ಗೌರಿ ಹತ್ಯೆ ಖಂಡಿಸಿ ಪ್ರತಿರೋಧ ಪ್ರತಿಭಟನೆ
Team Udayavani, Oct 3, 2017, 11:57 AM IST
ಬೆಂಗಳೂರು: ಪ್ರಸ್ತುತ ಮಹಾತ್ಮಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಪರಿಸ್ಥಿತಿ ಇಲ್ಲ. ಗೌರಿ ಲಂಕೇಶ್ ಹತ್ಯೆ ನಡೆದು ಒಂದು ತಿಂಗಳಾದರೂ ಹಂತಕರಿನ್ನೂ ಪತ್ತೆಯಾಗಿಲ್ಲ. ಕೂಡಲೇ ತನಿಖೆ ಚುರುಕುಗೊಳಿಸುವಂತೆ “ನಾನು ಗೌರಿ ಬಳಗ’ ಒತ್ತಾಯಿಸಿದೆ.
ನಗರದ ಮೌರ್ಯ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ನಾನು ಗೌರಿ ಬಳಗದ ನೇತೃತ್ವದಲ್ಲಿ ಕರ್ನಾಟಕ ಲೇಖಕಿಯರ ಸಂಘ, ಕೋಮುಸೌಹಾರ್ದ ವೇದಿಕೆ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿರೋಧ ಪ್ರತಿಭಟನೆ ನಡೆಸಿ, “ಗಾಂಧಿಯಿಂದ ಗೌರಿವರೆಗೂ ವಿಚಾರವಂತರ ಹತ್ಯೆಗಳು ನಡೆಯುತ್ತಲೇ ಇವೆ. ಸರ್ಕಾರಗಳು ಹಂತಕರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ವಿಫಲವಾಗಿವೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ಸಂಚಾಲಕಿ ಕೆ.ನೀಲಾ ಮಾತನಾಡಿ, ಸಂಘ ಪರಿವಾರದ ಸಂಪರ್ಕದಲ್ಲಿ ಇರುವವರೇ ಗೌರಿ ಲಂಕೇಶ್ ಹತ್ಯೆ ನಡೆಸಿದ್ದಾರೆ. ಹಂತಕರನ್ನು ಪತ್ತೆ ಮಾಡಿ, ಅವರ ಹಿಂದಿರುವ ಶಕ್ತಿಯನ್ನು ದಮನ ಮಾಡದಿದ್ದರೆ, ವಿಚಾರವಾದಿಗಳ ಹತ್ಯೆ ಸರಣಿ ಬೆಳೆಯುತ್ತಲೇ ಹೋಗುತ್ತದೆ. ವ್ಯಕ್ತಿಗಳ ಹತ್ಯೆಯಿಂದ ವಿಚಾರಗಳ ಅಂತ್ಯ ಸಾಧ್ಯವಿಲ್ಲ.
ಅದು ಹೆಮ್ಮರವಾಗಿ ಬೆಳೆಯುತ್ತದೆ ಎಂಬುದನ್ನು ಹಂತಕರು ಮೊದಲು ತಿಳಿಯಬೇಕು. ಎಸ್‌ಐಟಿ ತನಿಖೆ ತೀವ್ರಗೊಳಿಸಿ ಗೌರಿ ಲಂಕೇಶ್ ಹಂತಕರನ್ನು ಬಂಧಿಸಬೇಕು. ವಿಚಾರವಾದಿಗಳು, ಕೋಮುಸೌಹಾರ್ದತೆಗೆ ಮಹತ್ವ ನೀಡುವವರ ವಿರುದ್ಧ ದ್ವೇಷ ಹರಡುವ, ಹತ್ಯೆಗೆ ಪ್ರಚೋದಿಸುವವನ್ನು ಬಂಧಿಸಿ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಮಾತನಾಡಿ, ದಾಬೋಲ್ಕರ್, ಕಲಬುರ್ಗಿ, ಗೌರಿಲಂಕೇಶ್ ಸೇರಿದಂತೆ ನಾಲ್ಕು ಮಂದಿ ವಿಚಾರವಾದಿಗಳನ್ನು ಹತ್ಯೆ ಮಾಡಿದ ಹಂತಕರನ್ನು ಪತ್ತೆ ಮಾಡಬೇಕು. ಒಬ್ಬ ಗೌರಿಯ ಹತ್ಯೆಯಿಂದ ದುಷ್ಕರ್ಮಿಗಳು ಸಂಭ್ರಮಿಸಿರಬಹುದು. ಆದರೆ, ಹತ್ಯೆಯ ದಿನದಿಂದಲೇ ಸಾವಿರಾರು ಗೌರಿಯರು ಹುಟ್ಟಿಕೊಂಡಿದ್ದಾರೆ. ಸತ್ಯ, ಅಹಿಂಸೆ, ಸಹಿಷ್ಣುತೆಗೆ ಇಡೀ ವಿಶ್ವಕ್ಕೆ ಆದರ್ಶರಾದ ಗಾಂಧಿ ಹುಟ್ಟಿದ ರಾಷ್ಟ್ರದಲ್ಲಿ ಹಂತಕರು, ಹತ್ಯೆಗೆ ಸುಪಾರಿ ಕೊಟ್ಟವರು ಹುಟ್ಟಿಕೊಂಡಿರುವುದು ದೊಡ್ಡ ಅವಮಾನ.
ಇವರಿಂದ ವಿಶ್ವದ ಮುಂದೆ ಭಾರತ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಲಿಂಗಾಯತ ಧರ್ಮದ ಪರವಾಗಿದ್ದರಿಂದ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಅಂತೆಯೇ ತಮ್ಮ ಪತ್ರಿಕೆಯಲ್ಲಿ ಅದೇ ವಿಚಾರವಾಗಿ ಲೇಖನ ಬರೆದಿದ್ದರಿಂದ ಗೌರಿ ಹತ್ಯೆಯಾಗಿದೆ ಎಂಬ ಸಂಶಯವಿದೆ. ಎಸ್‌ಐಟಿ ತನಿಖೆ ಚುರುಕುಗೊಳಿಸಿ ಹಂತಕರನ್ನು ಬುಡಸಮೇತ ಕಿತ್ತುಹಾಕಬೇಕು. ಸರ್ಕಾರ ತನಿಖೆ ಚುರುಕುಗೊಳಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಶರೀಫ, ನಗರಗೆರೆ ರಮೇಶ್, ಶರತ್ ಅನಂತಮೂರ್ತಿ, ಗೌರಮ್ಮ, ಜ್ಯೋತ್ಸಾ, ಜಿ.ಎನ್.ನಾಗರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.