ಮಹಿಳೆಯಿಂದಲೇ ಅಪಸ್ವರ ವಿಷಾದನೀಯ
Team Udayavani, Oct 8, 2018, 12:21 PM IST
ಬೆಂಗಳೂರು: ತ್ರಿವಳಿ ತಲಾಖ್, ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧದಂತಹ ಧಾರ್ಮಿಕ ಕಂದಾಚಾರಗಳ ವಿರುದ್ಧದ ಮಹಿಳೆಯರ ಹೋರಾಟ, ಲಿಂಗ ಪರಿವರ್ತಿತ ಮಹಿಳೆಯರು ಅನುಭವಿಸುವ ಅವಮಾನಗಳು, ನಟ-ನಟಿಯರು ತಮ್ಮದೇ ಕ್ಷೇತ್ರದಲ್ಲಿ ಎದುರಿಸುವ ಸಮಸ್ಯೆಗಳು, ಕ್ರೀಡೆಗಳಲ್ಲಿ ಮಹಿಳೆಯರಿಗಿರುವ ತೊಡಕಿನ ವಿಚಾರಗಳು ಫೇಸ್ಬುಕ್ ಹಾಗೂ ಯುನೈಟೆಡ್ ನೇಷನ್ಸ್ ವುಮೆನ್ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಾವರಣಗೊಂಡವು.
“ವಿ ದಿ ವುಮೆನ್’ ಎಂಬ ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕಿರೊಂದಿಗೆ ಹಿರಿಯ ಪತ್ರಕರ್ತೆ ಬರ್ಕಾ ದತ್ ಅವರು ಸಂವಾದ ನಡೆಸಿದರು. ಈ ವೇಳೆ ಸಾಧಕಿಯರು ತಾವು ನಡೆದು ಬಂದ ಹಾದಿ, ಎದುರಿಸಿದ ಸವಾಲುಗಳು, ಅವುಗಳನ್ನು ಮೀರಿ ಬೆಳೆದ ಬಗೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಫೇಸ್ಬುಕ್ ಮತ್ತು ಯುನೈಟೆಡ್ ನೇಷನ್ಸ್ ವುಮೆನ್ ಸಂಘಟನೆಗಳು ನಗರದಲ್ಲಿ ಭಾನುವಾರ ಜಂಟಿಯಾಗಿ ಆಯೋಜಿಸಿದ್ದ “ವಿ ದ ವುಮೆನ್’ ಎಂಬ ಸಂವಾದ ಕಾರ್ಯಕ್ರಮದಲ್ಲಿ
ಶಬರಿಮಲೆ ಪ್ರಕರಣದಲ್ಲಿ ವಾದ ಮಂಡಿಸಿದ್ದ ಭಾರತೀಯ ಯುವ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತಿ ಪಸ್ರಿàಜಾ ಸೇಥಿ, ಸುಪ್ರೀಂ ಕೋರ್ಟ್ ಶಬರಿಮಲೆ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಆದರೆ, ಕೆಲ ಮಹಿಳೆಯರೇ ತೀರ್ಪು ಪಾಲನೆ ಬೇಡವೆಂದು ದನಿಯೆತ್ತಿರುವುದು ವಿಷಾದನೀಯ. ಮಹಿಳೆ ಎಂದೆಂದಿಗೂ ಪವಿತ್ರೆಯಾಗಿದ್ದು, ಆಕೆಯನ್ನು ಭಿನ್ನ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.
ಮಾಸಿಕ ಋತುಚಕ್ರದ ನೆಪದಲ್ಲಿ ಆಕೆಯನ್ನು ದೇವಾಲಯಕ್ಕೆ ಹೋಗದಂತೆ ತಡೆಯುವುದು ಸಹ ಆಕೆಯ ಸ್ವಾತಂತ್ರ್ಯ ಹರಣ ಮಾಡಿದಂತೆ. ಸುಪ್ರೀಂ ಕೋರ್ಟ್ ಶಬರಿಮಲೆ ದೇವಾಲಯಕ್ಕೆ ಮಹಿಳಾ ಪ್ರವೇಶಕ್ಕೆ ಅವಕಾಶ ನೀಡಿದ್ದು, ಇದನ್ನು ಪ್ರಶ್ನಿಸಿ ಯಾರಾದರೂ ಮೇಲ್ಮನವಿ ಸಲ್ಲಿಸಿದರೆ ಅದರ ವಿರುದ್ಧವೂ ಕಾನೂನಾತ್ಮಕ ಹೋರಾಟ ಮುಂದುವರಿಸಲು ಸಿದ್ಧ ಎಂದು ಹೇಳಿದರು.
ಬಳಿಕ “ನಾವು ತ್ರಿಲಿಂಗಿ- ಮಹಿಳೆಯರು’ ವಿಷಯ ಕುರಿತು ಡಾ.ಅಕ್ಕೆ„ ಪದ್ಮಶಾಲಿ, ಅನಿದ್ಯ ಹಜ್ರಾ, ಅನುಭೂಮಿ ಬ್ಯಾನರ್ಜಿ ಅವರು ಪರಮೇಶ್ ಶಹಾನಿ ಅವರೊಂದಿಗೆ ತಮ್ಮ ಒಡನಾಡಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು.
ನನ್ನದೇ ಆದ ಐಡೆಂಟಿಟಿ ಬೇಕಿತ್ತು: ಸಂವಾದದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್, “ಇವತ್ತಿನ ಭಾರತೀಯ ಮಹಿಳೆಯರು’ ವಿಷಯ ಕುರಿತು ಮಾತನಾಡಿದರು. ಈ ವೇಳೆ ನಾನು ಖ್ಯಾತ ನಟನ ಮಗಳಾಗಿದ್ದರೂ, ಆ ಗುರುತ್ವದಿಂದ ಹೊರತಾಗಿ ಸ್ವತಂತ್ರವಾಗಿ ಜನರು ನನ್ನನ್ನು ಗುರುತಿಸಬೇಕೆಂಬ ಉದ್ದೇಶದಿಂದ ಉದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.
ನಾನು ಮೊದಲು ಎಲ್ಲಿಗೆ ಹೋದರೂ ಬಚ್ಚನ್ ಮಗಳು ಎಂದು ಜನ ಗುರುತಿಸುತ್ತಿದ್ದರು. ನನ್ನ ಸ್ನೇಹಿತರಾದವರು ತುಂಬಾ ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮದೇ ಆದ ಐಡೆಂಟಿಟಿ ಕಂಡುಕೊಂಡಿದ್ದರು. ಹೀಗಾಗಿ ನನಗೂ ನನ್ನದೇ ಆದ ಐಡೆಂಟಿಟಿ ಬೇಕು ಎಂದೆನಿಸಿತ್ತು. ಇನ್ನು ನಟನೆಯಲ್ಲಿ ಆಸಕ್ತಿಯಿದ್ದರೂ, ಶಾಲೆಯಲ್ಲಿದ್ದಾಗ ತಮ್ಮ ಪ್ರಮುಖ ಪಾತ್ರ ಮಾಡಿದರೆ, ನಾನು ಸಣ್ಣ ಪಾತ್ರ ಮಾಡಿದ್ದೇ ಕೊನೆಯಾಯಿತು ಎಂದು ಸ್ಮರಿಸಿದರು.
ಸಂವಾದದಲ್ಲಿ ನಟಿಯರಾದ ಸೋನಂ ಕೆ. ಅಹುಜಾ, ತನುಶ್ರೀ ದತ್ತ, ತಾಸ್ಸಿ ಪನ್ನು, ನಟ ವಿಕಿ ಕೌಶಲ್, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಸ್ಯಾಕೊಫೋನ್ ವಾದಕಿ ಸುಬ್ಬಲಕ್ಷಿ, ನ್ಯಾಸ್ಕಾಂನ ದೇಬಾನಿ ಘೋಷಸ್ ಸೇರಿದಂತೆ ಹಲವು ಸಾಧಕಿಯರು ಭಾಗವಹಿಸಿದ್ದರು.
ಕೇರಳದ ಚರ್ಚ್ಗಳಲ್ಲಿ ಮಹಿಳಾ ಪಾದ್ರಿಗಳ ಸ್ಥಿತಿ ಶೋಚನೀಯವಾಗಿದೆ. ಕೆಲವೆಡೆ ರಾಜಕಾರಣಿಗಳ ಪ್ರಭಾವದಿಂದಾಗಿ ಪ್ರಕರಣಗಳು ಬಹಿರಂಗವಾಗುತ್ತಿಲ್ಲ. ಇದರ ವಿರುದ್ಧ ದನಿಯೆತ್ತಿದ್ದಕ್ಕೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
-ಇಂದುಲೇಖಾ ಜೋಸೆಫ್
ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ವಿಚ್ಛೇಧನ ನೀಡುವುದನ್ನು ಪ್ರಶ್ನಿಸುವುದಿಲ್ಲ. ಆದರೆ, ಆಕೆಯ ಅನುಪಸ್ಥಿತಿಯಲ್ಲಿ ಯಾವುದೇ ರೀತಿಯ ಒಪ್ಪಿಗೆ ಪಡೆಯದೆ ತ್ರಿವಳಿ ತಲಾಖ್ ನೀಡುವುದು ಸರಿಯಲ್ಲ. ಒಪ್ಪಿತವಲ್ಲದ ರೀತಿಯಲ್ಲಿ ತಲಾಖ್ ನೀಡುವಂತೆ ಕುರಾನ್ನಲ್ಲಿ ಅಲ್ಲಾ ಸಹ ಹೇಳಿಲ್ಲ.
-ಝಾಕಿಯಾ ಸೋಮನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.