ಹೊಸ ವರ್ಷಾಚರಣೆ ತಡೆಗೆ ಮನವಿ
20ರಿಂದಲೇ ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಶೇ.50ರಷ್ಟು ಜನ ಪಾಲ್ಗೊಳ್ಳುವುದಕ್ಕೆ ಸೀಮಿತಗೊಳಿಸಲು ಶಿಫಾರಸು
Team Udayavani, Dec 16, 2020, 12:07 PM IST
ಬೆಂಗಳೂರು: ಕೋವಿಡ್ ಸೋಂಕು ಭೀತಿ ಹಾಗೂ ವಿವಿಧ ನಗರಗಳಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿ ಆತಂಕದ ಹಿನ್ನೆಲೆಯಲ್ಲಿ ಡಿ.20ರಿಂದಲೇ ನಗರದ ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಶೇ.50ರಷ್ಟು ಜನ ಪಾಲ್ಗೊಳ್ಳುವುದಕ್ಕೆ ಸೀಮಿತ ಗೊಳಿಸುವಂತೆ ರಾಜ್ಯ ಸರ್ಕಾ ರಕ್ಕೆ ಶಿಫಾರಸು ಮಾಡಲಾಗಿದೆಎಂದು ಬಿಬಿಎಂಪಿ ಆಯುಕ್ತಎನ್.ಮಂಜುನಾಥ್‌ಪ್ರಸಾದ್ ತಿಳಿಸಿದರು.
ಈಸಂಬಂಧ ಮಂಗಳವಾರ ಮಾತನಾಡಿದ ಆಯುಕ್ತರು, ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಹೆಚ್ಚು ಜನ ಸೇರುತ್ತಾರೆ. ಈ ವರ್ಷ ಇದಕ್ಕೆ ಅವಕಾಶ ನೀಡದೆ ಇರಲು ನಿರ್ಧರಿಸಲಾಗಿದೆ. ಕೋವಿಡ್ ತಡೆ ತಾಂತ್ರಿಕ ಸಮಿತಿಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ನಗರದಲ್ಲಿ ಸಾಮಾನ್ಯವಾಗಿ ಡಿ.20ರಿಂದಲೇ ಸಂಭ್ರಮಾಚರಣೆ ಪ್ರಾರಂಭವಾಗುತ್ತವೆ.ಹೀಗಾಗಿ, ಮುಂಜಾಗ್ರತೆ ವಹಿಸಲಾಗುವುದು. ಈ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲನೆ ಬಗ್ಗೆ ಎಚ್ಚರ ವಹಿಸಲು ಹೆಚ್ಚುವರಿ 200 ಜನ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಅದ್ಧೂರಿ ನಿಷೇಧಕ್ಕೆ ಮನವಿ: ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ವಿಠಲ್ ಮಲ್ಯ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿ ಇನ್ನಿತರ ಕಡೆ ಸಾರ್ವಜನಿಕವಾಗಿ ಅದ್ದೂರಿ ಕಾರ್ಯಕ್ರಮ ನಿಷೇಧಿಸುವ ಸಂಬಂಧ ಸರ್ಕಾರವನ್ನು ಕೋರಲಾಗಿದೆ ಎಂದು ಹೇಳಿದರು.
ಶೀಘ್ರದಲ್ಲಿಯೇ ಅಂತಿಮ ಅಧಿಸೂಚನೆ: ಈ ಬಗ್ಗೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು. ಹೋಟೆಲ್, ರೆಸ್ಟೋರೆಂಟ್ ಸೇರಿ ಜನನಿಬಿಡ ಪ್ರದೇಶಗಳಲ್ಲಿ ನಿಯಮ ಪಾಲನೆಬಗ್ಗೆ ಪೊಲೀಸ್ ಸಿಬ್ಬಂದಿ,ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್‌ಗಳು ನಿಗಾ ವಹಿಸಲಿದ್ದಾರೆಂದರು.
ಬಿಬಿಎಂಪಿಯಿಂದ ಸರ್ಕಾರಕ್ಕೆ ಶಿಫಾರಸು :
- ಕೋವಿಡ್ ಭೀತಿ ಹಿನ್ನೆಲೆ ಈ ಬಾರಿ ಅದ್ಧೂರಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶ ಬೇಡ.
- ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ, ಕ್ಲಬ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನೆ ಕಾರ್ಯಕ್ರಮಕ್ಕೆ ನಿರ್ಬಂಧ.
- ಹೋಟೆಲ್, ಕ್ಲಬ್-ಪಬ್, ರೆಸ್ಟೋರೆಂಟ್‌ಗಳಲ್ಲಿ ಸದ್ಯ ಜಾರಿಯಲ್ಲಿರುವ ಕೋವಿಡ್ ಸೋಂಕಿನ ಮಾರ್ಗಸೂಚಿಯಂತೆ ಒಟ್ಟು ಆಸನಗಳ ಪೈಕಿ ಶೇ.50 ಜನಕ್ಕೆ ಮಾತ್ರ ಅವಕಾಶ. ದೊಡ್ಡ ಸಭಾಂಗಣಗಳಿದ್ದರೆ 200 ಜನರಿಗೆ ಸೀಮಿತ.
- ಹೊಸ ವರ್ಷಾಚರಣೆ ವೇಳೆ ಸ್ಯಾನಿಟೈಸರ್, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.