ಫ್ಲೈಓವರ್: ವಾಹನ ಸವಾರರಿಗೆ ರಿಲ್ಯಾಕ್ಸ್
Team Udayavani, Feb 23, 2022, 12:00 PM IST
ಬೆಂಗಳೂರು: ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಮತ್ತು ನಾಗವಾರ ನಡುವಿನ ಮೇಲ್ಸೇತುವೆಯಲ್ಲಿ ಬೈಕ್, ಕಾರು ಸೇರಿದಂತೆ ಇನ್ನಿತರ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದ ನಂತರ ಆ ಮಾರ್ಗದಲ್ಲಿ ಸ್ವಲ್ಪ ಮಟ್ಟಿನಸಂಚಾರ ದಟ್ಟಣೆ ಕಡಿಮೆಯಾಗಿದೆ.
ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿಡಿ.26ರಿಂದ ಫೆ.16ರ ವರೆಗೆ ಎರಡೂ ಕಡೆಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ಸೇತುವೆ ಮೇಲೆ ಭಾರೀ ವಾಹನಗಳು ಸಂಚರಿಸಿದರೆಅಪಾಯ ಎಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಲಘು ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಳೆದ 56 ದಿನಗಳಿಂದ ಕಿರಿಕಿರಿ ಅನುಭವಿಸಿದ್ದ ವಾಹನ ಸವಾರರಿಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿದಂತಾಗಿದೆ.
ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಬೈಕ್, ಕಾರುಗಳಲ್ಲಿ ಮತ್ತು ಖಾಸಗಿ ವಾಹನಗಳಲ್ಲಿ ಸಂಚರಿಸುವವರು ಸಂಚಾರ ದಟ್ಟಣೆಯಿಂದ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ವಾಹನ ಸವಾರಮೋಹಿತ್. ಲಘುವಾಹನಗಳಿಗೆ ಮೇಲ್ಸೇತುವೆ ಮೇಲೆ ಅವಕಾಶ ನೀಡಿದ ನಂತರ ಮೊದಲಿನಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿಲ್ಲ. ಆದರೆ, ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಮಾತ್ರ ಸ್ವಲ್ಪ ಮಟ್ಟಿನ ಸಂಚಾರ ದಟ್ಟಣೆ ಉಂಟಾಗುತ್ತದೆ. ಉಳಿದಂತೆಯ ಯಾವುದೇ ಸಮಸ್ಯೆ ಯಾ ಗುತ್ತಿಲ್ಲ ಎನ್ನುತ್ತಾರೆ ಸಂಚಾರ ಪೊಲೀಸ್ ವೆಂಕಟರಾವ್.
ಗೊರಗುಂಟೆ ಪಾಳ್ಯದಲ್ಲಿ ಸೇತುವೆ ಆರಂಭದ ಜಾಗದಲ್ಲಿ ಬಸ್ಸು, ಲಾರಿ ಸೇರಿದಂತೆ ಭಾರೀ ವಾಹನಗಳು ಸಂಚರಿಸದಂತೆ ಬ್ಯಾರಿಯರ್ ಅಳವಡಿಸಲಾಗಿದೆ. ಒಂದು ವೇಳೆ ವಾಹನಗಳು ಮೇಲ್ಸೇತುವೆ ಮೇಲೆ ಸಂಚರಿಸಲು ಮುಂದಾದರೂ ಸಾಧ್ಯವಾಗುವುದಿಲ್ಲ. ಮೇಲ್ಸೇತುವೆ ಮೇಲೆ ಭಾರೀ ವಾಹನಗಳು ಸಂಚರಿಸದಂತೆ ನೋಡಿಕೊಳ್ಳುವುದಕ್ಕಾಗಿ ಯಶವಂತ ಪುರ ಠಾಣೆ ವತಿಯಿಂದ ಪ್ರತಿ ದಿನ ಮೂರು ಪಾಳಿಯಲ್ಲಿ ತಲಾ ಇಬ್ಬರು ಪೊಲೀಸರನ್ನು ಕಾವಲಿಗೆ ನೇಮಿಸಲಾಗಿದೆ.
ಜಾಲಹಳ್ಳಿ ಸುತ್ತಲಿನ ಬಡಾವಣೆಗಳಿಗೆ ತಪ್ಪದ ಟ್ರಾಫಿಕ್ ಬಿಸಿ :
ಲಘು ವಾಹನಗಳಿಗೆ ಪೀಣ್ಯ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗಿದೆ. ಆದರೆ, ಪೀಕ್ ಅವರ್ಸ್ನಲ್ಲಿ ಜಾಲಹಳ್ಳಿ ಸುತ್ತಲಿನ ಬಡಾವಣೆಗಳಿಗೆ ತೆರಳುವವರಿಗೆ ಮಾತ್ರ ಇನ್ನೂ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಕ್ಕಿಲ್ಲ. ರಾಜಕುಮಾರ್ ಸಮಾಧಿ ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶ, ಲಗ್ಗೆರೆ ಕಡೆಯಿಂದ ಜಾಲಹಳ್ಳಿ ವೃತ್ತಕ್ಕೆ ಬರುವ ಮತ್ತು ಜಾಲಹಳ್ಳಿ, ಎಚ್ಎಂಟಿ ಕ್ವಾರ್ಟ್ರರ್ಸ್, ಅಯ್ಯಪ್ಪ ದೇವಸ್ಥಾನ ಕಡೆಯಿಂದ ಬರುವ ವಾಹನಗಳು ಬೆಳಗ್ಗೆ ಮತ್ತು ಸಂಜೆ ವೇಳೆ ಟ್ರಾಫಿಕ್ನಲ್ಲಿ ಸಿಲುಕುತ್ತಿವೆ. ಜಾಲಹಳ್ಳಿ ರಸ್ತೆ ಕಿರಿದಾಗಿರುವುದರಿಂದ ಹೆಚ್ಚಿನ ವಾಹನಗಳು ಬಂದಾಗ ದಟ್ಟಣೆ ಉಂಟಾಗುತ್ತಿದೆ. ಜನರು ಬೆಳಗಿನ ಸಮಯದಲ್ಲಿಕೆಲಸ-ಕಾರ್ಯಗಳಿಗೆ ನಿಗದಿತ ಸಮಯದಲ್ಲಿ ತಲುಪಲು ವಿಳಂಬವಾಗುತ್ತಿದೆ. ಸುತ್ತಮುತ್ತಲಿನ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾರು, ಬೈಕ್, ಟಾಟಾ ಎಸ್ ಸೇರಿದಂತೆ ಲಘು ವಾಹನಗಳಿಗೆ ಅವಕಾಶ ನೀಡಿರುವುದರಿಂದ ಕೆಳಭಾಗದರಸ್ತೆಯಲ್ಲಿಯೂ ಟ್ರಾಫಿಕ್ ಕಡಿಮೆಯಾಗಿದೆ. ಎರಡೂ ಕಡೆ ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿದೆ.–ರಾಘವೇಂದ್ರ, ಕಾರು ಚಾಲಕ
ಪ್ರತಿ ದಿನ ನೆಲಮಂಗಲದಿಂದ ಬೆಂಗಳೂರಿಗೆ ಬೈಕ್ನಲ್ಲಿಸಂಚಾರ ಮಾಡುತ್ತೇನೆ. ಕಳೆದಎರಡು ತಿಂಗಳು ಮೇಲ್ಸೇತುವೆಬಂದ್ ಮಾಡಿದ್ದರಿಂದ ಟ್ರಾಫಿಕ್ನಲ್ಲಿ ಸಿಲುಕಿ ಅರ್ಧ ಸಮಯ ಹಾಳಾಗುತ್ತಿತ್ತು. ಈಗ ಸಂಚಾರಕ್ಕೆಅವಕಾಶ ನೀಡಿರುವುದರಿಂದ ಸಮಸ್ಯೆ ನಿವಾರಣೆಯಾಗಿದೆ.–ಅರವಿಂದ್, ಬೈಕ್ ಸವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.