“ಪ್ರತಿಬಿಂಬ’ ಮಾಹಿತಿ ಕೋಶಕ್ಕೆ ಚಾಲನೆ
Team Udayavani, Mar 8, 2017, 11:47 AM IST
ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯ ಚಟುವಟಿಕೆ, ಯೋಜನೆ, ಕಾರ್ಯಕ್ರಮಗಳ ವಿವರ ಮತ್ತು ಆರ್ಥಿಕ ಪ್ರಗತಿಯ ಮಾಹಿತಿ ಜನರ ಮುಂದಿಡುವ ಮುಖ್ಯಮಂತ್ರಿಯವರ ಮಾಹಿತಿ ಕೋಶ “ಪ್ರತಿಬಿಂಬ” ಅನಾವರಣಗೊಂಡಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ಮಂಗಳವಾರ “ಪ್ರತಿಬಿಂಬ’ ಮಾಹಿತಿ ಕೋಶಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಸರ್ಕಾರದ ಗುರಿ ಮತ್ತು ಸಾಧನೆಗಳ ಬಗ್ಗೆ ನಾಡಿನ ಜನತೆಗೆ ಮಾಹಿತಿ ಒದಗಿಸುವ ವೇದಿಕೆಯಾಗಿ ಪ್ರತಿಬಿಂಬ ಮಾಹಿತಿ ಕೋಶ ರೂಪುಗೊಂಡಿದೆ. ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ಸರ್ಕಾರವು ಚುನಾವಣೆ ವೇಳೆ ನೀಡಿದ ಭರವಸೆಗಳಿಗೆ ಉತ್ತರ ಈ ಮಾಹಿತಿ ಕೋಶದಲ್ಲಿದೆ ಎಂದರು.
ಉದಾಹರಣೆಗೆ ಕೃಷಿ ಭಾಗ್ಯ ಯೋಜನೆಯಡಿ ಒಂದು ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ. ವರ್ಷಾಂತ್ಯದಲ್ಲಿ ಇನ್ನೂ 30 ಸಾವಿರ ಕೃಷಿ ಹೊಂಡ ನಿರ್ಮಿಸುವ ಗುರಿಯಿದ್ದು, ಕಾಮಗಾರಿಗಳು ನಾನಾ ಹಂತದಲ್ಲಿವೆ. ಹೀಗೆ ಪ್ರಮುಖ ಇಲಾಖೆಗಳ ಮುಖ್ಯ ಯೋಜನೆಗಳ ಮಾಹಿತಿ, ಆಯಾ ತಿಂಗಳಿನ ಸಾಧನೆ ಬಗ್ಗೆ ಮಾಹಿತಿ ಒದಗಿಸಲಿದೆ ಎಂದು ವಿವರಿಸಿದರು.
ಚುನಾವಣೆ ವೇಳೆ ನೀಡಲಾಗಿದ್ದ 165 ಭರವಸೆಗಳ ಪೈಕಿ ಕಳೆದ 4 ವರ್ಷದಲ್ಲಿ 125ಕ್ಕೂ ಹೆಚ್ಚು ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ರಾಜ್ಯ ಹಾಗೂ ದೇಶದ ಜನರಿಗೆ ಸರ್ಕಾರದ ಸಾಧನೆಯ ಮಾಹಿತಿ ಒದಗಿಸಲು ‘ಪ್ರತಿಬಿಂಬ’ ವೇದಿಕೆಯಾಗಲಿದೆ. ಆಂಧ್ರ ಪ್ರದೇಶ ಸರ್ಕಾರ ಈಗಾಗಲೇ ಈ ರೀತಿಯ ಮಾಹಿತಿ ಕೋಶ ಆರಂಭಿಸಿದೆ.
“ಪ್ರತಿಬಿಂಬ’ದ ವಿವರ
ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಜಾರಿ ಹಾಗೂ ನೀಡಿದ ಭರವಸೆಗಳ ಅನುಷ್ಠಾನ, ಪ್ರಮುಖ ಇಲಾಖೆಗಳ ಮಾಸಿಕವಾರು ಪ್ರಗತಿ ಬಗ್ಗೆ ವಿವರ ನೀಡುವ ಮುಖ್ಯಮಂತ್ರಿಗಳ ಮಾಹಿತಿ ಕೋಶ “ಪ್ರತಿಬಿಂಬ’ ರೂಪುಗೊಂಡಿದೆ.
ರಾಜ್ಯದ ಪ್ರಗತಿ ಪಥದ ಮೈಲುಗಲ್ಲುಗಳ ಮಾಹಿತಿ ಬಿಂಬಿಸುವ ಹಾಗೂ ಅಭಿವೃದ್ಧಿಯ ಚಿತ್ರಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವೇ ಅಧಿಕೃತವಾಗಿ ಮಾಹಿತಿ ಕೋಶಕ್ಕೆ ಚಾಲನೆ ನೀಡಿದೆ. ಸರ್ಕಾರದ ಪ್ರಮುಖ ಯೋಜನೆ, ಮಹತ್ವದ ಕಾರ್ಯಕ್ರಮಗಳ ಮಾಹಿತಿಯನ್ನು ತ್ವರಿತ ಹಾಗೂ ನಿಖರವಾಗಿ ನೀಡಲಿದೆ. ಇದರಿಂದ ಸರ್ಕಾರದ ಪ್ರಗತಿ ಪರಿಶೀಲನೆಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.