ಅಲ್ಪಸಂಖ್ಯಾಕರ ಮೇಲಣ ಪ್ರಕರಣ ವಾಪಸ್:ಸರಕಾರದಿಂದ ಯೂಟರ್ನ್ ; ಶೋಭಾ
Team Udayavani, Jan 29, 2018, 6:45 AM IST
ಬೆಂಗಳೂರು: ಅಲ್ಪಸಂಖ್ಯಾಕ ಸಮುದಾಯದವರ ವಿರುದ್ಧದ ಪ್ರಕರಣ ವಾಪಸ್ ಪಡೆಯುವ ಸುತ್ತೋಲೆ ಹೊರಡಿಸಿದ್ದ ಕಾಂಗ್ರೆಸ್ ಸರಕಾರ ಬಿಜೆಪಿ ಹೋರಾಟದ ಹಿನ್ನೆಲೆಯಲ್ಲಿ ಕಂಗಾಲಾಗಿ ಈ ವಿಷಮ ಪರಿಸ್ಥಿತಿಯಿಂದ ಪಾರಾಗಲು ಯತ್ನಿಸಿ ಯೂ ಟರ್ನ್ ಹೊಡೆಯುವ ಮೂಲಕ ಮುಖಭಂಗ ಅನುಭವಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಈ ಮಧ್ಯೆ ಶನಿವಾರ ಸಂಜೆ ಹೊರಡಿಸಿದ ಸುತ್ತೋಲೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಅವರು ಹಿಂದಿನ ಸುತ್ತೋಲೆಯಲ್ಲಿ ನಮೂದಿಸಲಾದ ಅಮಾಯಕ ಮುಸ್ಲಿಂ ವಿರುದ್ಧದ ಪ್ರಕರಣಗಳನ್ನು ಎಂಬ ಶಬ್ದದ ಬದಲಿಗೆ ಎಲ್ಲಾ ಅಮಾಯಕರ ವಿರುದ್ಧದ ಪ್ರಕರಣಗಳನ್ನು ಎಂದು ನಮೂದಿಸಲಾಗಿದೆ. ಅಮಾಯಕರು ಎಂಬ ಶಬ್ದಕ್ಕೆ ಸರಕಾರ ನೀಡುವ ವಿವರಣೆಯೇನು? ವಾಸ್ತವವಾಗಿ ಅಪರಾಧಿಯೇ ಅಥವಾ ನಿರಪರಾಧಿಯೇ ಎಂದು ತೀರ್ಮಾನಿಸಬೇಕಾಗಿರುವುದು ನ್ಯಾಯಾಲಯ. ನ್ಯಾಯಾಲಯದ ಈ ಅಧಿಕಾರ ವ್ಯಾಪ್ತಿಯನ್ನು ಆಕ್ರಮಿಸಿ ಸರಕಾರ ಯಾರನ್ನಾದರೂ ನಿರಪರಾಧಿ ಅಥವಾ ಅಮಾಯಕ ಎಂದು ನಿರ್ಧರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.