿ ಏಡ್ಸ್ ಮಹಾಮಾರಿಯ ಪ್ರಾಬಲ್ಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
18% – ಕಳೆದ ಏಳು ವರ್ಷಗಳ ಅವಧಿಯಲ್ಲಿ ವಿಶ್ವದಲ್ಲಿ ಕಡಿಮೆಯಾದ ಎಚ್‌ಐವಿ ಪೀಡಿತರ ಸಂಖ್ಯೆ
36.9 ದಶಲಕ್ಷ – 2017ರಅಂತ್ಯದ ವೇಳೆಗೆ ವಿಶ್ವದಲ್ಲಿ ಇರುವ ಎಚ್‌ಐವಿ ಪೀಡಿತರ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.