ಸೋನಾಲಿಕಾದಿಂದ ಟೈಗರ್ ಸೀರೀಸ್ ಟ್ರ್ಯಾಕ್ಟರ್ ಬಿಡುಗಡೆ
Team Udayavani, Jul 7, 2019, 3:05 AM IST
ಬೆಂಗಳೂರು: ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೊಷಿಯಾರ್‌ಪುರದ ಇಂಟರ್‌ನ್ಯಾಷನಲ್ ಟ್ರಾಕ್ಟರ್ ಲಿ., (ಐಟಿಎಲ್) ಅತ್ಯಾಧುನಿಕ ತಂತ್ರಜ್ಞಾನವುವುಳ್ಳ ಸೊನಾಲಿಕಾ ಟೈಗರ್ ಸೀರೀಸ್ ಟ್ರ್ಯಾಕ್ಟರ್‌ಗಳನ್ನು ಬಿಡುಗಡೆ ಮಾಡಿದೆ.
ನಗರದ ಹೋಟೆಲಲ್ಲಿ ಶುಕ್ರವಾರ ಟೈಗರ್ ಶ್ರೇಣಿಯ ನೂತನ ಟ್ರ್ಯಾಕ್ಟರ್‌ಗಳನ್ನು ಸೊನಾಲಿಕಾ ಸಮೂಹ ಅಧ್ಯಕ್ಷ ಮುದಿತ್ ಗುಪ್ತಾ, ಉಪಾಧ್ಯಕ್ಷ (ಪ್ರಾಡಕ್ಟ್) ಕೃಷ್ಣನ್ ಕುಮಾರ್ ತಿವಾರಿ ಹಾಗೂ ವಲಯ ಜೋನಲ್ ಲೀಡರ್‌ಶಿಪ್ ಸದಸ್ಯ ಶ್ರೀಕಾಂತ್ ನೆಗಿನಾಳ್ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸೊನಾಲಿಕಾ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿಟ್ಟಲ್ ಮಾತನಾಡಿ, ಬ್ರಾಂಡ್ ಬೆಳೆಸಲು ಮತ್ತು ಎಲ್ಲ ಪ್ರದೇಶಗಳ ರೈತರ ವಿವಿಧ ಅಗತ್ಯಗಳನ್ನು ಪೂರೈಸಲು ಬೇಕಾದ ಗಮನವನ್ನು ತಂತ್ರಜ್ಞಾನದ ನವೀಕರಣ ಮೂಲಕ ನೀಡಲಾಗಿದೆ ಎಂದರು.
ಕಾರ್ಯಕ್ರಮ ಕುರಿತು ಮಾತನಾಡಿದ ಮುದಿತ್ ಗುಪ್ತಾ, ಇಂದು ನಾವು ವಿಶ್ವಾದ್ಯಂತ ಅತ್ಯಂತ ಉಪಯುಕ್ತ, ವಿಶ್ವಾಸಾರ್ಹ ಟ್ರ್ಯಾಕ್ಟರ್ ಹಾಗೂ ಟ್ರ್ಯಾಕ್ಟರ್ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಪಂಜಾಬ್ ರಾಜ್ಯದ ಹೊಷಿಯಾರ್‌ಪುರದಲ್ಲಿ ವಿಶ್ವದ ನಂ.1 ಏಕೀಕೃತ ಟ್ರ್ಯಾಕ್ಟರ್ ಉತ್ಪಾದನಾ ಘಟಕ ನಮ್ಮದಾಗಿದೆ.
ಮುಂದಿನ ತಲೆಮಾರಿನ ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಯುರೋಪ್ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಿರುವ ಟ್ರ್ಯಾಕ್ಟರ್‌ಗಳು ಇವಾಗಿವೆ. ಆಧುನಿಕ ಸವಲತ್ತುಗಳನ್ನು ಅಳವಡಿಸಿಕೊಂಡು ರೈತಸ್ನೇಹಿಯಾಗಿ ಕಾರ್ಯ ನಿರ್ವಹಿಸಬಲ್ಲ, ದೋಷರಹಿತ ಏಕೈಕ ಟ್ರಾಕ್ಟರ್ ಇದು ಎನ್ನಬಹುದಾಗಿದೆ.
ರೈತರ ಉತ್ಪಾದಕತೆ ಹೆಚ್ಚಿಸುವುದಲ್ಲದೆ, ಕಡಿಮೆ ನಿರ್ವಹಣಾ ವೆಚ್ಚದ ಆಕರ್ಷಕ ಸೊನಾಲಿಕಾ ಟ್ರ್ಯಾಕ್ಟರ್‌ಗಳು, ರೋಟೊವೇಟರ್‌ಗಳಂತ ಇಂಪ್ಲಿಮೆಂಟ್‌ಗಳನ್ನು ನೀಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತವೆ. ಅಲ್ಲದೆ, 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಕೇಂದ್ರ ಸರ್ಕಾರದ ಪಾಲುದಾರನಾಗಿ ಆಯ್ಕೆ ಮಾಡಲು ಅವಕಾಶವೂ ನೀಡಿದೆ ಎಂದರು.
20 ಹೆಚ್‌ಪಿ ಯಿಂದ 120 ಹೆಚ್‌ಪಿಯವರೆಗಿನ ವಿಸ್ತಾರ ಶ್ರೇಣಿಯಲ್ಲಿ ದೊರೆಯಲಿರುವ ಸೊನಾಲಿಕಾ ಟೈಗರ್ ಸೀರೀಸ್‌ನಲ್ಲಿ 90 ಎಚ್‌ಪಿ ಯಿಂದ 120 ಹೆಚ್‌ಪಿ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಅದರಲ್ಲೂ ಕರ್ನಾಟಕದ ರೈತರಿಗೆ ಪ್ರಥಮ ಬಾರಿಗೆ ಬೆಂಗಳೂರಲ್ಲಿ ವಿಶೇಷವಾಗಿ 50 ಎಚ್‌ಪಿ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಟ್ರ್ಯಾಕ್ಟರ್ ಸೀರೀಸ್‌ನ ಎಕ್ಸ್ ಶೋರೂಂ ಬೆಲೆ 3.50 ಲಕ್ಷ ರೂ.ನಿಂದ 12.5 ಲಕ್ಷ ರೂ.ವರೆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.