ಸಂಬಂಧಗಳು ಸಡಿಲವಾಗುತ್ತಿವೆ: ಸಂಶೋಧಕ ಚಿದಾನಂದಮೂರ್ತಿ
Team Udayavani, Jun 27, 2017, 11:23 AM IST
ಬೆಂಗಳೂರು: ಆಧುನಿಕ ಕಾಲದಲ್ಲಿ ಗಂಡು-ಹೆಣ್ಣಿನ ಸಂಬಂಧಗಳು ಸಡಿಲಗೊಳ್ಳುತ್ತಿದ್ದು, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಬೇಸರ ವ್ಯಕ್ತಪಡಿಸಿದರು.
ಸಪ್ನ ಬುಕ್‌ಹೌಸ್ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ “ನವಮಿ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, “ಹಿಂದೆ ಅಪ್ಪ, ಅಮ್ಮನಿಗೆ ಹೊಡೆದಿದ್ದನ್ನು ನೋಡಿದ್ದೇನೆ. ಅಮ್ಮ ತಿರುಗಿ ಹೊಡೆಯಲಿಲ್ಲ, ಹೆಚ್ಚು ಬೈದಿದ್ದು ಕಂಡಿದ್ದೇನೆ.
ಆದರೆ, ಅವರು ಎಂದಿಗೂ ಬೇರೆಯಾಗಿರಲಿಲ್ಲ. ಅದುವೇ ನಮ್ಮ ಭಾರತೀಯ ಸಂಸ್ಕೃತಿ. ಪ್ರಸ್ತುತ ಹೆಣ್ಣು-ಗಂಡಿನ ನಡುವೆ ತಿಕ್ಕಾಟ ಹೆಚ್ಚಾಗಿದ್ದು, ಸಂಬಂಧಗಳು ಕ್ಷಣಿಕಗೊಳ್ಳುತ್ತಿವೆ. ಸಂವಹನ ಮಾಧ್ಯಮಗಳಿಂದ ಬಾಂಧವ್ಯಗಳು ಬೆಸೆಯುತ್ತಾ ಹೋಗಬೇಕೆ ಹೊರತು, ಒಡೆದು ಹೋಗಬಾರದು’ ಎಂದು ಹೇಳಿದರು.
“ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯ ಬೇರೆ ಬೇರೆಯಾದರೂ ಎರಡರ ಉದ್ದೇಶ ಸತ್ಯಾನ್ವೇಷಣೆಯೇ ಆಗಿದೆ. ಉತ್ತಮ ಸಮಾಜದ ನಿರ್ಮಾಣ ಇವುಗಳ ಉದ್ದೇಶವಾಗಿದೆ. ಹೆಣ್ಣು ಹೆಚ್ಚು ಸೂಕ್ಷ್ಮಜೀವಿ, ಗಂಡು ಸಮಾಜ ಜೀವಿ. ಹೆಣ್ಣಿನೊಳಗೆ ತೊಳಲಾಟ ಹೆಚ್ಚು. ಗಂಡಿನಲ್ಲಿ ಹೊರಗಿನ ಓಡಾಟ ಜಾಸ್ತಿ. ಈ ಎರಡು ವ್ಯಕ್ತಿತ್ವದ ನಡುವಿನ ಬಾಂಧವ್ಯ ಗಟ್ಟಿಯಾಗಬೇಕು ಎನ್ನುವುದು “ನವಮಿ’ ಕೃತಿಯ ಉದ್ದೇಶವಾಗಿದೆ. ಸಂಬಂಧಗಳೇ ಇಲ್ಲಿ ಪಾತ್ರಗಳಾಗಿ ಸೆಳೆಯುತ್ತವೆ ಎಂದು ತಿಳಿಸಿದರು.
ಸಪ್ನ ಬುಕ್‌ಹೌಸ್ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೆಗೌಡ ಮಾತನಾಡಿ, “ಹೆಸರಾಂತ ಲೇಖಕರ ಪುಸ್ತಕ ಪ್ರಸಾರ ಮಾಡಲು ಅನೇಕ ಪ್ರಕಾಶಕರು ತಯಾರಿರುತ್ತಾರೆ. ಆದರೆ ಉದಯೋನ್ಮುಖ ಬರಹಗಾರರಿಗೆ ಅವಕಾಶ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಪ್ನ ಬುಕ್‌ಹೌಸ್ ಹಲವು ಹೊಸ ಪ್ರತಿಭೆಗಳ ಪುಸ್ತಕ ಪ್ರಕಟಿಸುತ್ತಿದೆ ಎಂದ ಅವರು, ಸಾಹಿತಿಗಳಿಗೆ ಸಾವಿಲ್ಲ.
ಪುಸ್ತಕ, ಬರಹಗಳಿಂದ ಜೀವನದ ನಂತರವೂ ಅವರು ಅಮರರಾಗಿ ಉಳಿಯುತ್ತಾರೆ. ಸಾಹಿತ್ಯ ಕುರಿತು ಎಲ್ಲರೂ ಆಸಕ್ತಿ ವಹಿಸಬೇಕು’ ಎಂದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ರಾಜೇಂದ್ರ ಪಾಟೀಲ, ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ಲೇಖಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.