ರೇರಾ ಜಾರಿ: ಸಣ್ಣಪುಟ್ಟ ಬಿಲ್ಡರ್‌ಗಳಿಗೆ ಉಳಿಗಾಲವಿಲ್ಲ
Team Udayavani, Jul 8, 2017, 3:50 AM IST
ಬೆಂಗಳೂರು: ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕಾಯ್ದೆ ಜಾರಿಯಾದರೆ ಸಣ್ಣ-ಪುಟ್ಟ ರಿಯಲ್ ಬಿಲ್ಡರ್‌ಗಳಿಗೆ ಉಳಿಗಾಲವಿಲ್ಲ.
ಹೌದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ಕಾಯ್ದೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳ ಪ್ರಕಾರ 500 ಚದರ ಮೀಟರ್ (ಐದು ಸಾವಿರ ಚದರಡಿಗಿಂತ ಮೇಲ್ಪಟ್ಟ) ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ವಸತಿ ಸಮುಚ್ಚಯಕ್ಕೆ ಮಾತ್ರ ಅನುಮತಿ. ಹೀಗಾಗಿ, ಅದಕ್ಕಿಂತ ಕಡಿಮೆ ವಿಸ್ತೀರ್ಣದ ಯೋಜನೆಗಳಿಗೆ ಅನುಮತಿ ಸಿಗುವುದೇ ಅನುಮಾನ ಎಂದು ಮೂಲಗಳು ತಿಳಿಸಿವೆ.
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆಯದ ಯೋಜನೆಗಳು ಒಂದು ರೀತಿಯಲ್ಲಿ ಅನಧಿಕೃತವಾಗಲಿದೆ. ಹೀಗಾಗಿ, ಸಣ್ಣ -ಪುಟ್ಟ 2000 ಚದರಡಿ, 2500 ಚದರಡಿ, 3000 ಚದರಡಿ ಹೀಗೆ ಜಂಟಿ ಸಹಭಾಗಿತ್ವದಡಿ 1200 ವಿಸ್ತೀರ್ಣದ ಎರಡು-ಮೂರು ನಿವೇಶನ ಸೇರಿಸಿ ಅಪಾರ್ಟ್‌ಮೆಂಟ್ ನಿರ್ಮಿಸಿ ಮಾರಾಟ ಮಾಡುವ ಸಣ್ಣ ಪ್ರಮಾಣದ ಬಿಲ್ಡರ್‌ಗಳಿಗೆ ನಿಯಮಾವಳಿಯಲ್ಲಿ ಅವಕಾಶ ಸಿಗದು.
ಏಕೆಂದರೆ, ಪ್ರತಿ ಯೋಜನೆಯಲ್ಲೂ ತೆರೆದ ಪ್ರದೇಶ, ನಾಗರಿಕ ಬಳಕೆಗೆ ಕಾಯ್ದಿರಿಸಿದ ಪ್ರದೇಶ, ಹಸಿರು ವಲಯ ಎಲ್ಲವೂ ಇರಬೇಕು. ಹೀಗಾಗಿ, ಸಣ್ಣ-ಪುಟ್ಟ ಯೋಜನೆಗಳಲ್ಲಿ ಇದೆಲ್ಲವನ್ನೂ ಒಳಗೊಂಡಂತೆ ವಸತಿ ಸಮುತ್ಛಯ ನಿರ್ಮಾಣ ಅಸಾಧ್ಯ.
ಜತೆಗೆ, ಬಡಾವಣೆ ರಚನೆ ಅಥವಾ ನಕ್ಷೆ ಮಂಜೂರಾತಿಗೆ ಅನುಗುಣವಾಗಿ ನಿಯಮಾವಳಿ ಪ್ರಕಾರ ಕಟ್ಟಡ ನಿರ್ಮಾಣ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಿಕೆ, ಗ್ರಾಹಕರಿಂದ ಪಡೆದ ಮುಂಗಡ ಮೊತ್ತದಲ್ಲಿ ಶೇ.70 ರಷ್ಟು ಠೇವಣಿ ಇಡುವುದು ಆಗದ ಕೆಲಸ. ಎಲ್ಲದಕ್ಕಿಂತ ಹೆಚ್ಚಾಗಿ ಸಣ್ಣ ಸಣ್ಣ ವಸತಿ ಸಮುತ್ಛಯಕ್ಕೆ (ವೈಯಕ್ತಿಕ ಬಳಕೆಗೆ ಹೊರತುಪಡಿಸಿ) ಅನುಮತಿ ಸಿಗುವುದೇ ಅನುಮಾನ ಎಂದು ಹೇಳಲಾಗಿದೆ.ಹೀಗಾಗಿ, ಗ್ರಾಹಕರು ನೋಂದಾಯಿತ ಹಾಗೂ “ಬ್ರಾಂಡೆಡ್’ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್‌ಗಳ ಕಂಪನಿಗಳ ಯೋಜನೆಗಳತ್ತಲೇ ಹೋಗಬೇಕಾಗುತ್ತದೆ.
ದೊಡ್ಡ ದೊಡ್ಡ ಕಂಪನಿಗಳು ಸಹ ಕೇಂದ್ರ ಸರ್ಕಾರದ ರಿಯಲ್ ಎಸ್ಟೇಟ್ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಪರಿಪೂರ್ಣವಾಗಿ ಪಾಲಿಸಲೇಬೇಕು. ಬಿಲ್ಟಪ್ ಏರಿಯಾ (ಒಟ್ಟಾರೆ ನಿರ್ಮಿತ ಪ್ರದೇಶ) ಕಾಪೆìಟ್ ಏರಿಯಾ (ವಾಸಯೋಗ್ಯ ಪ್ರದೇಶ) ವಿಚಾರದಲ್ಲೂ ಸ್ಪಷ್ಟವಾಗಿ ಒಪ್ಪಂದದಲ್ಲೇ ತಿಳಿಸಬೇಕು. ಸರ್ಕಾರಿ ಮಾರ್ಗಸೂಚಿ ದರವನ್ನೇ ಆಧಾರವಾಗಿಟ್ಟುಕೊಂಡು ದರ ನಿಗದಿಪಡಿಸಬೇಕು ಎಂಬ ಅಂಶಗಳು ನಿಯಮಾವಳಿಯಲ್ಲಿ ಸೇರಿವೆ.
ಪ್ರತಿ ಯೋಜನೆಯ ಕಾಮಗಾರಿ ಆರಂಭಿಕ ಪ್ರಮಾಣ ಪತ್ರ (ಕಮೆಸ್°ಮೆಂಟ್ ಸರ್ಟಿಫಿಕೇಟ್) ಆ ನಂñರ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣಪತ್ರ (ಕಂಪ್ಲೀಷನ್ ಸರ್ಟಿಫಿಕೇಟ್) ಕೊನೆಯದಾಗಿ ಸ್ವಾಧೀನ ಪ್ರಮಾಣಪತ್ರ (ಆಕ್ಯುಪೇಷನ್ ಸರ್ಟಿಫಿಕೇಟ್) ಈ ಮೂರು ಪ್ರಮಾಣಪತ್ರಗಳು ನೀಡುವಾಗ ಸಕ್ಷಮ ಪ್ರಾಧಿಕಾರಗಳು ಪಾಲಿಸಬೇಕಾದ ಕ್ರಮಗಳ ಬಗ್ಗೆಯೂ ನಿಯಮಾವಳಿಯಲ್ಲಿ ಸ್ಪಷ್ಟ ಸೂಚನೆಗಳಿದ್ದು ಯಾವುದೇ ಹಂತದಲ್ಲೂ ಲೋಪ ಅಥವಾ ಅಕ್ರಮ ಎಸಗಲು ಅವಕಾಶ ಇಲ್ಲ. ನಿಯಂತ್ರಣ ಪ್ರಾಧಿಕಾರದ ಅನುಮತಿಯೇ ಅಂತಿಮವಾಗಲಿದೆ ಎಂದು ಹೇಳಲಾಗಿದೆ.
ಬ್ಯಾಂಕ್ ಸಾಲ ಪಡೆಯುವ ಹಾಗೂ ಸಾಲ ಮಂಜೂರಾದ ಮೇಲೆ ಮಾಲೀಕನಿಗೆ ಯಾವ ಹಂತದಲ್ಲಿ ಎಷ್ಟೆಷ್ಟು ಮೊತ್ತ ಸಂದಾಯವಾಗಬೇಕು. ಯಾವ ಆಧಾರದಲ್ಲಿ ಬ್ಯಾಂಕುಗಳ ಯೋಜನೆಗಳಿಗೆ ಸಾಲ ನೀಡಬೇಕು ಎಂಬ ಅಂಶವೂ ನಿಯಮಾವಳಿಯಲ್ಲಿದೆ ಎನ್ನಲಾಗಿದೆ.
ಈಗಲೂ ಲಾಬಿ
ಈಮಧ್ಯೆ, 500 ಚದರ ಮೀಟರ್ ವಿಸ್ತೀರ್ಣ ಹಾಗೂ ಅದಕ್ಕೆ ಮೇಲ್ಪಟ್ಟ ಯೋಜನೆಗಳು ಮಾತ್ರ ಪರಿಗಣಿಸುವ ಅಂಶದ ವಿಚಾರದಲ್ಲಿ ಸರಳೀಕರಣ ಮಾಡಲು ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿವೆ.
ಸಂಪುಟದಲ್ಲಿ ಒಪ್ಪಿಗೆ ಪಡೆದು ನಿಯಮಾವಳಿ ರೂಪಿಸುತ್ತಿರುವ ಹಂತದಲ್ಲೂ ಇನ್ನೂ ಕಡಿಮೆ ವಿಸ್ತೀರ್ಣದ ಯೋಜನೆಗೂ ಒಪ್ಪಿಗೆ ಕೊಡುವಂತೆ ನಿಯಮಾವಳಿ ಸರಳೀಕರಣ ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ಕಾನೂನು ಎಲ್ಲರಿಗೂ ಒಂದೇ
ಕೇಂದ್ರ ಸರ್ಕಾರದ ಕಾಯ್ದೆ ವ್ಯಾಪ್ತಿಯ ಚೌಕಟ್ಟಿನಲ್ಲೇ ನಾವು ನಿಯಮಾವಳಿ ರೂಪಿಸಿದ್ದೇವೆ. ಕಾನೂನು ಎಂದರೆ ಎಲ್ಲರೂ ಪಾಲನೆ ಮಾಡಬೇಕು. ಒಟ್ಟಾರೆ ಗ್ರಾಹಕರ ಹಿತಾಸಕ್ತಿ ಮುಖ್ಯ, ಯಾರದೋ ನಿವೇಶನ, ಯಾವುದೋ ಜಾಗ ತೋರಿಸಿ ಗ್ರಾಹಕರಿಂದ ಹಣ ಪಡೆದು ವಂಚಿಸುವ ಅಥವಾ ಯಾವುದೇ ಸೌಲಭ್ಯಗಳಿಲ್ಲದೆ ಗುಣಮಟ್ಟ ಕಾಯ್ದುಕೊಳ್ಳದ ಯೋಜನೆಗಳ ಹಾವಳಿ ನಿಲ್ಲಲಿದೆ.
– ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಮೋಸಗಾರರಿಗೆ ಕಡಿವಾಣ
ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಟಾನದಿಂದ ಅನಧಿಕೃತ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಕಂಪನಿ ಅಥವಾ ವೈಯಕ್ತಿಕವಾಗಿ ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣ ನಿರ್ಮಿಸುವವರಿಗೆ ಕಡಿವಾಣ ಬೀಳಲಿದೆ. ಇದು ಅಗಲೇಬೇಕಾದ ಕಾರ್ಯ. ಇಲ್ಲದಿದ್ದರೆ, ಗ್ರಾಹಕರನ್ನು ಮೋಸ ಮಾಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿ ಅಮಾಯಕರು ಹಣ ಕಳೆದುಕೊಳ್ಳಬೇಕಾಗುತ್ತದೆ.
– ಸುರೇಶ್, ಪ್ರಧಾನ ಕಾರ್ಯದರ್ಶಿ, ಕ್ರೆಡಾಯ್
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.