ಅಂತರ್ಜಾತಿ ವಿವಾಹಿತರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ: ಡಾ. ಸಿದ್ದ
Team Udayavani, Mar 1, 2017, 12:30 PM IST
ಬೆಂಗಳೂರು: ಅಂತರ್ಜಾತಿ ವಿವಾಹವಾದ ವರಿಗೆ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದರೆ ಜಾತೀಯತೆ ಹೋಗಲಾಡಿಸಲು ಪ್ರಯತವಾಗಲಿದೆ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಡಾ.ಎಚ್.ಚಂದ್ರಶೇಖರ ಅವರು ಬರೆದ “ವಚನ ತವನಿಧಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ವಚನಕಾರರರು ಜಾತಿರಹಿತ ಹಾಗೂ ವರ್ಗರಹಿತ ಸಮಾಜದ ಕನಸನ್ನು ಕಂಡಿದ್ದರು. ಆದರೆ ದುರಾದೃಷ್ಟ ವಶಾತ್ ಇಂದಿಗೂ ಜಾತೀಯತೆ ಉಳಿದು ಕೊಂಡಿದೆ. ಹೀಗಾಗಿ ಅಂತರ್ಜಾತಿ ವಿವಾಹ ವಾದವರಿಗೆ ಉದ್ಯೋಗದಲ್ಲಿ ಶೇ.5 ಮೀಸ ಲಾತಿ ಹಾಗೂ ಅವರ ಮಕ್ಕಳಿಗೆ ಶಿಕ್ಷಣದಲ್ಲಿ ಶೇ.5 ಮೀಸಲಾತಿ ನೀಡಿದರೆ, ಜಾತಿ ರಹಿತ ಮೀಸಲಾತಿ ಹೆಚ್ಚಾಗಲಿದ್ದು, ಜಾತೀಯ ತೆಯೂ ಕೊನೆಗಾಣಿಸಲು ಪ್ರಯತ್ನವಾಗಲಿದೆ ಎಂದರು.
ಅಲ್ಲದೆ ದೇಶದಲ್ಲಿ ನಿಜವಾದ ಜಾತ್ಯಾ ತೀತ ಮನೋಭಾವ ಹೆಚ್ಚಾಗಬೇಕಾ ದರೆ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಅಂತರ್ ಜಾತಿ ವಿವಾಹವಾದವರಿಗೆ ಸರ್ಕಾರ ಆರ್ಥಿಕ, ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಅದಲ್ಲದೆ ಸಮಸಮಾಜದ ಸುಧಾರಣೆಗೆ ವಚನಗಳ ಮೂಲಕ ಅಪಾರ ಕೊಡುಗೆ ನಿಡಿದ ವಚನಕಾರರನ್ನು ಗೌರವಿಸಬೇಕಾದಲ್ಲಿ ಸರ್ಕಾರ ಶೀಘ್ರವೇ ಮೌಡ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕನ್ನಡದಲ್ಲೂ ವಚನದ ಮೂಲಕವೂ ದೇವರನ್ನು ಮಾತನಾಡಿಸಬಹುದು ಎಂದು ಕಲಿಸಿಕೊಟ್ಟವರು ವಚನಕಾರರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಇಂದು ವಚನ ಸಾಹಿತ್ಯದ ಅಧ್ಯಯನ ನಡೆಯುತ್ತಿಲ್ಲ. ಇತ್ತೀಚೆಗೆ ಕಪ್ಪತ್ತಗುಡ್ಡ ಹೋರಾಟ ಮುಂದುವರಿದಾಗ ವಚನದ ಮೂಲಕವೇ ಸರ್ಕಾರವನ್ನು ಎಚ್ಚರಿಸಿದ್ದೆ. ಯಾವುದೇ ವಿಚಾರ ಬರಲಿ ಅದಕ್ಕೊಂದು ಸಂಬಂಧ ಕಲ್ಪಿಸುವ ವಚನವಿದೆ. ಇದು ವಚನಕಾರರ ಚಿಂತನೆಗೆ ಸಾಕ್ಷಿ.
-ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿ, ಯಡೆಯೂರು-ಡಂಬಳ ಗದಗ ಸಂಸ್ಥಾನ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.