Rescue: ಕೇರಳದ ಬೆಟ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಬೆಂಗಳೂರಿನ 10 ಮಹಿಳೆಯರ ರಕ್ಷಣೆ
Team Udayavani, Jul 15, 2024, 11:58 AM IST
ಕೊಚ್ಚಿ: ಕೇರಳದ ಇಡುಕ್ಕಿ ಜಿಲ್ಲೆಯ ನಲುಮಾಲ ವ್ಯೂ ಪಾಯಿಂಟ್‌ಗೆ ತೆರಳಿ ಮಳೆಯಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ ಬೆಂಗಳೂರಿನ 10 ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ (ಜು.19) ಬೆಂಗಳೂರಿನ 10 ಮಹಿಳೆಯರು ಸೇರಿದಂತೆ ಒಟ್ಟು 38 ಮಂದಿ ಬೆಟ್ಟಕ್ಕೆ 22 ವಾಹನಗಳಲ್ಲಿ ನೆಡುಂಕಂದಂ ಬೆಟ್ಟ ಸಮೀಪ ಇರುವ ನಲುಮಾಲ ವ್ಯೂ ಪಾಯಿಂಟ್‌ಗೆ ಅವರೆಲ್ಲರೂ ಆಗಮಿಸಿದ್ದರು. ಆಗ ಧಾರಾಕಾರ ಮಳೆ ಸುರಿಯಲಾರಂಭಿಸಿತ್ತು. ಹೀಗಾಗಿ, ಮಳೆಯಿಂದಾಗಿ ಮಂಜು ಕೂಡ ಮುಸುಕಲು ಆರಂಭವಾಗಿತ್ತು. ಇದರಿಂದಾಗಿ ವ್ಯೂ ಪಾಯಿಂಟ್‌ಗೆ ಆಗಮಿಸಿದ್ದವರು ವಾಹನಗಳ ಮೂಲಕ ವಾಪಸ್ ತೆರಳಲು ಅಸಾಧ್ಯವಾಗಿತ್ತು. ಇದರ ಜತೆಗೆ ಕಡಿದಾಗಿರುವ ರಸ್ತೆಯಲ್ಲಿ ಮಣ್ಣು ಸಹಿತ ನೀರು ಧಾರಾಕಾರವಾಗಿ ಹರಿಯಲಾರಂಭಿಸಿತ್ತು. ಹೀಗಾಗಿ, ರಾತ್ರಿಯಿಡೀ ಗುಡ್ಡದ ಮೇಲೆ ಅವರು ಕಾಲ ಕಳೆಯುವಂತಾಗಿತ್ತು. ಹೀಗಾಗಿ, ಪ್ರವಾಸಿಗರ ಪೈಕಿ ಕೆಲವರು ಗುಡ್ಡದ ಮೇಲಿನಿಂದ ನಡೆಯುತ್ತಾ ನೆಡುಮಕಂದಂಗೆ ತೆರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಅವರು ಪೊಲೀಸರು, ಸಾರಿಗೆ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಜತೆಗೂಡಿ ಶನಿವಾರ ಮಧ್ಯಾಹ್ನ 2 ಗಂಟೆಗೆ ವ್ಯೂ ಪಾಯಿಂಟ್‌ಗೆ ತೆರಳಿ, ಸಿಕ್ಕಿ ಹಾಕಿಕೊಂಡಿರುವವರನ್ನು ರಕ್ಷಿಸಿದ್ದಾರೆ. ಮಳೆಗಾಲದಲ್ಲಿ ವ್ಯೂ ಪಾಯಿಂಟ್‌ಗೆ ವಾಹನದಲ್ಲಿ ತೆರಳಲು ನಿಷೇಧ ಹೇರಲಾಗಿದೆ. ಹೀಗಿದ್ದರೂ, ಪ್ರವಾಸಿಗರು ಅಲ್ಲಿಗೆ ತೆರಳಿದ್ದರಿಂದ ಅವರ ಮೇಲೆ ಕೇಸು ದಾಖಲಿಸಲಾಗಿದೆ.
ವಾಹನಗಳನ್ನು ವಶಪಡಿಸಿಕೊಂಡಿದ್ದರೂ, ಅವುಗಳನ್ನು ಮಾಲೀಕರಿಗೆ ಬಿಟ್ಟುಕೊಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಲುಮಾಲ ವ್ಯೂ ಪಾಯಿಂಟ್ ಬಗ್ಗೆ ತಿಳಿದು ಬಂದಿದ್ದರಿಂದ ಅಲ್ಲಿಗೆ ತೆರಳಿದ್ದರು. ಸದ್ಯ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.