ಸಚಿವರಿಗೆ ವಸತಿ ಹಂಚಿಕೆ
Team Udayavani, Jul 1, 2018, 3:17 PM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಹದಿನಾರು ಸಚಿವರು ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿ 17 ಮಂದಿಗೆ ಸರ್ಕಾರದಿಂದ ಬೆಂಗಳೂರಿನಲ್ಲಿ ವಸತಿ ಹಂಚಿಕೆ ಮಾಡಲಾಗಿದೆ.
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ನಂ.4 ರೇಸ್ ಕೋರ್ಸ್ ರಸ್ತೆ, ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರಿಗೆ ನಂ.1 ರೇಸ್ ವ್ಯೂ ಕಾಟೇಜ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ನಂ.3 ಕ್ರೆಸೆಂಟ್ ರಸ್ತೆ, ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ಗೆ ನಂ.2 ಕುಮಾರಕೃಪ ದಕ್ಷಿಣ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನಂ.1 ಕುಮಾರಕೃಪ ಪೂರ್ವ, ನಗಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರಿಗೆ ನಂ.1ಜಯಮಹಲ್ ಬಡಾವಣೆ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಯವರಿಗೆ ನಂ.ಬಿ.2 ಜಯಮಹಲ್ ಬಡಾವಣೆ, ಆಹಾರ ಸಚಿವ ಜಮೀರ್ ಅಹ್ಮದ್ ಅವರಿಗೆ ನಂ.ಬಿ.2ಎ ಜಯಮಹಲ್ ಬಡಾವಣೆ, ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ್ ಅವರಿಗೆ ನಂ.5 ಜಯಮಹಲ್ ಬಡಾವಣೆ ಬಂಗಲೆ ಹಂಚಿಕೆ ಮಾಡಲಾಗಿದೆ.
ಗಣಿ ಸಚಿವ ರಾಜಶೇಖರ್ ಬಿ.ಪಾಟೀಲ್ ಅವರಿಗೆ ನಂ.3ಬಿ.ಜಯಮಹಲ್ ಬಡಾವಣೆ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ನಂ.30 ಸ್ಯಾಂಕಿ ರಸ್ತೆ ಹಾಗೂ ಸಾರಿಗೆ ಸಚಿವ ಸಿ.ಡಿ. ತಮ್ಮಣ್ಣ ಅವರಿಗೆ ನಂ.31. ಸ್ಯಾಂಕಿ ರಸ್ತೆ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರಿಗೆ ನಂ.2 ರೇಸ್ ವ್ಯೂ ಕಾಟೇಜ್, ತೋಟಗಾರಿಕಾ ಸಚಿವ ಎಂ.ಸಿ.ಮನಗೋಳಿಯವರಿಗೆ ನಂ.1 ಸಪ್ತ ಸಚಿವರ ನಿವಾಸ, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಯವರಿಗೆ ನಂ.4 ಸಪ್ತ ಸಚಿವರ ನಿವಾಸ, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ನಂ.6 ಸಪ್ತ ಸಚಿವರ ನಿವಾಸ, ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರಿಗೆ ನಂ.7 ಸಪ್ತ ಸಚಿವರ ನಿವಾಸ ಹಂಚಿಕೆ ಮಾಡಲಾಗಿದೆ.
ಬಂಗಲೆ ನಿರಾಕರಿಸಿದ ಯಡಿಯೂರಪ್ಪ
ಬೆಂಗಳೂರು: ಬಯಸಿದ ಬಂಗಲೆ ನೀಡದ ಸಮ್ಮಿಶ್ರ ಸರ್ಕಾರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ
ನಾಯಕ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಬಂಗಲೆ ತಿರಸ್ಕರಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನೂ
ನೀಡಿರುವ ಅವರು, ನಾನು ಇಂದು ನನಗೆ ಕೊಡ ಮಾಡಿದ ನಂಬರ್ 4 ರೇಸ್ ಕೋರ್ಸ್ ಮನೆಯನ್ನು ತಿರಸ್ಕರಿಸಿದ್ದೇನೆ. ನಾನು ಸಿಎಂ ಗಳಿಗೆ ಈ ಹಿಂದೆ ಪತ್ರ ಬರೆದು ರೇಸ್‌ಕೋರ್ಸ್ ರಸ್ತೆಯ ನಂಬರ್ 2 ಮನೆಯನ್ನು ಕೊಡಬೇಕು ಎಂದು ಕೇಳಿದ್ದೆ. ಆದರೆ, ಮುಖ್ಯಮಂತ್ರಿಗಳು ನನ್ನ ಕೋರಿಕೆ ಮನ್ನಿಸದ ಕಾರಣ ಅವರ ನಿರ್ಧಾರವನ್ನು ತಿರಸ್ಕರಿಸಿದ್ದೇನೆ. ನಾನು ಸ್ವಂತ ಮನೆಯಲ್ಲೇ ಇರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್