ಗಡುವಿನೊಳಗೆ ಮೀಸಲಾತಿ ಅನುಮಾನ
Team Udayavani, Aug 23, 2021, 2:48 PM IST
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎಮೀಸಲಾತಿ ನೀಡುವಂತೆ ಸಮುದಾಯದಸ್ವಾಮೀಜಿಗಳು ಹಾಗೂ ನಾಯಕರು ನೀಡಿದಗಡುವಿನೊಳಗೆ ರಾಜ್ಯ ಸರ್ಕಾರ ನಿರ್ಧಾರಪ್ರಕಟಿಸುವುದು ಅನುಮಾನವಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 6 ತಿಂಗಳಲ್ಲಿ 2ಎಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟಆರಂಭಿಸುವ ಎಚ್ಚರಿಕೆ ನೀಡಿದ್ದ ಕೂಡಲ ಸಂಗಮಪಂಚಮಸಾಲಿ ಪೀಠಾಧ್ಯಕ್ಷರಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಸರ್ಕಾರದ ವಿರುದ್ಧಧ್ವನಿ ಎತ್ತಲು ಸಿದ್ಧರಾಗಿದ್ದಾರೆ.
ವಿಳಂಬ ಸಾಧ್ಯತೆ: ಪಂಚಮಸಾಲಿಸಮುದಾಯಕ್ಕೆ2ಎಮೀಸಲಾತಿ ನೀಡುವ ಕುರಿತು ಸಮುದಾಯದ ಶೈಕ್ಷಣಿಕಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯ ಬಗ್ಗೆಸಾರ್ವಜನಿಕರ ಅಹವಾಲು ಪಡೆದು ಸಮಗ್ರಅಧ್ಯಯನ ನಡೆಸಿ ವರದಿ ನೀಡುವಂತೆ ಆಗಿನಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆನೀಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ಈಗಾಗಲೇಸಂಬಂಧ ಪಟ್ಟ ಸಮುದಾಯದ ಸ್ವಾಮೀಜಿಗಳುಹಾಗೂ ಮುಖಂಡರ ಅಭಿಪ್ರಾಯವನ್ನು ಆಯೋಗದಕಚೇರಿಯಲ್ಲಿ ಪಡೆದುಕೊಂಡಿದೆ.ಆದರೆ, ಪಂಚಮಸಾಲಿ ಸಮುದಾಯ ಶೈಕ್ಷಣಿಕಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಎನ್ನುವುದಕ್ಕೆಪೂರಕವಾದ ಮಾಹಿತಿ ಹಾಗೂ ದಾಖಲೆಯನ್ನುಯಾರೂ ಅಧಿಕೃತವಾಗಿ ನೀಡಿಲ್ಲ ಎಂದು ತಿಳಿದುಬಂದಿದೆ.
ಈಕಾರಣಕ್ಕಾಗಿ ಆಯೋಗ ಪಂಚಮಸಾಲಿಸಮುದಾಯದಜನರಜೀವನ ಶೈಲಿ, ಶಿಕ್ಷಣ ಪಡೆದವರ ಪ್ರಮಾಣ, ಸರ್ಕಾರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮಾಣ, ಉನ್ನತ ಹುದ್ದೆಗಳಲ್ಲಿ ಇರುವಅಧಿಕಾರಿಗಳ ಸಂಖ್ಯೆ, ಈ ಸಮುದಾಯ ಜನರುಹೊಂದಿರುವಕೃಷಿ ಜಮೀನಿನ ಪ್ರಮಾಣ, ರಾಜಕೀಯವಾಗಿ ಸಮುದಾಯಕ್ಕೆ ದೊರೆತಿರುವ ಪ್ರಾತಿನಿಧ್ಯದಕುರಿತು ಸಮಗ್ರ ಮಾಹಿತಿ ಕಲೆ ಹಾಕಲು ಮುಂದಾಗಿದೆಎಂದು ತಿಳಿದುಬಂದಿದೆ.
ರಾಜ್ಯ ಹಿಂದುಳಿದ ವರ್ಗಗಳಆಯೋಗ ಸಂಬಂಧ ಪಟ್ಟ ಇಲಾಖೆಗಳಿಗೆ ಪತ್ರಬರೆದು,ಪಂಚಮಸಾಲಿ ಸಮುದಾ ಯದ ಶಿಕ್ಷಣದ ಪ್ರಮಾಣಎಷ್ಟಿದೆ ಎಂದು ತಿಳಿಯಲು ಎಲ್ಲ ವಿವಿಗಳಿಗೆ ಪತ್ರಬರೆದು ಮಾಹಿತಿ ಕೇಳಿದ್ದಾರೆ, ಉದ್ಯೋಗ,ಕೃಷಿ ಭೂಮಿಹೊಂದಿರುವುದು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಈಸಮುದಾಯದ ಪ್ರಾತಿನಿಧ್ಯದ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಇಲಾಖೆ ಗಳಿಂದ ಆಯೋಗ ಕೇಳಿದೆಎಂಬ ಮಾಹಿತಿ ಲಭ್ಯವಾಗಿದೆ.
ಆಯೋಗದಿಂದ ರಾಜ್ಯ ಪ್ರವಾಸ: ಪಂಚಮ ಸಾಲಿಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪರವಿರೋಧದ ಮಾಹಿತಿ ಸಂಗ್ರಹಿಸ ಲು ರಾಜ್ಯ ಹಿಂದುಳಿದವರ್ಗಗಳ ಆಯೋಗದ ಅಧ್ಯಕ್ಷರು ರಾಜ್ಯಾದ್ಯಂತಪ್ರವಾಸ ಮಾಡಲು ನಿರ್ಧರಿಸಿದಾರೆ ª ಎನ್ನಲಾಗಿದ್ದು,ಕೊರೊನಾ ಎರಡನೇ ಅಲೆಯ ಕಾರಣದಿಂದಇದುವರೆಗೂ ಪ್ರವಾಸ ಕೈಗೊಂಡಿಲ್ಲ ಎನ್ನಲಾಗಿದ್ದು, ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾದನಂತರಜಿಲ್ಲಾವಾರುಪ್ರವಾಸಕೈಗೊಂಡುಸಾರ್ವಜನಿಕರಪರ ವಿರೋಧದ ಅಭಿಪ್ರಾಯ ಸಂಗ್ರಹಿಸಲುಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ರಾಜ್ಯ ಪ್ರವಾಸ ಮಾಡಿ ಜನರಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲುಕನಿಷ್ಠ6ತಿಂಗಳು ಸಮಯ ಬೇಕಾಗುತ್ತದೆ ಎಂಬ ಮಾತುಗಳುಕೇಳಿ ಬರುತ್ತಿವೆ. ಒಂದು ವೇಳೆ,ಕೊರೊನಾ ಮೂರನೇಅಲೆ ಹೆಚ್ಚಾದರೆ, ಅಭಿಪ್ರಾಯ ಸಂಗ್ರಹದ ಪ್ರವಾಸಮುಂದೂಡಿಕೆಯಾಗಿ ಆಯೋಗದ ಕಾರ್ಯಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂಬಮಾಹಿತಿ ಲಭ್ಯವಾಗಿದೆ.ಸೆ.15ಕ್ಕೆ ಗಡುವು ಮುಕ್ತಾಯ: ಪಂಚಮಸಾಲಿಸಮುದಾಯದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಹಾಗೂ ಮುಖಂಡರು ಫೆಬ್ರವರಿ ತಿಂಗಳಲ್ಲಿ 2ಎಮೀಸಲಾತಿಗಾಗಿ ಕೂಡಲ ಸಂಗಮದಿಂದಬೆಂಗಳೂರಿನವರೆಗೂ ಪಾದಯಾತ್ರೆನಡೆಸಿ,ಬೆಂಗಳೂರಿನಲ್ಲಿಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಆಗಿನಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,ಪಂಚಮಸಾಲಿ ಸಮುದಾಯಕ್ಕೆ ಆದಷ್ಟು ಬೇಗ ಮೀಸಲಾತಿಕಲ್ಪಿಸಲು ಸೂಕ್ತಕ್ರಮಕೈಗೊಳ್ಳಲಾಗುವುದು ಎಂದು ಭರವಸೆನೀಡಿದ್ದರು.
ಆ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಸೆ.15ರೊಳಗೆ 2ಎ ಮೀಸಲಾತಿ ಪ್ರಕಟಿಸುವಂತೆ ಗಡುವು ನೀಡಿತಮ್ಮ ಧರಣಿಯನ್ನು ಅಂತ್ಯಗೊಳಿಸಿದ್ಧರು.
ಹಿಂದುಳಿದ ವರ್ಗಗಳ ಆಯೋಗಕ್ಕೆಗಡುವು ನೀಡದ ಸರ್ಕಾರ
ಪಂಚಮಸಾಲಿ ಸಮುದಾಯ ರಾಜ್ಯ ಸರ್ಕಾರಕ್ಕೆ ಆರು ತಿಂಗಳ ಸಮಯ ನೀಡಿದೆ. ಆದರೆ, ರಾಜ್ಯಸರ್ಕಾರ ಈ ಕುರಿತು ಅಧ್ಯಯನ ನಡೆಸಿ Ê ರದಿಸಲ್ಲಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಯಾವುದೇ ಸಮಯದ ಗಡುವು ನೀಡಿಲ್ಲ ಎಂಬಮಾಹಿತಿ ಲಭ್ಯವಾಗಿದೆ. ಹೀಗಾಗಿ ಪಂಚಮಸಾಲಿಸಮುದಾಯ ನೀಡಿದ ಗಡುವಿನೊಳಗೆ 2ಎ ಮೀಸಲಾತಿ ಪ್ರಕಟಿಸುವುದು ಅನುಮಾನ ಎಂಬಮಾತುಗಳು ಕೇಳಿ ಬರುತ್ತಿವೆ.
ಶಂಕರಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.